
ನವದೆಹಲಿ: 2022-23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೋವಿಡ್-19 ಲಸಿಕೆಗಾಗಿ ಕೇವಲ 5000 ಕೋಟಿ ರು. ಮೀಸಲಿಟ್ಟಿದೆ. ಈ ಮೂಲಕ ದೇಶದ ಜನರು ಬೂಸ್ಟರ್ ಡೋಸ್ ಲಸಿಕೆಯನ್ನು ತಾವೇ ಹಣ ಕೊಟ್ಟು ಪಡೆದುಕೊಳ್ಳಬೇಕು ಎಂಬ ಸುಳಿವು ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2021-22ನೇ ಸಾಲಿನ ಬಜೆಟ್‌ನಲ್ಲಿ ಲಸಿಕಾಕರಣಕ್ಕಾಗಿ 35,000 ಕೋಟಿ ಹಣ ಮೀಸಲಿಡಲಾಗಿತ್ತು. ಈ ವರ್ಷ ಅದನ್ನು .5000 ಕೋಟಿಗೆ ತಗ್ಗಿಸಲಾಗಿದೆ. ಈ ಮೂಲಕ ಕೇಂದ್ರವು ಎರಡು ಡೋಸ್ ಲಸಿಕಾಕರಣ ಪೂರ್ಣಗೊಳಿಸುವ ಉದ್ದೇಶ ಮಾತ್ರ ಹೊಂದಿದೆ ಎನ್ನಲಾಗಿದೆ.
ಈ ಹಿಂದೆ ಮೀಸಲಿಟ್ಟಹಣದಲ್ಲಿ 167 ಕೋಟಿ ಡೋಸ್ ಲಸಿಕೆ ವಿತರಣೆ ಮಾಡುವ ಮೂಲಕ ಈಗಾಗಲೇ 20,000 ಕೋಟಿ ರು. ಹಣ ವ್ಯಯ ಮಾಡಲಾಗಿದೆ. ಶೇ.95ರಷ್ಟುವಯಸ್ಕರಿಗೆ ಕನಿಷ್ಠ 1 ಡೋಸ್, ಶೇ.75ರಷ್ಟುಜನರಿಗೆ ಎರಡೂ ಡೋಸ್ ವಿತರಣೆ ಮಾಡಲಾಗಿದೆ ಎಂದು ಕಳೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಈಗ ಬೂಸ್ಟರ್ ಡೋಸ್ ಆರಂಭಿಸಲಾಗಿದ್ದರೂ ಅದು ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಪೂರ್ವರೋಗ ಪೀಡಿತರಿಗೆ ಮಾತ್ರ ಸೀಮಿತವಾಗಿದೆ. ಮುಂದೆ 15 ಅಥವಾ 18 ವರ್ಷ ಮೇಲ್ಪಟ್ಟಎಲ್ಲರಿಗೂ ಬೂಸ್ಟರ್ ಡೋಸ್‌ಗೆ ಅವಕಾಶ ನೀಡಿದರೆ, ಅದು ಉಚಿತವಾಗಿ ಇರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.
1.61 ಲಕ್ಷ ಕೇಸು: 22 ದಿನದ ಕನಿಷ್ಠ
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಕೆ ಕಾಣುತ್ತಿದ್ದು, ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಹೊಸದಾಗಿ 1.61 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು 22 ದಿನದ ಕನಿಷ್ಠ.
ಇನ್ನು ದೈನಂದಿನ ಪಾಸಿಟಿವಿಟಿ ದರ 10ಕ್ಕಿಂತ ಕೆಳಗೆ ಇಳಿದಿದ್ದು, ಶೇ.9.26ಕ್ಕೆ ಇಳಿಕೆ ಕಂಡಿದೆ. ಇದು 23 ದಿನದ ಕನಿಷ್ಠ.
ಕಳೆದ 24 ಗಂಟೆಗಳಲ್ಲಿ 1.21 ಲಕ್ಷ ಸಕ್ರಿಯ ಸೋಂಕು ಪ್ರಕರಣಗಳು ಕಡಿಮೆಯಾಗುವ ಮೂಲಕ 16.21 ಲಕ್ಷಕ್ಕೆ ಇಳಿದಿದೆ. ಇದು ಒಟ್ಟು ಪ್ರಕರಣದ ಶೇ.4.2ರಷ್ಟಿದೆ.
ಇದೇ ಅವಧಿಯಲ್ಲಿ 1,733 ಸೋಂಕಿತರು ಬಲಿಯಾಗಿದ್ದಾರೆ. ಕೇರಳ ರಾಜ್ಯವು ತನ್ನ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿದ್ದು, ದೈನಂದಿನ ಸಾವಿಗೆ 1,063 ಸಾವುಗಳನ್ನು ಸೇರ್ಪಡೆ ಮಾಡಿದೆ. ಹೀಗಾಗಿ ಸಾವಿನ ಸಂಖ್ಯೆ 1700ರ ಗಡಿ ದಾಟಿದೆ.
ವಾರದ ಪಾಸಿಟಿವಿಟಿ ದರ ಶೇ.14.15ರಷ್ಟಿದೆ. ದೇಶದಲ್ಲಿ ಈವರೆಗೆ 167.29 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ