ಟೆಲಿಕಾಂ ಕಂಪನಿಗಳು 5ಜಿ ಮೊಬೈಲ್ ಹ್ಯಾಂಡ್‌ಸೆಟ್ ಹೊಂದಿರುವ ಬಳಕೆದಾರರಿಗೆ ಹಾಲಿ ನೀಡುತ್ತಿರುವ ಅನ್‌ಲಿಮಿಟೆಡ್ ಸೇವೆಗಳು ಶೀಘ್ರವೇ ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಿವೆ ಎಂದು ವರದಿಯೊಂದು ತಿಳಿಸಿವೆ.
ನವದೆಹಲಿ: ಟೆಲಿಕಾಂ ಕಂಪನಿಗಳು 5ಜಿ ಮೊಬೈಲ್ ಹ್ಯಾಂಡ್‌ಸೆಟ್ ಹೊಂದಿರುವ ಬಳಕೆದಾರರಿಗೆ ಹಾಲಿ ನೀಡುತ್ತಿರುವ ಅನ್‌ಲಿಮಿಟೆಡ್ ಸೇವೆಗಳು ಶೀಘ್ರವೇ ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಿವೆ ಎಂದು ವರದಿಯೊಂದು ತಿಳಿಸಿವೆ.
ಹಾಲಿ ಜಿಯೋ, ಏರ್‌ಟೆಲ್ ಕಂಪನಿಗಳು, ತಮ್ಮ ಗ್ರಾಹಕರಿಗೆ 4ಜಿ ದರದಲ್ಲೇ 5ಜಿ ಸೇವೆಯನ್ನೂ ನೀಡುತ್ತಿವೆ. ಜೊತೆಗೆ ಡಾಟಾ ಬಳಕೆಗೂ ದೈನಂದಿನ ಮಿತಿ ತೆಗೆದು ಹಾಕಿವೆ. ಆದರೆ ಆದಾಯ ಮತ್ತು ಬಂಡವಾಳ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಭಾರ್ತಿ ಏರ್‌ಟೆಲ್ ಮತ್ತು ರಿಯಲನ್ಸ್ ಜಿಯೋ ಕಂಪನಿಗಳು ಈ ವರ್ಷದ ದ್ವಿತೀಯಾರ್ಧದಿಂದ ಬೆಲೆಯನ್ನು ಶೇ.5-10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿವೆ ಎಂದು ವರದಿ ತಿಳಿಸಿದೆ.
ಈ ಎರಡು ಕಂಪನಿಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ 5ಜಿ ಸೇವೆ ಒದಗಿಸುತ್ತಿವೆ. ಈ ಸಂಸ್ಥೆಗಳು 12.5 ಕೋಟಿ 5ಜಿ ಬಳಕೆದಾರರನ್ನು ಹೊಂದಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ವೊಡಾಫೋನ್ ಐಡಿಯಾ ಒಡೆತನದ ವಿಐ ಇನ್ನು 5ಜಿ ಸೇವೆಯ ಆರಂಭಿಕ ಹಂತದಲ್ಲಿವೆ.
ಜ.18ಕ್ಕೆ ವಿಚಾರಣೆಗೆ ಬನ್ನಿ: ಸಿಎಂ ಕೇಜ್ರಿಗೆ ಇ.ಡಿ. ನಾಲ್ಕನೇ ಸಮನ್ಸ್
ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದ ಮೂರು ವಿಚಾರಣೆಗೆ ಚಕ್ಕರ್ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜ.18ಕ್ಕೆ ವಿಚಾರಣೆಗೆ ಬರುವಂತೆ ಇ.ಡಿ. ಇದೀಗ 4ನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಆದರೆ ಜ.19 ಮತ್ತು 20ರಂದು ಕೇಜ್ರಿವಾಲ್ ಗೋವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಿಗದಿಯಾಗಿದೆ. ಹೀಗಾಗಿ ಈ ಬಾರಿಯೂ ಕೇಜ್ರಿ ವಿಚಾರಣೆಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ನ.2, ಡಿ.21 ಮತ್ತು ಜ.3 ರಂದು ಇಡಿ ವಿಚಾರಣೆಗೆ ಕೇಜ್ರಿವಾಲ್ ಹಾಜರಾಗಿರಲಿಲ್ಲ. ಅಲ್ಲದೇ ಲೋಕಸಭೆ ಚುನಾವಣೆ ಮುನ್ನ ನನ್ನನ್ನು ಬಂಧಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸಿದೆ ಎಂದು ಆಕ್ರೋಶಿಸಿದ್ದರು.