NIA in Bengaluru : ಬೆಂಗಳೂರಿನಲ್ಲಿ ಎನ್ಐಎ ಕಚೇರಿ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ

Suvarna News   | Asianet News
Published : Jan 05, 2022, 01:19 PM IST
NIA in Bengaluru : ಬೆಂಗಳೂರಿನಲ್ಲಿ ಎನ್ಐಎ ಕಚೇರಿ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ

ಸಾರಾಂಶ

ರಾಷ್ಟ್ರೀಯ ತನಿಖಾ ಸಂಸ್ಥೆ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆ ಈಗಾಗಲೇ ಒಪ್ಪಿಗೆ ನೀಡಿರುವ ಕೇಂದ್ರ ಸರ್ಕಾರ 50 ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲು ಅನುಮತಿ


ಬೆಂಗಳೂರು (ಜ.4): ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ (Bangalore) ಎದುರಾಗುತ್ತಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ (Central government) ಹಣಕಾಸು ಇಲಾಖೆಯ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕಚೇರಿಯನ್ನು ತೆರೆಯಲು ಒಪ್ಪಿಗೆ ನೀಡಿದೆ. ಕೇಂದ್ರ ಗೃಹ ಇಲಾಖೆಯೊಂದಿಗೆ ಹಣಕಾಸು ಇಲಾಖೆ ಈ ಕುರಿತಂತೆ ಒಪ್ಪಂದಕ್ಕೂ ಸಹಿ ಹಾಕಿದೆ. ಪ್ರಮುಖವಾಗಿ ಭಯೋತ್ಪಾದನೆ ಕುರಿತಾದ ಚಟುವಟಿಕೆಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಎನ್ ಐಎ (National Investigation Agency), ಬೆಂಗಳೂರಿನಲ್ಲಿ ಸ್ಥಾಪಿಸಲಿರುವ ಕಚೇರಿಯಲ್ಲಿ 50 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ಸಿಕ್ಕಿದೆ. ಬೆಂಗಳೂರು ಮಾತ್ರವಲ್ಲದೆ ದೇಶದ 6 ನಗರಗಳಲ್ಲಿ ಎನ್ ಐಎ (NIA) ಹೊಸ ಕಚೇರಿ ತೆರೆಯಲಿದೆ. ಬೆಂಗಳೂರು, ಅಹಮದಾಬಾದ್(Ahmedabad), ಪಟನಾ (Patna), ಜೈಪುರ (Jaipur), ಭೋಪಾಲ್ (Bhopal )ಮತ್ತು ಭುವನೇಶ್ವರದಲ್ಲಿ (Bhubaneswar) ಎನ್ ಐಎ ಶಾಖೆಗಳನ್ನು ತೆರೆಯಲಾಗುತ್ತದೆ.

ಬೆಂಗಳೂರಿನಲ್ಲಿ ಕೆಲವೊಂದು ಸಂಸ್ಥೆಗಳು ದೇಶವಿರೋಧಿ ಚಟುಟಿಕೆಗಳನ್ನು ನಡೆಸುತ್ತಿದ್ದು ಇದನ್ನು ಸೂಕ್ತವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಯನ್ನು ತೆರೆಯಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Bengaluru South MP Tejasvi Surya) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Home Minister Amith Shah)ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಫಲವಾಗಿ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ (terrorist act) ತನಿಖೆಗಾಗಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಶಾಖಾ ಕಚೇರಿಯನ್ನು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಎನ್ ಐಎ ಶಾಖೆ ಕಚೇರಿ ತೆರೆಯುವ ಕೇಂದ್ರ ಗೃಹ ಇಲಾಖೆ ಪ್ರಸ್ತಾವನೆಗೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಆರು ನಗರಗಳಲ್ಲಿ ಆರು ಶಾಖಾ ಕಚೇರಿಗಳನ್ನು ತೆರೆಯುವ ಗೃಹ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.

ಅಹಮದಾಬಾದ್, ಬೆಂಗಳೂರು, ಪಟನಾ, ಜೈಪುರ ಮತ್ತು ಭೋಪಾಲ್, ಭುವನೇಶ್ವರದಲ್ಲಿ ಕಚೇರಿಗಳು ಮತ್ತು 435 ಖಾಲಿ ಹುದ್ದೆಗಳ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಿದೆ. 300 ಹುದ್ದೆಗಳ ಸೃಷ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ ತನಿಖೆ ಮತ್ತು ಕಾನೂನು ಕ್ರಮ ಜರುಗಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ತನಿಖಾ ಪಡೆ ಭಯೋತ್ಪಾದನಾ ಕೃತ್ಯಗಳಿಗೆ ಸೀಮಿತವಾಗಿದೆ. 

ISIS Recruitment Racket: ಇದಿನಬ್ಬ ಮೊಮ್ಮಗನ ಬೆನ್ನಲ್ಲೇ, ದೀಪ್ತಿ ಮಾರ್ಲ ಕೂಡಾ ಅರೆಸ್ಟ್: ಯಾರೀಕೆ?
ಕರ್ನಾಟಕದಲ್ಲಿ(Karnataka) ನಡೆಯುವ ದೇಶವಿರೋಧಿ ಚಟುವಟಿಕೆಗಳು ಹಾಗೂ ಅದರ ತನಿಖೆಗಾಗಿ ಬೆಂಗಳೂರಿನ ಎನ್ ಐಎ ಕಚೇರಿ ಪ್ರಮುಖ ಪಾತ್ರ ವಹಿಸಲಿದೆ. ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಈ ಕಚೇರಿ ತೆರೆಯಬೇಕು ಎಂದು ಮನವಿ ಮಾಡಿದ್ದರೆ, ರಾಜ್ಯದ ಕೆಲ ಸಂಸದರು ಮಂಗಳೂರಿನಲ್ಲಿ ಈ ಕಚೇರಿ ತೆರೆಯುವಂತೆ ಪ್ರಸ್ತಾಪ ಸಲ್ಲಿಸಿದ್ದರು. ಆದರೆ, ಹಣಕಾಸು ಇಲಾಖೆ ಬೆಂಗೂರಿನಲ್ಲಿ ಕಚೇರಿ ತೆರೆಯಲು ಮನಸ್ಸು ಮಾಡಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ತನಿಖೆಗೆ ಎನ್‌ಐಎಯ ನುರಿತ ಅಧಿಕಾರಿಗಳು ಬೆಂಗಳೂರಿನಲ್ಲಿ ಇರಲಿದ್ದಾರೆ.  ಕೆಲವೊಮ್ಮೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳ ಕುರಿತಾದ ತನಿಖೆ ಮಾಡಲು ಸಹಾಯ ಮಾಡುತ್ತದೆ.

NIA Raid Mangaluru: ಐಸಿಸ್ ನಂಟು? ಮಾಜಿ ಶಾಸಕ ಇದಿನಬ್ಬ ಪುತ್ರನ ಸೊಸೆ ಬಂಧನ
ಮೂಲಗಳ ಪ್ರಕಾರ, ಕೇಂದ್ರದ ಗೃಹ ಇಲಾಖೆ, ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ಪ್ರತಿ ಕಚೇರಿಗೆ ಸರಾಸರಿ 72 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕೇಳಿದೆ. ಆದರೆ ಕೇವಲ 50 ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕಕ್ಕೆ ಮಾತ್ರ ಅನುಮೋದನೆ ನೀಡಲಾಗಿದೆ. ಬೆಂಗಳೂರು, ಪಟನಾ ಮತ್ತು ಭೋಪಾಲ್ ಶಾಖೆಗಳನ್ನು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್‌ಗಳು (ಡಿಐಜಿಗಳು) ನೇತೃತ್ವ ವಹಿಸಿದರೆ, ಇತರ ಮೂರು ಶಾಖೆಗಳು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನೇತೃತ್ವದಲ್ಲಿರುತ್ತವೆ. ಪ್ರಕರಣಗಳ ತನಿಖೆಗೆ ಐವರು ಇನ್ಸ್‌ಪೆಕ್ಟರ್‌ಗಳು, ಎಲ್ಲಾ ಸ್ಥಳಗಳಲ್ಲಿ ವಿಧಿವಿಜ್ಞಾನ ತಜ್ಞರು ಇರುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ