ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬಜೆಟ್ ಮಂಡಿಸಿದ್ದು, ಯಾವೆಲ್ಲಾ ವಸ್ತುಗಳು ಅಗ್ಗವಾಗಿವೆ ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬ ಡಿಟೇಲ್ ಇಲ್ಲಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬಜೆಟ್ ಮಂಡಿಸಿದ್ದು, ಯಾವೆಲ್ಲಾ ವಸ್ತುಗಳು ಅಗ್ಗವಾಗಿವೆ ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬ ಡಿಟೇಲ್ ಇಲ್ಲಿದೆ.
ಏರಿಕೆ
undefined
ವಿದೇಶಿ ಚಿಮ್ನಿ, ಸಿಗರೆಟ್, ಆಮದು ಕಾರು, ಸಂಸ್ಕರಿಸದ ಬೆಳ್ಳಿ, ಚಿನ್ನದ ಬಾರ್, ಪ್ಲಾಟಿನಂ, ನಾಫ್ತಾ,
ಇಳಿಕೆ
ಮೊಬೈಲ್, ಟೀವಿ, ಸೀಗಡಿ ಆಹಾರ, ಕೃತಕವಾಗಿ ಬೆಳೆಯುವ ವಜ್ರದ ಬೀಜ, ಮೊಬೈಲ್ ಕ್ಯಾಮೆರಾ ಲೆನ್ಸ್, ಟೀವಿ ಪ್ಯಾನೆಲ್, ಈಥೈಲ್ ಆಲ್ಕೋಹಾಲ್, ಕಚ್ಚಾ ಗ್ಲಿಸರಿನ್
ದೇಶೀಯವಾಗಿ ಮೊಬೈಲ್ ಮತ್ತು ಟೀವಿ ಸೆಟ್‌ಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಈ ಎರಡು ವಸ್ತುಗಳ ತಯಾರಿಕೆಗೆ ಬಳಸುವ ಹಲವು ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದೆ. ಮೊಬೈಲ್ ಕ್ಯಾಮೆರಾಕ್ಕೆ ಬಳಸುವ ಲೆನ್ಸ್, ಟೀವಿ ಪ್ಯಾನೆಲ್‌ಗಳ ಮೇಲಿನ ಸುಂಕವನ್ನು ಕಡಿತ ಮಾಡಲಾಗಿದೆ. ಎಲ್‌ಇಡಿ ಟೀವಿಗಳ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಶೇ.60-70ರಷ್ಟುವೆಚ್ಚ ಕೇವಲ ಓಪನ್ ಸೆಲ್ ಪ್ಯಾನೆಲ್‌ಗಳದ್ದೇ ಆಗಿರುತ್ತದೆ. ಇದೀಗ ಅದರ ಬೆಲೆ ಶೇ.5ರಷ್ಟುಇಳಿಕೆ ಮಾಡಿರುವ ಕಾರಣ ಟಿವಿಗಳ ಬೆಲೆಯಲ್ಲಿ 3000 ರು.ವರೆಗೂ ಇಳಿಕೆಯಾಗಲಿದೆ.
ಆದರೆ ಮತ್ತೊಂದೆಡೆ ಚಿನ್ನ, ಸಿಗರೆಟ್ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಹೆಚ್ಚಳ ಮಾಡಿರುವ ಕಾರಣ ಇವುಗಳ ದರ ದುಬಾರಿಯಾಗಲಿದೆ.
ಇಳಿಕೆ ಖುಷಿ:
ಹಸಿರು ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ, ಎಲೆಕ್ಟ್ರಿಕ್ ಸೈಕಲ್‌ಗಳಲ್ಲಿ ಬಳಸುವ ಲೀಥಿಯಂ ಅಯಾನ್ ಸೆಲ್‌ಗಳ ಉತ್ಪಾದನೆಗೆ ಅಗತ್ಯವಾದ ಮಷಿನ್ ಮತ್ತು ಕ್ಯಾಪಿಟಲ್ ಗೂಡ್ಸ್‌ಗಳಿಗೆ ನೀಡುವ ಅಬಕಾರಿ ಸುಂಕ ರಿಯಾಯಿತಿಯನ್ನು ವಿಸ್ತರಿಸಲಾಗಿದೆ.
ರಾಸಾಯನಿಕ ಕೈಗಾರಿಕೆಗಳಲ್ಲಿ ಬಳಸುವ ಈಥೈಲ್ ಆಲ್ಕೋಹಾಲ್ ಅನ್ನು ಮೂಲ ಆಮದು ಸುಂಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಫೆಲೊರೋಸ್ಪಾರ್ ಮೇಲಿನ ಅಬಕಾರಿ ಸುಂಕವನ್ನು ಶೇ.5ರಿಂದ ಶೇ.2.5ಕ್ಕೆ ಇಳಿಸಲಾಗಿದೆ. ಕಚ್ಚಾ ಗ್ಲಿಸರಿನ್ ಮೇಲಿನ ಅಬಕಾರಿ ಸುಂಕವನ್ನು ಶೇ.7.5ರಿಂದ ಶೇ.2.5ಕ್ಕೆ ಇಳಿಸಲಾಗಿದೆ. ಸಾಗರೋತ್ಪನ್ನಗಳ ರಫ್ತು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದಕ್ಕೆ ಇನ್ನಷ್ಟುಉತ್ತೇಜನ ನೀಡುವ ಉದ್ದೇಶದಿಂದ ಸೀಗಡಿ ಆಹಾರದ ಉತ್ಪಾದಿಸಲು ಬಳಸುವ ಕಚ್ಚಾ ವಸ್ತುಗಳ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ.
ನೈಸರ್ಗಿಕ ವಜ್ರದ ಲಭ್ಯತೆ ಕಡಿಮೆಯಾದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಕೃತಕ ವಜ್ರಕ್ಕೆ ನಿಧಾನವಾಗಿ ಮೊರೆ ಹೋಗುತ್ತಿದೆ. ಈ ವಲಯದಲ್ಲಿನ ಬೃಹತ್ ಅವಕಾಶವನ್ನು ಬಳಸಿಕೊಳ್ಳುವ ಸಲುವಾಗಿ ಕೃತಕವಾಗಿ ವಜ್ರ ಬೆಳೆಯಲು ಅಗತ್ಯವಾದ ಮೂಲವಸ್ತುವಿನ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ.
ದೇಶೀಯ ಉಕ್ಕು ಉದ್ಯಮಕ್ಕೆ ಅಗತ್ಯವಾದ ಕಬ್ಬಿಣ ಲಭ್ಯತೆಯನ್ನು ಖಚಿತಪಡಿಸುವ ಸಲುವಾಗಿ ಸಿಆರ್‌ಜಿಒ ಸ್ಟೀಲ್, ಫೆರೋಸ್ ಸ್ಕ್ರಾಪ್, ನಿಕಲ್ ಕ್ಯಾಥೋಡ್ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುವಿಗೆ ಮೂಲ ಅಬಕಾರಿ ಸುಂಕದಿಂದ ನೀಡಲಾಗುತ್ತಿದ್ದ ವಿನಾಯ್ತಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ.
ಏರಿಕೆ ಬಿಸಿ:
ದೇಶೀಯವಾಗಿಯೇ ಎಲೆಕ್ಟ್ರಿಕ್ ಚಿಮ್ನಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ, ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್ ಚಿಮ್ನಿಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು ಶೇ.7.5ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ.
ಇನ್ನು, ಸಂಸ್ಕರಿಸದ ಬೆಳ್ಳಿ, ಚಿನ್ನ, ಮತ್ತು ಪ್ಲಾಟಿನಂ ಬಾರ್‌ಗಳ ಮೇಲಿನ ತೆರಿಗೆಯನ್ನು ಈ ಹಿಂದೆ ಹೆಚ್ಚಿಸಲಾಗಿತ್ತು. ಇದೀಗ ಈ ವಸ್ತುಗಳಿಂದ ಉತ್ಪಾದಿಸಿದ ಆಭರಣಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಎರಡರ ನಡುವಿನ ವ್ಯತ್ಯಾಸವನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಇದರ ಜೊತೆಗೆ ಸಂಸ್ಕೃರಿಸದ ಚಿನ್ನ ಮತ್ತು ಪ್ಲಾಟಿನಂ ಬಾರ್‌ಗಳ ಮೇಲಿನ ಅಬಕರಿ ಸುಂಕ ಹೆಚ್ಚಿಸದ ರೀತಿಯಲ್ಲೇ ಸಂಸ್ಕೃರಿಸದ ಬೆಳ್ಳಿ ಬಾರ್ ಆಮದಿನ ಮೇಲಿನ ಸುಂಕವನ್ನು ಶೇ.6.1ರಿಂದ ಶೇ.10ಕ್ಕೆ ಹೆಚ್ಚಿಸಲಾಗಿದೆ. ಕಾಂಪೌಂಡಡ್ ರಬ್ಬರ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಶೇ.10ರಿಂದ ಶೇ.25ಕ್ಕೆ ಹೆಚ್ಚಿಸಲಾಗಿದೆ. ಸಿಗರೆಟ ಮೇಲಿನ ತೆರಿಗೆಯನ್ನು ಶೇ.16ರಷ್ಟು ಹೆಚ್ಚಿಸಲಾಗಿದೆ