ಬೋರ್‌ವೆಲ್‌ ಹೊಡೆದು ನೀರು ಕುಡಿಯಿತು ಆನೆ!

By Kannadaprabha NewsFirst Published Sep 8, 2021, 12:14 PM IST
Highlights
  • ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ
  • ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ

ಬೆಂಗಳೂರು (ಸೆ.08):  ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ. ಆದರೆ ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ!

 

एक हाथी भी की एक-एक का महत्व समझता है। फिर हम इंसान क्यों इस अनमोल रत्न को व्यर्थ करते हैं?
आइए, आज इस जानवर से सीख लें और करें। pic.twitter.com/EhmSLyhtOI

— Ministry of Jal Shakti 🇮🇳 #AmritMahotsav (@MoJSDoWRRDGR)

 ತನಗೆ ಬೇಕಿರುವಷ್ಟುನೀರು ಬರುವವರೆಗೆ ಬೋರ್‌ವೆಲ್‌ ಹೊಡೆಯುವ ಆನೆಯು, ಬಳಿಕ ಅದೇ ನೀರನ್ನು ಕುಡಿದ ವಿಡಿಯೋವನ್ನು ಕೇಂದ್ರ ಜಲಶಕ್ತಿ ಇಲಾಖೆ ತನ್ನ ಅಧಿಕೃತ ಟ್ವೀಟರ್‌ ಖಾತೆಯಿಂದ ಹಂಚಿಕೊಂಡಿದ್ದು, ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಆದರೆ ಯಾವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಗೊತ್ತಾಗಿಲ್ಲ
 

click me!