ವರದಕ್ಷಿಣೆಗಾಗಿ ಪತ್ನಿ ಮೇಲೆ ದೈಹಿಕ ಹಲ್ಲೆ: ಬಿಜೆಪಿ ಶಾಸಕನ ವಿರುದ್ಧ ದೂರು

Published : Jun 26, 2021, 05:23 PM ISTUpdated : Jun 26, 2021, 05:32 PM IST
ವರದಕ್ಷಿಣೆಗಾಗಿ ಪತ್ನಿ ಮೇಲೆ ದೈಹಿಕ ಹಲ್ಲೆ: ಬಿಜೆಪಿ ಶಾಸಕನ ವಿರುದ್ಧ ದೂರು

ಸಾರಾಂಶ

ಪತ್ನಿಯ ಮೇಲೆ ದೈಹಿಕ ಹಲ್ಲೆ ಮಾಡಿದ ಆರೋಪ ಪತ್ನಿಯಿಂದಲೇ ಆರೋಪ ಎದುರಿಸುತ್ತಿರೋ ಬಿಜೆಪಿ ಶಾಸಕ

ಧರ್ಮಶಾಲಾ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ವಿರುದ್ಧ ಪತ್ನಿಯೇ ಆರೋಪ ಮಾಡಿದ್ದಾರೆ. ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ.

ಎಚ್‌ಪಿಎಎಸ್ ಅಧಿಕಾರಿಯಾಗಿರೋ ಶಾಸಕರ ಪತ್ನಿ ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದೀಗ 11 ನಿಮಿಷದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2020 ಬ್ಯಾಚ್‌ನ ಹಿಮಾಚಲ ಪ್ರದೇಶ ಆಡಳಿತ ಸೇವಾ ಅಧಿಕಾರಿ ಆಗಿರೋ ಒಶಿನ್ ಶರ್ಮಾ ಬಿಜೆಪಿ ಶಾಸಕ ತನಗೆ ಮೂರು ಬಾರಿ ಹೊಡೆದಿರುವುದಾಗಿ ಆರೋಪ ಮಾಡಿದ್ದಾರೆ.

ನೆಹ್ರಿಯಾ ಮತ್ತು ಶರ್ಮಾ ಎರಡು ತಿಂಗಳ ಹಿಂದೆ ಏಪ್ರಿಲ್ 26 ರಂದು ವಿವಾಹವಾಗಿದ್ದಾರೆ. ಶರ್ಮಾ ಅವರು ಈಗ ತಮ್ಮ ತಾಯಿಯ ಮನೆಗೆ ಮರಳಿದ್ದಾರೆ ಎಂದು ಹೇಳಿದ್ದಾರೆ.

ಗಂಗಾವತಿ: ವರದಕ್ಷಿಣೆ ಕಿರುಕುಳ, ನೇಣು ಬಿಗಿದು ಗರ್ಭಿಣಿ ಕೊಲೆ

ಈ ವರ್ಷದ ಫೆಬ್ರವರಿಯಲ್ಲಿ ಚಂಡೀಗಡ ಹೋಟೆಲ್‌ವೊಂದರಲ್ಲಿ ನೆಹ್ರಿಯಾ ತನ್ನನ್ನು ಥಳಿಸಿದ್ದಾನೆ ಎಂದು ಎಚ್‌ಪಿಎಎಸ್ ಅಧಿಕಾರಿ ಹೇಳಿದ್ದಾರೆ. ಆದರೆ ಆರೋಪದ ಬಗ್ಗೆ ಶಾಸಕರು ಪ್ರತಿಕ್ರಿಯಿಸಿಲ್ಲ. 2019 ರ ಅಕ್ಟೋಬರ್ 24 ರಂದು ನಡೆದ ಉಪಚುನಾವಣೆಯಲ್ಲಿ ನೆಹ್ರಿಯಾ (32) ಧರ್ಮಶಾಲಾದ ಶಾಸಕರಾಗಿ ಆಯ್ಕೆಯಾದರು.

COVID-19 ಗೆ ಪಾಸಿಟಿವ್ ಬಂದಾಗ ಪತಿ ತಮ್ಮ ಮದುವೆಯ ನಾಲ್ಕನೇ ದಿನದಂದು ತನ್ನ ಮನೆಯಿಂದ ಹೊರಹಾಕಿದ್ದರು ಎಂದು ಶರ್ಮಾ ಆರೋಪಿಸಿದ್ದಾರೆ. ತನಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಹಿಂದಿರುಗಲು ಒಪ್ಪಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಎಚ್‌ಪಿಎಎಸ್ ಅಧಿಕಾರಿ ತಮ್ಮ ಕಾಲೇಜು ದಿನಗಳಿಂದಲೂ ನೆಹರಿಯಾಳನ್ನು ತಿಳಿದಿದ್ದಾರೆ ಎಂದು ಹೇಳಿದ್ದಾರೆ. ನೆಹರಿಯಾ ಅವರು ಶಾಸಕರಾದ ನಂತರ 2019 ರಲ್ಲಿ ಅವರನ್ನು ಮದುವೆಯಾಗುವಂತೆ ಶರ್ಮಾ ಅವರನ್ನು ಕೇಳಿಕೊಂಡಿದ್ದರು. ಅವರು ತಮ್ಮ ಬಗ್ಗೆ ನಿಜವಾದ ಆಸಕ್ತಿ ಹೊಂದಿದ್ದಾರೆಂದು ಅವರು ಭಾವಿಸಿದ್ದರಿಂದ ಶರ್ಮಾ ವಿವಾಹಕ್ಕೆ ಒಪ್ಪಿಕೊಂಡಿದ್ದರು.

ಶರ್ಮಾ ತನ್ನ ಅತ್ತೆ ಮನೆಯವರು ವರದಕ್ಷಿಣೆ ಕೋರಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಪೋಷಕರು ಮದುವೆಯ ಸಮಯದಲ್ಲಿ 1.20 ಲಕ್ಷ ರೂ.ಗಳ ಚಿನ್ನ ಮತ್ತು 1 ಲಕ್ಷ ಮೌಲ್ಯದ ಉಂಗುರವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು