
ಲಖನೌ(ಜು.05) ಒಂದು ಮನೆಯಲ್ಲಿ ಎರಡು ನೀತಿ ಒಪ್ಪಲು ಸಾಧ್ಯವಿಲ್ಲ. ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದು ಕೇಂದ್ರ ಬಿಜೆಪಿ ಸರ್ಕಾರ ಪ್ರಯತ್ನ ಆರಂಭಿಸಿದೆ. ಈ ನಡೆ ವಿಪಕ್ಷಗಳ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಕೆಲ ಪಕ್ಷಗಳು ಬೆಂಬಲ ಸೂಚಿಸಿದರೆ, ಕಾಂಗ್ರೆಸ್ ಸೇರಿದಂತೆ ಇತರ ಕೆಲ ಪಕ್ಷಗಳು ಬಿಲ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಇತ್ತ ಕೆಲ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದೆ. ಆದರೆ ಏಕರೂಪ ನಾಗರೀತ ಸಂಹಿತೆಯನ್ನು ಮುಸ್ಲಿಂ ಸಮುದಾಯ ವಿರೋಧಿಸುತ್ತಿದೆ. ಇದೀಗ ಲಖನೌದಲ್ಲಿ ನಡೆದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹತ್ವದ ಸಭೆ ನಡೆಸಿ, ಭಾರಿ ವಿರೋಧ ವ್ಯಕ್ತಪಡಿಸಿದೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಾರ್ಯಾಕಾರಿಣಿ ಸಮಿತಿ ಕೇಂದ್ರ ಬಿಜೆಪಿಯ ಏಕರೂಪ ನಾಗರೀಕ ಸಂಹಿತ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಜೂನ್ 27 ರಂದು ರಚಿಸಿದ್ದ ಕರಡು ಪ್ರತಿಕ್ರಿಯೆ ಕುರಿತು ಗಂಭೀರ ಚರ್ಚೆ ನಡೆಸಿದೆ. ಇದೀಗ ಕೇಂದ್ರ ಕಾನೂನು ಆಯೋಗಕ್ಕೆ ದೂರು ನೀಡಲು ಲಾ ಬೋರ್ಡ್ ನಿರ್ಧರಿಸಿದೆ.
'ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಬಂಧವಿಲ್ಲ, ದಾಂಪತ್ಯದಲ್ಲಿ ವಿರಸ ಬಂದ್ರೆ ತಲಾಕ್ ಅಷ್ಟೇ'..
ಏಕರೂಪ ನಾಗರೀಕ ಸಂಹಿತೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಕೇಂದ್ರ ಕಾನೂನು ಆಯೋಗ ಜುಲೈ 14ರ ವರೆಗೆ ಕಾಲಾವಕಾಶ ನೀಡಿದೆ. ಇದೇ ವೇಳೆ ಭಾರತದ ಸಂವಿಧಾನವೇ ಏಕರೂಪಲ್ಲ. ಹೀಗಿರುವಾಗ ಭಾರತಕ್ಕೆ ಏಕರೂಪ ನಾಗರೀಕ ಸಂಹಿತೆಯ ಅವಶ್ಯಕತೆ ಏನಿದೆ? ಕೇವರ ಆದಿವಾಸಿಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಇದು ಸೂಕ್ತವಲ್ಲ. ಏಕರೂಪ ನಾಗರೀಕ ಸಂಹಿತೆಯನ್ನು ಕನಿಷ್ಠ ಅಲ್ಪಸಂಖ್ಯಾತರಿಗೆ ಅನ್ವಯಿಸಬಾರದು ಎಂದು ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ದೂರಿನಲ್ಲಿ ಉಲ್ಲೇಖಿಸಿದೆ.
ಆದಿವಾಸಿಗಳಿಗೆ ಸಂಹಿತೆ ಅನ್ವಯಿಸುವುದು ಬೇಡ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಕಾನೂನು ಆಯೋಗ ಮತ್ತು ಕಾನೂನು ಸಚಿವಾಲಯದ ಜೊತೆ ಸಂಸದೀಯ ಸ್ಥಾಯಿ ಸಮಿತಿ ಸೋಮವಾರ ಸಭೆ ನಡೆಸಿದೆ. ಇದರಲ್ಲಿ ಸಮಿತಿ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಅವರು ಈಶಾನ್ಯದ ಆದಿವಾಸಿಗಳು ಸೇರಿದಂತೆ ದೇಶದ ಇತರ ಆದಿವಾಸಿಗಳಿಗೆ ಸಂಹಿತೆ ಅನ್ವಯ ಆಗಬಾರದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಆದರೆ ಸಮಿತಿಯಲ್ಲಿನ ವಿಪಕ್ಷಗಳ ಸದಸ್ಯರು, ‘ಲೋಕಸಭೆ ಚುನಾವಣೆ ಕಾರಣಕ್ಕೆ ಸಂಹಿತೆ ಜಾರಿ ಬಗ್ಗೆ ಸರ್ಕಾರ ಪ್ರಸ್ತಾಪಿಸುತ್ತಿದೆ. 2018ರಲ್ಲಿ ಸಂಹಿತೆ ಅಗತ್ಯವಿಲ್ಲ ಎಂದು ಅಂದಿನ ಕಾನೂನು ಯೋಗ ಹೇಳಿತ್ತು. ಆದರೆ ಈಗ ಮತ್ತೆ ಅದೇ ಆಯೋಗದ ಮೂಲಕ ಸಂಹಿತೆಯ ಬಗ್ಗೆ ಜನಾಭಿಪ್ರಾಯ ಯಾಚಿಸಲಾಗುತ್ತಿದೆ. ಇದು ರಾಜಕೀಯ ಪ್ರೇರಿತ’ ಎಂದು ಕಿಡಿಕಾರಿದರು ಎಂದು ಮೂಲಗಳು ಹೇಳಿವೆ.
ಏಕರೂಪ ನಾಗರಿಕ ಸಂಹಿತೆಗೆ ಕಾಂಗ್ರೆಸ್ ಸಚಿವನ ಬೆಂಬಲ: ಸಂಹಿತೆ ಬಗ್ಗೆ ಮಾತನಾಡದಂತೆ ದೆಹಲಿ ಶಾಹಿ ಇಮಾಂ ಫತ್ವಾ
ಆದರೆ ಸುಶೀಲ್ ಮೋದಿ ಮಾತ್ರ, ‘ಆದಿವಾಸಿಗಳಿಗೆ ಮಾತ್ರ ಸಂಹಿತೆ ಬೇಡ. ಏಕೆಂದರೆ ಅವರ ಪರಂಪರೆಯೇ ವಿಭಿನ್ನ. ಕೇಂದ್ರದ ಅನೇಕ ಕಾನೂನು ಅವರಿಗೆ ಅನ್ವಯಿಸಲ್ಲ. ಅದೇ ರೀತಿ ಸಂಹಿತೆ ಕೂಡ ಬೇಡ’ ಎಂದರು.ಸಭೆಯಲ್ಲಿ ಕಾನೂನು ಆಯೋಗ ಮತ್ತು ಕಾನೂನು ಸಚಿವಾಲಯದ ಪ್ರತಿನಿಧಿಗಳು ಕೂಡ ಪಾಲ್ಗೊಂಡು ಮಾಹಿತಿ ನೀಡಿದರು. ಏಕರೂಪ ನಾಗರಿಕ ಸಂಹಿತೆಯ ಕುರಿತಾಗಿ ಕಾನೂನು ಆಯೋಗ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ