ಕೇಂದ್ರದ ಪ್ಯಾಕೇಜ್‌ ಜಿಡಿಪಿಯ ಶೇ.10ರಷ್ಟಲ್ಲ, ಕೇವಲ ಶೇ.1!

By Kannadaprabha News  |  First Published May 21, 2020, 8:06 AM IST

ಕೇಂದ್ರದ ಪ್ಯಾಕೇಜ್‌ ಜಿಡಿಪಿಯ ಶೇ.10ರಷ್ಟಲ್ಲ, ಕೇವಲ ಶೇ.1!|  ಕೇಂದ್ರ ಸರ್ಕಾರದ ವಾದ ಅಲ್ಲಗಳೆದ ಬ್ಯಾಂಕ್‌ಗಳು, ರೇಟಿಂಗ್‌ ಏಜೆನ್ಸಿಗಳು


ನವದೆಹಲಿ(ಮೇ.21): ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ವಿವಿಧ ರಂಗಗಳಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಮತ್ತು ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ 20 ಲಕ್ಷ ಕೋಟಿ ರು. ಮೊತ್ತದ ಆರ್ಥಿಕ ಪ್ಯಾಕೇಜ್‌ ನಿಜಕ್ಕೂ ಅಷ್ಟುದೊಡ್ಡ ಮೊತ್ತದ್ದಲ್ಲ ಎಂದು ಅನೇಕ ಬ್ಯಾಂಕ್‌ಗಳು ಮತ್ತು ರೇಟಿಂಗ್‌ ಏಜೆನ್ಸಿಗಳು ಹೇಳಿವೆ.

ಕೇಂದ್ರ ಸರ್ಕಾರ ಇದು 20.97 ಲಕ್ಷ ಕೋಟಿ ರು. ಪ್ಯಾಕೇಜ್‌ ಆಗಿದ್ದು, ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇ.10ರಷ್ಟಾಗುತ್ತದೆ ಎಂದು ಹೇಳಿಕೊಂಡಿತ್ತು. ಆದರೆ, ಬ್ಯಾಂಕ್‌ಗಳು ಮತ್ತು ರೇಟಿಂಗ್‌ ಏಜೆನ್ಸಿಗಳು ಇದು ಜಿಡಿಪಿಯ ಶೇ.1ರಷ್ಟಾಗಬಹುದು ಎಂದು ಅಭಿಪ್ರಾಯಪಟ್ಟಿವೆ. ಅಲ್ಲದೆ, ದೇಶದ ಆರ್ಥಿಕತೆಗಾಗಿರುವ ನಷ್ಟವನ್ನು ಸರಿಪಡಿಸಲು ಇದು ಯಾತಕ್ಕೂ ಸಾಲದು ಎಂದೂ ಹೇಳಿವೆ.

Tap to resize

Latest Videos

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

‘ಕೇಂದ್ರ ಸರ್ಕಾರದ ಪ್ಯಾಕೇಜ್‌ನಲ್ಲಿ ಈ ಹಿಂದೆಯೇ ಘೋಷಿಸಿದ್ದ ಅನೇಕ ಆರ್ಥಿಕ ನೆರವುಗಳೂ ಸೇರಿವೆ. ಒಟ್ಟಾರೆ ಪ್ಯಾಕೇಜ್‌ನಿಂದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮವೇನೂ ಉಂಟಾಗುವುದಿಲ್ಲ. ನಮ್ಮ ಲೆಕ್ಕಾಚಾರದ ಪ್ರಕಾರ ಪ್ಯಾಕೇಜ್‌ನ ಗಾತ್ರ ಜಿಡಿಪಿಯ ಶೇ.1ರಷ್ಟಾಗುತ್ತದೆ’ ಎಂದು ಫಿಚ್‌ ಸಮೂಹ ಹೇಳಿದೆ.

ಎಸ್‌ಬಿಐನ ಸಂಶೋಧನಾ ವಿಭಾಗ, ‘ಪ್ಯಾಕೇಜ್‌ನಿಂದ ಅಲ್ಪಾವಧಿಯಲ್ಲಿ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಒಟ್ಟಾರೆ ದೇಶದ ಆರ್ಥಿಕತೆಗೆ ಇದರಿಂದ ಸುಮಾರು 2 ಲಕ್ಷ ಕೋಟಿ ರು. ಸಿಗಬಹುದು. ಅದು ಜಿಡಿಪಿಯ ಶೇ.1ರಷ್ಟಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು, ಪ್ಯಾಕೇಜ್‌ನಿಂದ ದೇಶದಲ್ಲಿ ಹೆಚ್ಚಳವಾಗುವ ಹಣದ ಹರಿವನ್ನೂ ಸೇರಿಸಿ ನಾವು ಪ್ಯಾಕೇಜ್‌ನ ಗಾತ್ರವನ್ನು ಹೇಳಿದ್ದೇವೆ. ಜಾಗತಿಕ ಮಟ್ಟದಲ್ಲಿ ಇದೇ ಪದ್ಧತಿ ಅನುಸರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ

ಗೋಲ್ಡ್‌ಮನ್‌ ಸ್ಯಾಶಸ್‌ ಪ್ರಕಾರ ಈ ಪ್ಯಾಕೇಜ್‌ ಜಿಡಿಪಿಯ ಶೇ.1.3, ಮೋತಿಲಾಲ್‌ ಓಸ್ವಾಲ್‌ ಪ್ರಕಾರ ಶೇ.1.3, ಯುಬಿಎಸ್‌ ಪ್ರಕಾರ ಶೇ.1.2, ಬೋಫಾ ಪ್ರಕಾರ ಶೇ.1.1, ಎಚ್‌ಎಸ್‌ಬಿಸಿ ಪ್ರಕಾರ ಶೇ.1, ಜೆಫರೀಸ್‌ ಪ್ರಕಾರ ಶೇ.1, ಕೋಟಕ್‌ ಪ್ರಕಾರ ಶೇ.1, ಬರ್ನ್‌ಸ್ಟೀನ್‌ ಪ್ರಕಾರ ಶೇ.0.9, ಎಡೆಲ್ವೀಸ್‌ ಪ್ರಕಾರ ಶೇ.0.84, ಸಿಎಲ್‌ಎಸ್‌ಎ ಪ್ರಕಾರ ಶೇ.0.8, ನೊಮುರಾ ಪ್ರಕಾರ ಶೇ.0.8 ಹಾಗೂ ಬಾಕ್ಲೇರ್‍ಸ್‌ ಪ್ರಕಾರ ಜಿಡಿಪಿಯ ಶೇ.0.75 ಆಗುತ್ತದೆ.

ಏಜೆನ್ಸಿ ಹಾಗೂ ರೇಟಿಂಗ್ಸ್

ಗೋಲ್ಡ್‌ಮನ್‌ ಸ್ಯಾಶಸ್‌: ಶೇ.1.3

ಮೋತಿಲಾಲ್‌ ಓಸ್ವಾಲ್‌: ಶೇ.1.3

ಯುಬಿಎಸ್‌: ಶೇ.1.2

ಬೋಫಾ: ಶೇ.1.1

ಎಚ್‌ಎಸ್‌ಬಿಸಿ: ಶೇ.1

ಜೆಫರೀಸ್‌: ಶೇ.1

ಕೋಟಕ್‌: ಶೇ.1

ಬರ್ನ್‌ಸ್ಟೀನ್‌: ಶೇ.0.9

ಎಡೆಲ್ವೀಸ್‌: ಶೇ.0.84

ಸಿಎಲ್‌ಎಸ್‌ಎ: ಶೇ.0.8

ನೊಮುರಾ: ಶೇ.0.8

ಬಾಕ್ಲೇರ್‍ಸ್‌: ಶೇ.0.75

click me!