
ನವದೆಹಲಿ (ಸೆ.08): 2021ರ ಮೊದಲ 8 ತಿಂಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ ದೂರುಗಳ ಪ್ರಮಾಣದಲ್ಲಿ 2021ರಲ್ಲಿ ಶೇ.46 ಹೆಚ್ಚಾಗಿದೆ.
ಇದರಲ್ಲಿ ಅರ್ಧದಷ್ಟು ದೂರುಗಳು ಉತ್ತರಪ್ರದೇಶದಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ. 8 ತಿಂಗಳಲ್ಲಿಲ 19,953 ದೂರು ಬಂದಿವೆ.
'ಆನ್ ಲೈನ್‌ನಲ್ಲಿ ಮುಸ್ಲಿಂ ಸ್ತ್ರೀಯರ ಮಾರಾಟ' ವಿವರಣೆ ಕೇಳಿದ ಮಹಿಳಾ ಆಯೋಗ
ಕಳೆದ ವರ್ಷ 13,618ದೂರುಗಳು ದಾಖಲಾಗಿತ್ತು. ಈ ವರ್ಷದ ಜುಲೈ ತಿಂಗಳಲ್ಲಿ ದಾಖಲೆಯ 3,248 ದೂರುಗಳು ಬಂದಿವೆ ಎಂದು ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.
7 ಸಾವಿರ ದೂರುಗಳು ಘನತೆಯ ಬದುಕಿನ ಹಕ್ಕಿನಡಿ ದಾಖಲಾಗಿದ್ದರೆ, ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ 4,289 ದೂರುಗಳುಬಂದಿವೆ. ವಿವಾಹಿತೆಯರ ಅಥವಾ ವರದಕ್ಷಿಣೆ ದೌರ್ಜನ್ಯದಡಿ 2,923 ಕೇಸುಗಳು ದಾಖಲಾಗಿವೆ ಎಂದಿದ್ದಾರೆ. ಯುಪಿ(10,084), ದೆಹಲಿ(2147)ಹರಾರಯಣದಲ್ಲಿ 995 ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ