ರಷ್ಯಾ ಡ್ರೋನ್‌ಗೆ ಬೆಂಗಳೂರು ಉಪಕರಣ: ಉಕ್ರೇನ್‌ ಸರ್ಕಾರದಿಂದ ಭಾರತಕ್ಕೆ ಆಕ್ಷೇಪಣೆ ಸಲ್ಲಿಕೆ

Govindaraj S   | Kannada Prabha
Published : Aug 06, 2025, 05:14 AM ISTUpdated : Aug 07, 2025, 05:31 AM IST
Ukraine drone in war field

ಸಾರಾಂಶ

ತನ್ನ ವಿರುದ್ಧ ದಾಳಿಗೆ ರಷ್ಯಾ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ ಬೆಂಗಳೂರಿನ ಔರಾ ಸಂಸ್ಥೆ ಮತ್ತು ಅಮೆರಿಕದ ಸಂಸ್ಥೆಯೊಂದರ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಳಕೆಯಾಗಿದೆ ಎಂದು ಉಕ್ರೇನ್‌ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ (ಆ.06): ತನ್ನ ವಿರುದ್ಧ ದಾಳಿಗೆ ರಷ್ಯಾ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ ಬೆಂಗಳೂರಿನ ಔರಾ ಸಂಸ್ಥೆ ಮತ್ತು ಅಮೆರಿಕದ ಸಂಸ್ಥೆಯೊಂದರ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಳಕೆಯಾಗಿದೆ ಎಂದು ಉಕ್ರೇನ್‌ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದ ಉಪಕರಣವೊಂದು ನಮ್ಮ ಮೇಲಿನ ದಾಳಿಗೆ ಬಳಕೆಯಾಗಿದೆ ಎಂದು ಉಕ್ರೇನ್ ಹೇಳಿದೆ.

ಈ ಮೂಲಕ ರಷ್ಯಾ ಯುದ್ಧ ಕುರಿತಂತೆ ಅಮೆರಿಕದ ಬಳಿಕ ಈಗ ಟ್ರಂಪ್ ಬೆಂಬಲಿತ ಉಕ್ರೇನ್‌ ಕೂಡ ಕ್ಯಾತೆ ತೆಗೆದಿದೆ, ಆದರೆ ನಮ್ಮ ವ್ಯಾಪಾರ ವಹಿವಾಟು ಕಾನೂನು ಬದ್ಧವಾಗಿದೆ ಎಂದು ಬೆಂಗಳೂರು ಮೂಲದ ಔರಾ ಕಂಪನಿ ಸ್ಪಷ್ಟಪಡಿಸಿದೆ. ಇತ್ತೀಚೆಗೆ ತನ್ನ ದೇಶದಲ್ಲಿ ಪತನಗೊಂಡ ರಷ್ಯಾದ ಡ್ರೋನ್‌ ಅನ್ನು ಉಕ್ರೇನ್‌ ರಕ್ಷಣಾ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದರು.

ಈ ವೇಳೆ ರಷ್ಯಾ ಬಳಸಿದ್ದ ಶಹೆದ್‌ 136 ಡ್ರೋನ್‌ನಲ್ಲಿ ಬೆಂಗಳೂರು ಮೂಲದ ಔರಾ ಸೆಮಿಕಂಡಕ್ಟರ್‌ ಕಂಪನಿ ಉತ್ಪಾದಿಸಿದ್ದ ಅಥವಾ ಜೋಡಣೆ ಮಾಡಿದ್ದ ಹಾಗೂ ಅಮೆರಿಕ ಮೂಲದ ವಿಶಯ್‌ ಇಂಟರ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಳಸಿರುವುದು ಪತ್ತೆಯಾಗಿದೆ. ವಿಶಯ್‌ನಿಂದ ಡ್ರೋನ್‌ ವೋಲ್ಟೇಜ್‌ ನಿಯಂತ್ರಕ ಮತ್ತು ಔರಾದ ಸಿಗ್ನಲ್ ಜನರೇಟರ್‌ ಚಿಪ್‌ ಬಳಕೆಯಾಗಿದೆ. ಈ ಡ್ರೋನ್‌ಗಳನ್ನು ರಷ್ಯಾ 2020ರಿಂದ ಬಳಕೆ ಮಾಡುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.

ಈ ಹಿನ್ನೆಲೆ ಉಕ್ರೇನ್ ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳ ಗಮನಕ್ಕೂ ಈ ವಿಚಾರವನ್ನು ತಂದಿದೆ ಎನ್ನಲಾಗಿದೆ.ಆದರೆ ಉಕ್ರೇನ್‌ನ ಕಳವಳವನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ , ‘ಭಾರತ ಅಂತಾರಾಷ್ಟ್ರೀಯ ಕಟ್ಟುಪಾಡುಗಳಿಗೆ ಅನುಗುಣವಾಗಿದೆ. ಅಂತಹ ಉತ್ಪನ್ನಗಳ ರಫ್ತಿನ ವಿಚಾರದಲ್ಲಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ’ ಎಂದಿದೆ. ಇನ್ನು ಈ ಬಗ್ಗೆ ಔರಾ ಕಂಪನಿಯು ಸ್ಪಷ್ಟಪಡಿಸಿದ್ದು, ‘ ತಮ್ಮ ಕಂಪನಿಯ ಉತ್ಪನ್ನಗಳು ಕಾನೂನು ಬದ್ಧವಾಗಿಯೇ ಬಳಕೆಯಾಗಿದೆ. ಎಲ್ಲ ರೀತಿಯಲ್ಲಿಯೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ನಿಯಮಗಳ ಪಾಲನೆ ಮಾಡಲಾಗಿದೆ’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..