ಭಾರತ ಮತ್ತು ಬಾಂಗ್ಲಾ ನಡುವೆ 'ಮೈತ್ರಿ ದಿವಸ್'

By Suvarna NewsFirst Published Sep 8, 2021, 5:04 PM IST
Highlights

*  ಅನುರಾಗ್ ಠಾಕೂರ್ ಮತ್ತು ಡಾ. ಹಸನ್ ಮಹಮದ್ ಭೇಟಿ
* ಮನರಂಜನೆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ
* ಭಾರತ ಮತ್ತು ಬಾಂಗ್ಲಾ ನಡುವಿನ ಬಾಂಧವ್ಯ ವೃದ್ಧಿ
* ಸಿನಿಮಾ ನಿರ್ಮಾಣ ಮತ್ತು ಮೈತ್ರಿ ದಿವಸ್ ಆಚರಣೆ 

ನವದೆಹಲಿ(ಸೆ. 08)  ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಬಾಂಗ್ಲಾದೇಶದ ವಾರ್ತಾ ಮತ್ತು ಪ್ರಸಾರ ಸಚಿವ  ಡಾ. ಹಸನ್ ಮಹಮದ್ ಪರಸ್ಪರ ಭೇಟಿ  ಮಾಡಿದ್ದಾರೆ.

ಎರಡೂ ದೇಶಗಳ ನಡುವೆ ಪ್ರಸಾರ ಮತ್ತು ಮನೋರಂಜನಾ ಕ್ಷೇತ್ರದ ಬಲವರ್ಧನೆ, ಜನರಿಂದ ಜನರ ನಡುವಿನ ಬಾಂಧವ್ಯ ವರ್ಧನೆ, ಎರಡೂ  ದೇಶಗಳ ನಡುವಿನ ಸಾಪ್ಟ್ ಪವರ್ ಇಂಟರ್ಫೇಸ್ ಸಾಮರ್ಥ್ಯವನ್ನು ಅನ್ವೇಷಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.

2021 ರ ಮಾರ್ಚ್ ನಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭ ಮಾಡಿಕೊಂಡಿದ್ದ ಒಪ್ಪಂದಗಳ ಪುನರ್ ವಿಮರ್ಶೆ ಮಾಡಲಾಯಿತು.

ಬಾಂಗ್ಲಾ ಯುದ್ಧದ ಹೀರೋ ಕನ್ನಡಿಗ ಗೋಪಾಲ್ ರಾವ್ ಜೀವನ ಸಾಧನೆ

ಶೇಖ್ ಮುಜಿಬುರ್ ರೆಹಮಾನ್ ಅವರ ಕಾಲದ ಮತ್ತು ಜೀವನ ಕುರಿತ 'ಬಂಗಬಂಧು' ಚಲನಚಿತ್ರ ನಿರ್ಮಾಣಕ್ಕೆ ಅನುರಾಗ್ ಠಾಕೂರ್ ತೃಪ್ತಿ ವ್ಯಕ್ತಪಡಿಸಿದರು ಮತ್ತು ಚಲನಚಿತ್ರದ ಪ್ರಮುಖ ಭಾಗದ ನಿರ್ಮಾಣ ಪೂರ್ಣಗೊಂಡಿದೆ. 2022 ರ ಮಾರ್ಚ್ ವೇಳೆಗೆ ಚಲನಚಿತ್ರ ನಿರ್ಮಾಣ ಪೂರ್ಣಗೊಳ‍್ಳಲಿದೆ ಹಾಗೂ ಕೋವಿಡ್ ಪರಿಸ್ಥಿತಿ ಅನುಮತಿ ಕೊಟ್ಟರೆ 2022 ರ ಮಾರ್ಚ್ ವೇಳೆಗೆ ಚಲನಚಿತ್ರ ಜಾಗತಿಕವಾಗಿ ಬಿಡುಗಡೆಯಾಗಲಿದೆ.

'1971 ರ ಬಾಂಗ್ಲಾದೇಶ ವಿಮೋಚನೆ ' ಕುರಿತ ಸಾಕ್ಷ್ಯಚಿತ್ರ ನಿರ್ಮಾಣವನ್ನು ಸಕ್ರಿಯವಾಗಿ ಮುಂದುವರಿಸಲು ಸಮ್ಮತಿಸಲಾಗಿದೆ. ಡಿಜಿಟಲ್ ಮನೋರಂಜನೆ ಮತ್ತು ಪರಸ್ಪರ ವಿನಿಮಯ ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಬಗ್ಗೆಯೂ ಚರ್ಚೆಗಳು ನಡೆದವು.  

ಪರಸ್ಪರ ಒಪ್ಪಿತ ಕ್ರಿಯಾ ಯೋಜನೆ ಮೂಲಕ 2021 ರಂದು 'ಮೈತ್ರಿ ದಿವಸ್' ಆಚರಣೆಗೆ ಇಬ್ಬರೂ ಸಚಿವರು ಚರ್ಚೆ ನಡೆಸಿದ್ದು, ಇದಕ್ಕೆ ಸಮ್ಮತಿಸಿದ್ದಾರೆ. 2021 ರ ಜನವರಿಯಲ್ಲಿ ನಡೆದ 51ನೇ ಐ.ಎಫ್.ಎಫ್.ಐ ನಲ್ಲಿ ಬಾಂಗ್ಲಾದೇಶ ಸರ್ಕಾರ ಪಾಲ್ಗೊಂಡಿದ್ದಕ್ಕೆ ಠಾಕೂರ್ ಧನ್ಯವಾದ ಸಲ್ಲಿಸಿದರು. ನವೆಂಬರ್  ನಲ್ಲಿ ಗೋವಾದಲ್ಲಿ ನಡೆಯಲಿರುವ 52ನೇ ಐ.ಎಫ್.ಎಫ್.ಐ ನಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಯಿತು. ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಜನರ ನಡುವಿನ ಬಾಂಧವ್ಯ ಬಲಪಡಿಸಲು ಇಬ್ಬರೂ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

click me!