ಇದೇನಾಗುತ್ತಿದೆ... ಮಮತಾ ಆ ದೊಡ್ಡ ಆಸೆಗೆ ಅಸ್ತು ಎಂದ ಅಮಿತ್ ಶಾ!

By Suvarna NewsFirst Published Jun 2, 2020, 5:22 PM IST
Highlights

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ/ ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ/ ಮಮತಾ ಬ್ಯಾನರ್ಜಿಗೆ ಸರಿಯಾದ ಟಾಂಗ್/ ಮಮತಾ ಆಸೆಯಂತೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರಲಿದೆ!
 

ನವದೆಹಲಿ(ಜೂ .02)  ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಪೂರ್ಣ ಬಹುಮತದ ಸರ್ಕಾರ ಸ್ಥಾಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ, ಒಂದು ವೇಳೆ ಮಮತಾ ಬ್ಯಾನರ್ಜಿ ಬಿಜೆಪಿಯೇ ಸರ್ಕಾರ ರಚನೆ ಮಾಡಬೇಕು ಎಂದು ಬಯಸಿದರೆ ಹಾಗೇ ಆಗುತ್ತದೆ.  ಮಮತಾ ಅವರ ಮಾತು ನಿಜವಾಗುವ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೆರವು ನೀಡಿಲ್ಲ. ಏಕಾಏಕಿ ಲಾಕ್ ಡೌನ್ ಮಾಡಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯಗಳ ಅಭಿಪ್ರಾಯವನ್ನು ಕೇಂದ್ರ ಗಣನೆಗೆ ತೆಗೆದುಕೊಂಡಿಲ್ಲ.  ನಾನು ಹಿಂದೆಯೇ ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೆ, ರಾಜ್ಯ ಸರ್ಕಾರಗಳು ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ ಎಂದಾದರೆ ಅವರಿಂದಲೂ (ಕೇಂದ್ರ) ಸಾಧವ್ಯವಿಲ್ಲವೇ? ಎಂದು ಮಮತಾ ಪ್ರಶ್ನೆ ಮಾಡಿದ್ದರು.

ರಾಜಾಹುಲಿ ಯಡಿಯೂರಪ್ಪಗೆ ಅಮಿತ್ ಶಾ ಅಭಯ

ಇದು ರಾಜಕಾರಣ ಮಾಡುವ ಸಮಯ ಅಲ್ಲ. ಈ ವಲಸೆ ಕಾರ್ಮಿಕರನ್ನು ಎಲ್ಲಿ ಕ್ವಾರಂಟೈನ್ ಮಾಡಿ ಇಡಬೇಕು? ಕೊರೊನಾ ಪ್ರಕರಣ ಏರುತ್ತಿರುವುದಕ್ಕೆ ಯಾರು ಜವಾಬ್ದಾರಿ? ಚಂಡಮಾರುತ ಮತ್ತು ಕೊರೋನಾ ಹೊಡೆತಕ್ಕೆ ಬಂಗಾಳ ನಲುಗಿದೆ.  ಹಾಗಾಗಿ ರಾಜ್ಯಗಳಲ್ಲಿ ಕೊರೋನಾ ಹರಡುತ್ತಿರುವ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗಂಭೀರ ಚಿಂತನೆ ಮಾಡಬೇಕು ಎಂದು ಮಮತಾ ಒತ್ತಾಯಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಶಾ, ನಾನು ಬಂಗಾಳವನ್ನು ಮುನ್ನೆಡಸಲು ಸಾಧ್ಯವಿಲ್ಲ, ಯಾಕೆಂದರೆ ನಾನೊಬ್ಬ ಸಂಸದ. ಆದರೆ ನಾನು ಒಂದು ಭರವಸೆ ನೀಡಬಲ್ಲೆ. 2021ಕ್ಕೆ ಬಂಗಾಳದಲ್ಲಿ ಅವರ ಆಸೆಯಂತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಬಂಗಾಳದಲ್ಲಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದುರಾಡಳಿತಕ್ಕೆ ಜನ ಸಾಮಾನ್ಯರು ಬೇಸತ್ತಿದ್ದಾರೆ. ಹೀಗಾಗಿ ಜನ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು  ಅಮಿತ್  ಶಾ ಹೇಳಿದ್ದಾರೆ. 

click me!