ಎಂ.ಕರುಣಾನಿಧಿ ಕುಟುಂಬದ ಕುಡಿ ಸ್ಟಾಲಿನ್‌ ಪುತ್ರನಿಗೆ ತಮಿಳುನಾಡು ಉಪ ಮುಖ್ಯಮಂತ್ರಿ ಪಟ್ಟ?

By Kannadaprabha News  |  First Published Jul 19, 2024, 5:55 AM IST

ತಮಿಳುನಾಡಿನ ಎಂ.ಕರುಣಾನಿಧಿ ಕುಟುಂಬದ ಕುಡಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್‌ ತಮಿಳುನಾಡು ಉಪಮುಖ್ಯಮಂತ್ರಿಯಾಗಿ ಪದೋನ್ನತಿ ಹೊಂದುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.


ಚೆನ್ನೈ (ಜು.19): ತಮಿಳುನಾಡಿನ ಎಂ.ಕರುಣಾನಿಧಿ ಕುಟುಂಬದ ಕುಡಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್‌ ತಮಿಳುನಾಡು ಉಪಮುಖ್ಯಮಂತ್ರಿಯಾಗಿ ಪದೋನ್ನತಿ ಹೊಂದುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಹಾಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಆಗಿರುವ ಉದಯನಿಧಿ(Udayanidhi Stalin) ಅವರನ್ನು ಆಗಸ್ಟ್‌ 22ರ ಮೊದಲು ಉಪಮುಖ್ಯಮಂತ್ರಿಯಾಗಿ ಬಡ್ತಿ ಮಾಡಲು ನಿರ್ಧರಿಸಲಾಗಿದೆ. ಏಕೆಂದರೆ ಆ ವೇಳೆ ಸ್ಟಾಲಿನ್‌ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲೇ ಇದು ನಡೆಯಲಿದೆ ಎಂದು ಅವು ಹೇಳಿವೆ.

Tap to resize

Latest Videos

ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ: ಭಾಗ್ವತ್‌

ತಂದೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹಾಗೂ 2 ಹಂತದ ನಾಯಕತ್ವವನ್ನು ಬಲಪಡಿಸಲು ಉದಯನಿಧಿ ಬಡ್ತಿಗೆ ಕುಟುಂಬ ಹಾಗೂ ಪಕ್ಷದಲ್ಲೇ ಒತ್ತಾಯ ಇತ್ತು. ಇದಲ್ಲದೆ 2026ರ ತಮಿಳುನಾಡು ವಿಧಾನಸಭೆ ಚುನಾವಣೆ(Tamilnadu assembly election 2024)ಯಲ್ಲಿ ನಟ ವಿಜಯ್‌(Actor vijay) ಅವರ ನೂತನ ಪಕ್ಷ ಸ್ಪರ್ಧಿಸಲಿದೆ. ಹೀಗಾಗಿ ವಿಜಯ್‌ ಪ್ರಭಾವವನ್ನು ಹತ್ತಿಕ್ಕಲು ನಟರೂ ಆಗಿದ್ದ ಉದಯನಿಧಿ ಚರಿಷ್ಮಾ ಅತ್ಯಗತ್ಯ ಎಂದು ಡಿಎಂಕೆ ನಾಯಕರ(DMK leaders) ಅಭಿಪ್ರಾಯ. ಅದಕ್ಕೆ ಈಗ ಉದಯನಿಧಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸನಾತನ ಧರ್ಮ ಅವಹೇಳನ ಪ್ರಕರಣ; ಉದಯ್ ನಿಧಿ ಸ್ಟಾಲಿನ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್

ಅಪ್ಪ-ಮಗ ಸಿಎಂ-ಡಿಸಿಎಂ ಮೊದಲಲ್ಲ:

ಈ ಮುನ್ನ ಎಂ. ಕರುಣಾನಿಧಿ ತಮಿಳುನಾಡು ಸಿಎಂ ಆಗಿದ್ದಾಗ ಪುತ್ರ ಸ್ಟಾಲಿನ್‌ ಡಿಸಿಎಂ ಆಗಿದ್ದರು. ಅದೇ ರೀತಿ ಪಂಜಾಬ್‌ನಲ್ಲಿ ಅಕಾಲಿದಳ ನಾಯಕ ಪ್ರಕಾಶ ಸಿಂಗ್‌ ಬಾದಲ್‌ ಸಿಎಂ ಆಗಿದ್ದಾಗ ಪುತ್ರ ಸುಖಬೀರ್‌ ಬಾದಲ್‌ ಡಿಸಿಎಂ ಆಗಿದ್ದರು.

click me!