
ನವದೆಹಲಿ(ಜು.08): ಕೇಂದ್ರ ಸಂಪುಟ ಪುನಾರಚನೆಗೂ ಮುನ್ನ ಒಟ್ಟು 12 ಸಚಿವರು ರಾಜೀನಾಮೆ ನೀಡಿದ್ದಾರೆ. ಅಚ್ಚರಿಯೆಂಬಂತೆ ಪ್ರಮುಖ ಸಚಿವರಾಗಿದ್ದ ಆರೋಗ್ಯ ಸಚಿವ ಹರ್ಷವರ್ಧನ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಕಾರ್ಮಿಕ ಖಾತೆ ಸಚಿವ ಸಂತೋಷ್ ಗಂಗ್ವಾರ್, ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್, ಸಣ್ಣ ಕೈಗಾರಿಕಾ ಖಾತೆ ಸಚಿವ ಪ್ರತಾಪ್ ಚಂದ್ರ ಸಾರಂಗಿಯನ್ನು ಪ್ರಧಾನಿ ನರೇಂದ್ರ ಮೋದಿ ಕೈಬಿಟ್ಟಿದ್ದಾರೆ.
"
ಈ ಪೈಕಿ ಕೆಲ ಸಚಿವರನ್ನು ವೈಫಲ್ಯದ ಕಾರಣಕ್ಕಾಗಿ ಕೈಬಿಟ್ಟಿದ್ದರೆ, ಇನ್ನು ಕೆಲವರನ್ನು ಆರೋಗ್ಯ ಸಮಸ್ಯೆ ಕಾರಣದಿಂದ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಸಚಿವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ.
ರಾಜೀನಾಮೆ ಕೊಟ್ಟಸಚಿವರ ಖಾತೆ ಯಾರಿಗೆ?
| ಹಳೆಯ ಸಚಿವರು | ಹೊಸ ಸಚಿವರು |
| ರವಿಶಂಕರ್ ಪ್ರಸಾದ್ (ಕಾನೂನು ಮಾಹಿತಿ ಮತ್ತು ತಂತ್ರಜ್ಞಾನ) | ಕಿರಣ್ ರಿಜಿಜು ಕಾನೂನು ಮತ್ತು ನ್ಯಾಯ, ಅಶ್ವಿನಿ ವೈಷ್ಣವ್- ಮಾಹಿತಿ ತಂತ್ರಜ್ಞಾನ |
| ಪ್ರಕಾಶ್ ಜಾವ್ಡೇಕರ್ (ಪರಿಸರ) | ಭೂಪೇಂದ್ರ ಯಾದವ್ |
| ಸದಾನಂದ ಗೌಡ (ರಾಸಾಯನಿಕ, ರಸಗೊಬ್ಬರ) | ಮನ್‌ಸುಖ್ ಮಾಂಡವೀಯ |
| ಹರ್ಷವರ್ಧನ್ (ಆರೋಗ್ಯ) | ಮನ್‌ಸುಖ್ ಮಾಂಡವೀಯ |
| ಥಾವರ ಚಂದ್ ಗೆಹಲೋತ್ (ಸಾಮಾಜಿಕ ನ್ಯಾಯ) | ವಿರೇಂದ್ರ ಕುಮಾರ್ |
| ರಮೇಶ್ ಪೋಖ್ರಿಯಾಲ್ ನಿಶಾಂಕ್ (ಶಿಕ್ಷಣ) | ಧಮೇಂದ್ರ ಪ್ರಧಾನ್ |
| ಸಂತೋಷ್ ಗಂಗ್ವಾರ್ (ಕಾರ್ಮಿಕ) | ಭೂಪೇಂದ್ರ ಯಾದವ್ |
ರಾಜ್ಯ ಖಾತೆ
| ಬಾಬುಲ್ ಸುಪ್ರಿಯೋ, (ಪರಿಸರ, ಅರಣ್ಯ) | ಅಶ್ವಿನ್‌ಕುಮಾರ್ ಚೌಬೆ |
| ಧೋತ್ರೆ ಸಂಜಯ್ ಶಾಮ್ ರಾವ್ (ಶಿಕ್ಷಣ) | ಅನ್ನಪೂರ್ಣ ದೇವಿ |
| ರತನ್ ಲಾಲ್ ಕಟಾರಿಯಾ (ಜಲ ಶಕ್ತಿ) | ಪ್ರಹ್ಲಾದ್‌ಸಿಂಗ್ ಪಟೇಲ್ |
| ಪ್ರತಾಪ್ ಚಂದ್ರ ಸಾರಂಗಿ (ಸಣ್ಣ ಕೈಗಾರಿಕೆ) | ಬಾನು ಪ್ರತಾಪ್‌ಸಿಂಗ್ |
| ದೇಬಶ್ರೀ ಚೌಧರಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) | ಮಂಜುಪಾರ ಮಹೇಂದ್ರಭಾಯ್ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ