
ನವದೆಹಲಿ(ಜು.29): ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ, ಲಿಮಿಟೆಡ್ ಲಯಬಿಲಿಟಿ ಪಾರ್ಟನರ್‌ಶಿಪ್(ಎಲ್‌ಎಲ್‌ಪಿ) ಕಾಯ್ದೆಗೆ ತಿದ್ದುಪಡಿಗಳನ್ನು ತರಲು ನಿರ್ಧರಿಸಿದೆ.
ಇದರೊಂದಿಗೆ ಈ ಕಾನೂನುಗಳನ್ನು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಅಪರಾಧೀಕರಣ ಆರೋಪದಡಿ ಕ್ರಮ ಕೈಗೊಳ್ಳುವುದರಿಂದ ವಿನಾಯ್ತಿ ಸಿಗಲಿದೆ. ಈ ಕಾಯ್ದೆ ತಿದ್ದುಪಡಿಯಿಂದ ಕಾಯ್ದೆಯ ಹಲವು ನಿಯಮಗಳನ್ನು ಉಲ್ಲಂಘಿಸಿದ ದೇಶದ 2.30 ಲಕ್ಷ ಕಂಪನಿಗಳಿಗೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾಂಗ್ರೆಸ್ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!
ಈ ಪ್ರಕಾರ ಇದೀಗ ಈ ಕಾಯ್ದೆಯ ನಿಯಮಗಳನ್ನು 22ಕ್ಕೆ ಸೀಮಿತಗೊಳಸಲಾಗಿದ್ದು, ಸಂಯುಕ್ತ ಅಪರಾಧಗಳನ್ನು 7ಕ್ಕೆ ಮತ್ತು ಅಸಂಯುಕ್ತ ಅಪರಾಧಗಳ ಸಂಖ್ಯೆಯನ್ನು 3ಕ್ಕೆ ಇಳಿಕೆ ಸೇರಿದಂತೆ ಹಲವು ಬದಲಾವಣಎಗಳನ್ನು ತರಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಎಲ್‌ಎಲ್‌ಪಿ ಕಾಯ್ದೆಯಡಿ 81 ಸೆಕ್ಷನ್‌ಗಳು ಮತ್ತು 4 ಶೆಡ್ಯೂಲ್‌ಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ