ದೇಶದ 6.4 ಲಕ್ಷ ಹಳ್ಳಿಗೆ ಬ್ರಾಂಡ್‌ಬ್ಯಾಂಡ್‌ ಸೇವೆ ಒದಗಿಸಲು ಸಂಪುಟ ಸಮ್ಮತಿ

By Kannadaprabha NewsFirst Published Aug 6, 2023, 11:33 AM IST
Highlights

ಭಾರತ್‌ ನೆಟ್‌ ಯೋಜನೆಯಡಿಯಲ್ಲಿ ದೇಶದ 6.4 ಲಕ್ಷ ಹಳ್ಳಿಗಳಿಗೆ 1.39 ಲಕ್ಷ ಕೋಟಿ ರು. ವೆಚ್ಚದಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ: ಭಾರತ್‌ ನೆಟ್‌ ಯೋಜನೆಯಡಿಯಲ್ಲಿ ದೇಶದ 6.4 ಲಕ್ಷ ಹಳ್ಳಿಗಳಿಗೆ 1.39 ಲಕ್ಷ ಕೋಟಿ ರು. ವೆಚ್ಚದಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶದ ಎಲ್ಲ ಬ್ರಾಡ್‌ಬ್ಯಾಂಡ್‌ ಸಂಪರ್ಕವಿಲ್ಲದ ಗ್ರಾಮಗಳಿಗೆ ಸಂಪರ್ಕವನ್ನು ಒದಗಿಸಲು 1,39,579 ಲಕ್ಷ ಕೋಟಿ ರು.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಭಾರತ್‌ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್ ಲಿಮಿಟೆಡ್‌ (ಬಿಬುಎನ್‌ಎಲ್‌) ಅನ್ನು ಗ್ರಾಮ ಮಟ್ಟದ ಉದ್ಯಮಿ (ವಿಎಲ್‌ಇ) ಸಹಭಾಗಿತ್ವದಲ್ಲಿ ಸಂಪರ್ಕ ಒದಗಿಸಲಾಗವುದು.

ಇನ್ನು ಸ್ಥಳೀಯ ಉದ್ಯಮಿಗಳ ನೆರವಿನೊಂದಿಗೆ ಫೈಬರ್‌-ಟು-ದ- ಹೋಂ ಮಾದರಿಯಲ್ಲಿ 60,000 ಹಳ್ಳಿಗಳಲ್ಲಿ ನಡೆಸಿದ ಮಾದರಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಇದೀಗ ಅದನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ 3,800 ಉದ್ಯಮಿಗಳು ಭಾಗಿಯಾಗಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪ್ರಸ್ತುತ ದೇಶದಲ್ಲಿ ಭಾರತ್‌ನೆಟ್‌ ಯೋಜನೆಯಡಿಯಲ್ಲಿ 1.94 ಲಕ್ಷ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು ಮುಂಬರುವ ಎರಡೂವರೆ ವರ್ಷಗಳಲ್ಲಿ ಉಳಿದ ಗ್ರಾಮಗಳಿಗೆ ಸಂಪರ್ಕಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

2030ರೊಳಗೆ ದೇಶದಲ್ಲಿ 6ಜಿ ಆರಂಭಕ್ಕೆ ತಯಾರಿ: 5ಜಿಗಿಂತ 1000 ಪಟ್ಟು ವೇಗದಲ್ಲಿ ಸಿಗಲಿದೆ ಇಂಟರ್ನೆಟ್‌

BSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

click me!