
ನವದೆಹಲಿ (ಜು.5): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಂಡಾಯ ಬಣ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರನ್ನೇ ಸ್ಥಾನದಿಂದ ವಜಾ ಮಾಡಿದೆ. ಎರಡು ದಶಕಗಳ ಹಿಂದೆ ತಾವೇ ಸ್ಥಾಪಿಸಿ ಮುನ್ನಡೆಸಿದ್ದ ಪಕ್ಷದಿಂದ ಉನ್ನತ ಹುದ್ದೆಯಿಂದ ಅವರು ವಜಾಗೊಂಡಿದ್ದಾರೆ. ಬಂಡಾಯ ಬಣದ ಮೂಲಗಳು ಅವರು ಚುನಾವಣಾ ಆಯೋಗಕ್ಕೆ ತಮ್ಮ ಪತ್ರದಲ್ಲಿಯೂ ಇದನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ ಅವರು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದಾರೆ. ಪಕ್ಷದ ಚುನಾವಣಾ ಚಿನ್ಹೆಯನ್ನು ಉಳಿಸಿಕೊಂಡೇ ಸಿದ್ಧ ಎಂದು ಶರದ್ ಪವಾರ್ ಬೆಂಬಲಿಗರಿಗೆ ಭರವಸೆಯನ್ನೂ ನೀಡಿದ್ದಾರೆ. "ನಮ್ಮೊಂದಿಗೆ ಎಷ್ಟು ಶಾಸಕರು ಇದ್ದಾರೆ ಎಂಬುದು ಇಂದಿನ ಚರ್ಚೆಯಾಗಿದೆ. ನಾನು ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಹಿಂದೆ ನನ್ನ ಬಳಿ 68 ಶಾಸಕರಿದ್ದರು, ನಾನು ಕೆಲವು ಸಮಯ ಹೊರಗೆ ಹೋದಾಗ 62 ಜನರು ನಮ್ಮನ್ನು ತೊರೆದರು, ನನಗೆ ಕೇವಲ ಆರು ಮಂದಿ ಇದ್ದರು. ಚುನಾವಣೆಯಲ್ಲಿ 62ರಲ್ಲಿ ನಾಲ್ವರು ಮಾತ್ರವೇ ಮರಳು ಬರಲು ಸಾಧ್ಯವಾಯಿತು. ನಾವು ಹೊಸ ಮುಖಗಳೊಂದಿಗೆ ಗೆದ್ದಿದ್ದೇವೆ ಎಂದು ಅವರು ಹೇಳಿದರು.
ಅಜಿತ್ ಪವಾರ್ ಜೊತೆ ಬಿಜೆಪಿಗೆ ಬೆಂಬಲ ನೀಡಿದ್ದ ಶಾಸಕರು ಯೂ ಟರ್ನ್,ಇಬ್ಬರು ಮರಳಿ ಗೂಡಿಗೆ!
ಯಾರಾದರೂ ಬಂದು ಪಕ್ಷದ ಚುನಾವಣಾ ಚಿನ್ಹೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರೆ, ನಾನು ನಿಮಗೆ ಭರವಸೆ ನೀಡುತ್ತೇನೆ. ಪಕ್ಷದ ಚಿನ್ಹೆ ನಮ್ಮ ಬಳಿಯೇ ಇರುತ್ತದೆ. ಇದು ಎಲ್ಲಿಯೂ ಹೋಗೋದಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳು ಕಾರ್ಯಕರ್ತರಲ್ಲಿ ಇರುವಾಗ ನಾವು ಚಿಂತೆ ಮಾಡಬೇಕಾದ ಅಗತ್ಯವೇ ಇರೋದಿಲ್ಲ. ನಾನು ಈಗಾಗಲೇ ಹಲವಾರು ಚಿನ್ಹೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಎನ್‌ಸಿಪಿ ನಂಬರ್ ಗೇಮ್‌ಗೆ ಬರುವುದಾದರೆ, ಪಕ್ಷ ಒಟ್ಟು 53 ಶಾಸಕರನ್ನು ಹೊಂದಿದೆ. ಅಜಿತ್ ಪವಾರ್ ಬಣ ಅನರ್ಹತೆ ತಪ್ಪಿಸಿಕೊಳ್ಳಲು 36 ಶಾಸಕರ ಸಂಖ್ಯಾಬಲ ಬೇಕಿದೆ. ಬುಧವಾರದ ಸಭೆಯಲ್ಲಿ ಅಜಿತ್ ಪವಾರ್ ಬೆಂಬಲಕ್ಕೆ 31 ಶಾಸಕರು ನಿಂತಿದ್ದರೆ, ಶರದ್ ಪವಾರ್ ಪರವಾಗಿ 13 ಶಾಸಕರಿದ್ದಾರೆ. ಇನ್ನು 9 ಶಾಸಕರು ತಟಸ್ಥರಾಗಿ ಉಳಿದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ