2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!

Suvarna News   | Asianet News
Published : Jan 25, 2020, 09:06 PM ISTUpdated : Jan 25, 2020, 09:30 PM IST
2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!

ಸಾರಾಂಶ

2020ರ ಪದ್ಮ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ| ಒಟ್ಟು 141 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ| 118 ಸಾಧಕರಿಗೆ ಪದ್ಮಶ್ರೀ ಗೌರವ| 7 ಸಾಧಕರಿಗೆ ಪದ್ಮವಿಭೂಷಣ ಗೌರವ| 16 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ| 

ನವದೆಹಲಿ(ಜ.25): ಕೇಂದ್ರ ಸರ್ಕಾರ 2020ರ  ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದೇಶದ ಸಾಧಕರಿಗೆ ಗೌರವಿಸಿ ಸರ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಒಟ್ಟು 141 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು  ಘೋಷಿಸಲಾಗಿದ್ದು, ಇದರಲ್ಲಿ 118 ಸಾಧಕರಿಗೆ ಪದ್ಮಶ್ರೀ, 7 ಸಾಧಕರಿಗೆ ಪದ್ಮವಿಭೂಷಣ ಹಾಗೂ 16 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಕನ್ನಡಪ್ರಭ-ಸುವರ್ಣ ನ್ಯೂಸ್ ವರ್ಷದ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ

ಸಾಧಕರ ಪಟ್ಟಿ ಇಂತಿದೆ:(ಪ್ರಮುಖರ ಪಟ್ಟಿ ಮಾತ್ರ)

ಪದ್ಮಶ್ರಿ ಪ್ರಶಸ್ತಿ:

1. ಮುನ್ನಾ ಮಾಸ್ಟರ್- ಕೃಷ್ಣಭಜನೆಗಾರ, ರಾಜಸ್ಥಾನ
2. ಮೊಹ್ಮದ್ ಷರೀಫ್ - ಸಾಮಾಜಿಕ ಕಾರ್ಯಕರ್ತ
3. ಡಾ. ರವಿಕಣ್ಣನ್- ಕ್ಯಾನ್ಸರ್ ತಜ್ಞ, ಅಸ್ಸಾಂ
4. ಜಗದೀಶ್ ಲಾಲ್ ಅಹುಜಾ- ಸಾಮಾಜಿಕ ಕಾರ್ಯಕರ್ತ, ಪಂಜಾಬ್
5. ಸತ್ಯನಾರಾಯಣ್ - ಸಾಮಾಜಿಕ ಕಾರ್ಯಕರ್ತ, ಕೇರಳ
6. ಅಬ್ದುಲ್ ಜಬ್ಬಾರ್- ಸಾಮಾಜಿಕ ಹೋರಾಟಗಾರ, ಮಧ್ಯಪ್ರದೇಶ
7. ಉಷಾ ಚೌಮಾರ್ -ಸಾಮಾಜಿಕ ಹೋರಾಟಗಾರ್ತಿ, ರಾಜಸ್ಥಾನ್
8. ರಾಧಾಮೋಹನ್- ಸಾವಯವ ಕೃಷಿಕ, ಒಡಿಸ್ಸಾ
9. ಕುಶಾಲ್ ಕೋನುವಾರ್- ಪಶುವೈದ್ಯ, ಅಸ್ಸಾಂ
10. ಖ್ಯಾತ ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ

11. ಕಂಗನಾ ರಣಾವತ್- ಬಾಲಿವುಡ್ ನಟಿ

12. ಕರಣ್ ಜೋಹರ್- ಚಿತ್ರ ನಿರ್ಮಾಪಕ, ನಿರ್ದೇಶಕ(ಮತ್ತು ಇತರರು)

ಪದ್ಮಭೂಷಣ ಪ್ರಶಸ್ತಿ:
1. ಆನಂದ ಮಹೀಂದ್ರ-ಉದ್ಯಮಿ 

2. ಪಿ.ವಿ. ಸಿಂಧು- ಬಾಡ್ಮಿಂಟನ್ ತಾರೆ 

3. ಮುಮ್ತಾಜ್ ಅಲಿ- ಕೇರಳ

4. ಶ್ರೀ ಸೈಯ್ಯದ್ ಮುಜೆಮ್ ಅಲಿ-ಬಾಂಗ್ಲಾದೇಶ

5. ಅಜಯ್ ಚಕ್ರವತಿ-ಪ.ಬಂಗಾಳ

6. ಮನೋಜ್ ದಾಸ್- ಪುದುಚೇರಿ

7. ಅನಿಲ್ ಪ್ರಕಾಶ್ ಜೋಷಿ-ಉತ್ತರಾಖಂಡ್ (ಮತ್ತು ಇತರರು)

ಪದ್ಮವಿಭೂಷಣ ಪ್ರಶಸ್ತಿ
1. ಅರುಣ್ ಜೇಟ್ಲಿ- ಮರಣೋತ್ತರ 
2. ಜಾರ್ಜ್ ಫನಾಂಡೀಸ್- ಮರಣೋತ್ತರ 
3. ಸುಷ್ಮಾ ಸ್ವರಾಜ್- ಮರಣೋತ್ತರ 
4. ಪೇಜಾವರ ಶ್ರೀ-ಮರಣೋತ್ತರ
5. ಮೇರಿ ಕೋಮ್- ಬಾಕ್ಸಿಂಗ್ ಪಟು

6.ಅನಿರುದ್ಧ ಜುಗ್ನಾತ್-ಮಾರಿಷಸ್

7. ಚಾನುಲಾಲ್ ಮಿಶ್ರಾ-ಉತ್ತರಪ್ರದೇಶ  

ಇನ್ನು ಪದ್ಮ ಪ್ರಶಸ್ತಿಗೆ ಭಾಜನರಾದ ಎಲ್ಲ ಸಾಧಕರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಎಲ್ಲ ಸಾಧಕರಿಗೂ ಅಭಿನಂದನೆ ಎಂದು ಹೇಳಿದ್ದಾರೆ.

ಸಾಧಕರ ಸಂಪೂರ್ಣ ಪಟ್ಟಿಯನ್ನು ನೋಡಲು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪದ್ಮ ಪ್ರಶಸ್ತಿ ವೆಬ್‌ಸೈಟ್‌ಗೆ ಭೇಟಿ ನೀಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ