Union Budget 2023: ಕೆವೈಸಿ ನೀತಿ ಮತ್ತಷ್ಟು ಸರಳೀಕರಣ

By Kannadaprabha News  |  First Published Feb 2, 2023, 7:02 AM IST

ಕೆವೈಸಿ ನೀತಿಯನ್ನು ಮತ್ತಷ್ಟುಸರಳೀಕೃತಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ, ಎಲ್ಲರಿಗೂ ಹೊಂದುವ ಒಂದೇ ನೀತಿಯ ಬದಲಾಗಿ ಅಪಾಯ ಆಧರಿತ ಕೆವೈಸಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದೆ.


ಕೆವೈಸಿ ನೀತಿಯನ್ನು ಮತ್ತಷ್ಟುಸರಳೀಕೃತಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ, ಎಲ್ಲರಿಗೂ ಹೊಂದುವ ಒಂದೇ ನೀತಿಯ ಬದಲಾಗಿ ಅಪಾಯ ಆಧರಿತ ಕೆವೈಸಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದೆ. ಅಲ್ಲದೆ ಡಿಜಿಟಲ್‌ ಇಂಡಿಯಾದ ಬೇಡಿಕೆಗೆ ಅನುಸಾರವಾದ ಮತ್ತು ಅದಕ್ಕೆ ಹೊಂದಿಕೊಳ್ಳುವ ಸ್ವರೂಪದ ಕೆವೈಸಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಹಣಕಾಸು ವಲಯದ ನಿಯಂತ್ರಣಾ ಸಂಸ್ಥೆಗಳನ್ನು ಉತ್ತೇಜಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಗುರುತು, ವಿಳಾಸ ಬದಲಿಗೆ ಒಂದೇ ಕೇಂದ್ರ ಸ್ಥಾಪನೆ

Tap to resize

Latest Videos

undefined

ಬಳಕೆದಾರನೊಬ್ಬ ಗುರುತು ಮತ್ತು ವಿಳಾಸ ಬದಲಾವಣೆಗೆ ಸಂಬಂಧಿಸಿದಂತೆ ಬಳಕೆದಾರನಿಗೆ ಒಂದೇ ಸ್ಥಳದಲ್ಲೇ ಎಲ್ಲಾ ರೀತಿಯ ಪರಿಹಾರ ಸಿಗುವ ವ್ಯವಸ್ಥೆ ರೂಪಿಸಲಾಗುವುದು. ವಿವಿಧ ಸರ್ಕಾರಿ ಸಂಸ್ಥೆಗಳು, ನಿಯಂತ್ರಣಾ ಪ್ರಾಧಿಕಾರಗಳ ನಡುವೆ ಸಮನ್ವಯಕ್ಕೂ ಈ ವ್ಯವಸ್ಥೆ ಬಳಕೆ ಮಾಡಿಕೊಳ್ಳಲಾಗುವುದು. ಡಿಜಿಲಾಕರ್‌ ಮತ್ತು ಆಧಾರ್‌ನಲ್ಲಿ ಹೊಂದಿರುವ ಬಳಕೆದಾರನ ಮಾಹಿತಿಯನ್ನು ಮೂಲ ಮಾಹಿತಿಯಾಗಿ ಬಳಸಿಕೊಂಡು ಈ ವ್ಯವಸ್ಥೆ ರೂಪಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಉದ್ಯಮಗಳಿಗೆ ಇನ್ನು ಪಾನ್‌ ಒಂದೇ ಗುರುತಿನ ಮೂಲ

ಪಾನ್‌ ಹೊಂದಿರುವುದು ಕಡ್ಡಾಯವಾಗಿರುವ ಉದ್ಯಮಗಳನ್ನು ಗುರುತಿಸಲು ನಿರ್ದಿಷ್ಟಸರ್ಕಾರಿ ಏಜೆನ್ಸಿಗಳು ಇನ್ನು ಮುಂದೆ ಇನ್ನು ಪಾನ್‌ ನಂಬರ್‌ ಅನ್ನೇ ಸಾಮಾನ್ಯ ಗುರುತಿಸುವಿಕೆಯ ಮೂಲವನ್ನಾಗಿ ಬಳಸಲಿವೆ. ಇದು ಉದ್ಯಮ ಸ್ನೇಹಿ ವಾತಾವರಣವನ್ನು ಮತ್ತಷ್ಟುಸುಗಮಗೊಳಿಸಲಿದೆ. ಇದನ್ನು ಕಾನೂನಿನ ಮೂಲಕ ಬದ್ಧಗೊಳಿಸಲಾಗುವುದು.


ಏಕೀಕೃತ ದಾಖಲು ಕೇಂದ್ರ ಸ್ಥಾಪನೆಗೆ ನಿರ್ಧಾರ

ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಒಂದೇ ರೀತಿಯ ಮಾಹಿತಿಯನ್ನು ಪ್ರತ್ಯೇಕವಾಗಿ ಸಲ್ಲಿಸುವ ಅನಿವಾರ್ಯತೆಯನ್ನು ತಪ್ಪಿಸುವ ಸಲುವಾಗಿ ಏಕೀಕೃತ ದಾಖಲು ವ್ಯವಸ್ಥೆ ಜಾರಿಗೆ ತರಲಾಗುವುದು. ಇಂಥ ಮಾಹಿತಿಯ ದಾಖಲು ಅಥವಾ ಸರಳೀಕೃತ ಫಾರ್ಮ್‌ಗಳನ್ನು, ಅದನ್ನು ತುಂಬುವವರ ಬೇಡಿಕೆ ಅನ್ವಯ ಇತರೆ ಏಜೆನ್ಸಿಗಳ ಜೊತೆಗೆ ಹಂಚಿಕೊಳ್ಳಲಾಗುವುದು.

Union Budget 2023: ನವಭಾರತದ ಪಾಲಿಗೆ ದಾಖಲೆಯ ಬಜೆಟ್‌: ಕೇಂದ್ರ ಸಚಿವ ...

click me!