ಅನ್‌ಲಾಕ್‌ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್; ಶೀಘ್ರವೇ ನಿರ್ಬಂಧ ಜಾರಿಗೆ ಕೇಂದ್ರ ಸೂಚನೆ!

By Suvarna NewsFirst Published Jun 26, 2021, 5:31 PM IST
Highlights
  • ಕೊರೋನಾ ವೈರಸ್ 2ನೇ ಅಲೆ ತಗ್ಗಿದ ಕಾರಣ ಕರ್ನಾಟಕದಲ್ಲಿ ಅನ್‌ಲಾಕ್ ಆರಂಭ
  • ಡೆಲ್ಟಾ ಪ್ಲಸ್ ವೇರಿಯೆಂಟ್ ಪತ್ತೆಯಾದ ಹಿನ್ನಲೆ ರಾಜ್ಯಕ್ಕೆ ಕೇಂದ್ರದ ಮಹತ್ವದ ಸೂಚನೆ
  • ಮತ್ತೆ ಜಾರಿಯಾಗುತ್ತಾ ಒಂದೊಂದೆ ನಿರ್ಬಂಧ?

ಬೆಂಗಳೂರು(ಜೂ.26): ಕೊರೋನಾ ವೈರಸ್ 2ನೇ ಅಲೆ ತಗ್ಗಿದ ಪರಿಣಾಮ ಕರ್ನಾಟಕದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಹಂತ ಹಂತವಾಗಿ ಕರ್ನಾಟಕದಲ್ಲಿ ನಿರ್ಬಂಧ ತೆರೆವುಗೊಳಿಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ ಅನ್‌ಲಾಕ್ ಆಗುತ್ತಿದ್ದಂತೆ ಇದೀಗ ಅತ್ಯಂತ ಅಪಾಯಾಕಾರಿ ಡೆಲ್ಟಾ ಪ್ಲಸ್ ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ, ರಾಜ್ಯಕ್ಕೆ ಕೆಲ ನಿರ್ಬಂಧ ವಿಧಿಸಲು ಸೂಚನೆ ನೀಡಿದೆ.

ಕೊರೋನಾ ಗುಣಮುಖ, 2 ಡೋಸ್ ಲಸಿಕೆ ಪಡೆದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ಪತ್ತೆ!

ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಳ್ಳುತ್ತಿದೆ. ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ  ರಾಜೇಶ್ ಭೂಷಣ್, ಕರ್ನಾಟಕಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಕಾರ್ಯದರ್ಶಿ ಪಿ ರವಿಕುಮಾರ್‌ಗೆ ಬರೆದಿರುವ ಪತ್ರದಲ್ಲಿ, ಡೆಲ್ಲಾ ಪ್ಲಸ್ ವೈರಸ್ ಪತ್ತೆಯಾಗುತ್ತಿರುವ ಕಾರಣ ಕಂಟೈನ್ಮೆಂಟ್ ಝೋನ್ ನಿರ್ಬಂಧ ಜಾರಿಗೆ ತರಲು ಸೂಚಿಸಿದ್ದಾರೆ.

ಡೆಲ್ಟಾ ಪ್ಲಸ್ ವೇರಿಯೆಂಟ್ ಹಾಗೂ ಜಿಲ್ಲೆಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಕಾರಣ ತಕ್ಷಣವೆ ಹೆಚ್ಚಿನ ಪರೀಕ್ಷೆಗಳನ್ನು ಮಾಡಿ ಕಂಟೈನ್ಮೆಂಟ್ ಝೋನ್ ನಿರ್ಬಂಧ ಹೇರಲು ಸೂಚಿಸಲಾಗಿದೆ. ಜೊತೆಗೆ ಜಿಲ್ಲೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಮಾರುಕಟ್ಟೆ, ಸಭೆ ಸಮಾರಂಭಗಳು ಮಿತಿಗಿಂತ ಹೆಚ್ಚಿನ ಜನ ಸೇರುತ್ತಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಹೀಗಾಗಿ ತಕ್ಷಣವೇ ಕಂಟೈನ್ಮೆಂಟ್ ಝೋನ್ ಜಾರಿಗೆ ತನ್ನಿ. ಇನ್ನು ಕಟ್ಟುನಿಟ್ಟಿನ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಿ ಎಂದು ಕರ್ನಾಟಕಕ್ಕೆ ಸೂಚಿಸಲಾಗಿದೆ.

ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!

ಡೆಲ್ಟಾ ಪ್ಲಸ್ ವೇರಿಯೆಂಟ್ ಅತೀ ವೇಗದಲ್ಲಿ ಹರಡುತ್ತಿದೆ. ಅಷ್ಟೇ ವೇಗದಲ್ಲಿ ಶ್ವಾಸಕೋಶಕ್ಕೆ ಅವರಿಸಿಕೊಳ್ಳುತ್ತಿದೆ. ಕೊರೋನಾ ವೈರಸ್ ಪೈಕಿ ಡೆಲ್ಟಾ ಪ್ಲಸ್ ಅತ್ಯಂತ ಅಪಾಯಕಾರಿ ಅನ್ನೋದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಕ್ಕೆ ಪತ್ರದಲ್ಲಿ ಸೂಚಿಸಲಾಗಿದೆ.

click me!