
ನವದೆಹಲಿ(ಜ.05): ಭಾರತದ ಗಣರಾಜೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸುತ್ತಿಲ್ಲ. ಕಳೆದ ತಿಂಗಳು ಭಾರತ ಪ್ರವಾಸ ಮಾಡುವುದಾಗಿ ಖಚಿತ ಪಡಿಸಿದ್ದ ಬೋರಿಸ್ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕೊರೋನಾ ವೈರಸ್ ಹಾಗೂ ರೂಪಾಂತರ ವೈರಸ್ ತಳಿ ಕಾರಣ ತಮ್ಮ ಭಾರತ ಪ್ರವಾಸವನ್ನು ಬೊರಿಸ್ ಜಾನ್ಸನ್ ರದ್ದು ಮಾಡಿದ್ದಾರೆ..
ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್!.
ಬೋರಿಸ್ ಜಾನ್ಸರ್ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಕೊರೋನಾ ವೈರಸ್ ಕಾರಣ ಬ್ರಿಟನ್ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇಷ್ಟೇ ಅಲ್ಲ ಈಗಾಗಲೇ ಬ್ರಿಟನ್‌ನಿಂದ ವಿಶ್ವಕ್ಕೆ ರೂಪಾಂತರ ಕೊರೋನಾ ವರೈಸ ಹಬ್ಬುತ್ತಿದೆ. ಈ ಚೈನ್ ತಪ್ಪಿಸಲು ಬ್ರಿಟನ್ ಎಲ್ಲಾ ಪ್ರಯತ್ನ ಮಾಡಲಿದೆ. ಹೀಗಾಗಿ ಭಾರತ ಪ್ರವಾಸವನ್ನು ರದ್ದು ಮಾಡುವುದಾಗಿ ಮೋದಿ ಬಳಿ ಹೇಳಿದ್ದಾರೆ.
ಗಣರಾಜ್ಯೋತ್ಸವಕ್ಕೆ ಭಾರತ ಎಲ್ಲಾ ತಯಾರಿ ಮಾಡಿಕೊಂಡಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ವಾಗತಿಸಲು ನಾವೆಲ್ಲ ಸಜ್ಜಾಗಿದ್ದೇವೆ. ಆದರೆ ಕೊರೋನಾ ಕಾರಣ ಬರಲಾಗುತ್ತಿಲ್ಲ. ಇದಕ್ಕೆ ವಿಷಾಕ ವ್ಯಕ್ತಪಡಿಸುತ್ತೇನೆ ಎಂದು ಮೋದಿ ಜಾನ್ಸನ್‌ಗೆ ಹೇಳಿದ್ದಾರೆ ಎಂದು ರಾಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬ್ರಿಟನ್‌ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ರೂಪಾಂತರ ವೈರಸ್ ಹರಡದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಬ್ರಿಟನ್‌ನಲ್ಲೇ ಇದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮಿನಸಬೇಕಿದೆ. ಇಷ್ಟೇ ಅಲ್ಲ ದೊಡ್ಡ ನಿಯೋಗದ, ಭದ್ರತೆ, ಅಧಿಕಾರಿಗಳ ಜೊತೆ ಭಾರತ ಪ್ರವಾಸ ಕೈಗೊಳ್ಳುವುದು ಎರಡೂ ದೇಶಗಳ ವೈರಸ್ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಲ್ಲ ಎಂದು ಜಾನ್ಸನ್ ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ