ಗೋಹತ್ಯೆ, ಲವ್‌ಜಿಹಾದ್ ತಡೆದರೆ ಬೋಗಸ್ ಕೇಸ್ ಹಾಕ್ತಾರೆ ವಿನಃ ಗಲ್ಲಿಗೇರಿಸೊಲ್ಲ: ಪ್ರಮೋದ್ ಮುತಾಲಿಕ್
ರಾಜ್ಯದಲ್ಲಿ ನಿಷೇಧಿಸಲಾಗಿರುವ ಗೋ ಹತ್ಯೆ ಹಾಗೂ ಲವ್ ಜಿಹಾದ್ ತಡೆದ ಯುವಕರ ಮೇಲೆ ಪೊಲೀಸರು ಬೋಗಸ್ ಕೇಸ್ ಹಾಕುತ್ತಾರೆ. ಇದಕ್ಕೆ ಯುವಜನರು ಹೆದರಬಾರದು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಬೆಳಗಾವಿ (ಜ.12): ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ, ಲವ್ ಜಿಹಾದ್ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಹೀಗಿದ್ದರೂ ಗೋಹತ್ಯೆ ನಿಂತಿಲ್ಲ, ಲವ್ ಜಿಹಾದ್ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಬೋಗಸ್ ಪ್ರಕರಣ ದಾಖಲಾಗತ್ತಿವೆ. ಕೇಸ್ ದಾಖಲಾದ್ರೆ ಸರ್ಕಾರಿ ನೌಕರಿ ಸಿಗಲ್ಲ ಎಂದು ಪೊಲೀಸರು ಯುವಕರಿಗೆ ಸುಳ್ಳು ಹೇಳಿ ಹೆದರಿಸುತ್ತಾರೆ. ಬೋಗಸ್ ಕೇಸ್ ಬಿದ್ರೆ ಯಾರೂ ನಮ್ಮನ್ನು ಗಲ್ಲಿಗೆ ಹಾಕಲ್ಲ, ಯುವ ಸಮೂಹ ಹೆದರಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಬೆಳಗಾವಿಯ ಪೀರನವಾಡಿಯಲ್ಲಿ ನಡೆದ ಹಿಂದೂ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ, ಲವ್ ಜಿಹಾದ್ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಹೀಗಿದ್ದರೂ ಗೋಹತ್ಯೆ ನಿಂತಿಲ್ಲ, ಲವ್ ಜಿಹಾದ್ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗ್ತಿವೆ. ಧರ್ಮ ಜಾಗೃತಿಯ ಕೆಲಸ ಮಾಡ್ತಿರುವ ನಮ್ಮ ಮೇಲೆ ಕೇಸ್ ದಾಖಲಿಸುತ್ತೇವೆ ಅಂತಿರಿ. ರಾಜ್ಯದಲ್ಲಿರುವುದು ಪೊಲೀಸ್ ಡಿಪಾರ್ಟ್ಮೆಂಟ್ ಅಲ್ಲ, ರಾಜಕೀಯ ಪಕ್ಷಗಳ ಮಾತು ಕೇಳುವ ಡಿಪಾರ್ಟ್ಮೆಂಟ್ ಆಗಿದೆ. ನನ್ನ ವಿರುದ್ಧ 110 ಕೇಸ್‌ಗಳಿವೆ, ನಾನು ನಾಟ್‌ಔಟ್ ಇದ್ದೇನೆ. ನನ್ನ ವಿರುದ್ಧ ಸಾವಿರ ಪ್ರಕರಣಗಳನ್ನು ದಾಖಲಿಸಿದರೂ ನಾನು ಹೆದರಲ್ಲ ಎಂದು ಹೇಳಿದರು.
ಯಾರಾದ್ರೂ ರಾಮ ಮಂದಿರ ಕೆಡವಿ ಮಸೀದಿ ಕಟ್ಟಿದರೆ, ಅವರಪ್ಪನಿಗೆ ಹುಟ್ಟಿದೋನು ಅಂತೀನಿ: ಕೆ.ಎಸ್.ಈಶ್ವರಪ್ಪ
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ನಡೆದರೂ ಪೊಲೀಸರಿಗೆ ಬುದ್ಧಿ ಬಂದಿಲ್ಲ. ಮುಸ್ಲಿಂ ಗುಂಡಾಗಳೇ ಪೊಲೀಸ್ ಠಾಣೆ ಸುಟ್ಟರೂ ರಾಜ್ಯದ ಪೊಲೀಸರಿಗೆ ಬುದ್ಧಿ ಬರ್ತಿಲ್ಲ. ಗುಂಡಾಶಕ್ತಿ ತಡೆಯುವ ಯುವ ಸಮೂಹಕ್ಕೆ ಪೊಲೀಸರು ಪ್ರೇರಣೆ ಆಗಬೇಕು. ಅದನ್ನು ಬಿಟ್ಟು ಗೂಂಡಾಶಕ್ತಿ ಮಟ್ಟಹಾಕುವ ಯುವಕರ ಮೇಲೆ ಕೇಸ್ ಹಾಕ್ತಿರಾ? ಹಿಂದೂರಾಷ್ಟ್ರ ಉಳಿಸಲೆಂದೇ ಯುವ ಸಮ್ಮಿಲನ ಮಾಡುತ್ತಿದ್ದೇವೆ. ಕೇಸ್ ದಾಖಲಾದ್ರೆ ಸರ್ಕಾರಿ ನೌಕರಿ ಸಿಗಲ್ಲ ಎಂದು ಯುವಕರನ್ನು ಪೊಲೀಸರು ಹೆದರಿಸುತ್ತಾರೆ. ಪೊಲೀಸರು ಹೇಳ್ತಿರುವುದು ಶುದ್ಧಸುಳ್ಳು, ಅವರು ಹಾಕೋ ಬೋಗಸ್ ಕೇಸ್ ಬಿದ್ರೆ ಯಾರೂ ನಮ್ಮನ್ನು ಗಲ್ಲಿಗೆ ಹಾಕಲ್ಲ, ಯುವ ಸಮೂಹ ಹೆದರಬಾರದು. ನಾವು ಮುಸ್ಲಿಂ ವಿರೋಧಿಗಳಲ್ಲ, ಗೋಹಂತಕರು ಮತ್ತು ದೇಶ ವಿರೋಧಿಗಳ ವಿರೋಧಿಗಳು ಎಂದು ಹೇಳಿದರು.
ಮೈಕ್ ಮೂಲಕ ಅಜಾನ್ ಕೂಗುವುದು ಸುಪ್ರೀಂ ಕೋರ್ಟ್ ಪ್ರಕಾರ ನಿಷೇಧ ಇದೆ. ಮೈಕ್ ಮೂಲಕ ಅಜಾನ್ ಕೂಗುತ್ತಿದ್ದರೂ ಪೊಲೀಸರೇನು ಕಿವಿಯಲ್ಲಿ ಹತ್ತಿ, ಶಗಣಿ ಹಾಕೊಂಡಿದ್ದಾರಾ? ಅಜಾನ್ ನೀವು ನಿಲ್ಲಿಸ್ತಿರೋ, ನಾವು ನಿಲ್ಲಿಸೋಣವೋ ಎಂದು ಪೊಲೀಸರಿಗೆ ಮುತಾಲಿಕ್ ಪ್ರಶ್ನೆ ಮಾಡಿದರು. ನಾವು ಗೋಹಂತಕರನ್ನು ವಿರೋಧಿಸುವುದನ್ನು ಬಿಟ್ಟು ಪೂಜೆ ಮಾಡಬೇಕೆ? ರಾಜ್ಯದಲ್ಲಿರುವುದು ನೀಚ ಕಾಂಗ್ರೆಸ್ ಸರ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳು ಮಾಂಸ ತಿನ್ನುತ್ತಾರೆ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗೋಹತ್ಯೆ ಮಾಡಿ ಗೋಮಾಂಸ ತಿನ್ನುವುದನ್ನು ನಾವು ವಿರೋಧಿಸುತ್ತೇವೆ. ಹಲವು ರಾಜಕೀಯ ನಾಯಕರು, ಬುದ್ಧಿಜೀವಿಗಳು ಸೊಕ್ಕಿನಿಂದ ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಿದ್ದಾರೆ. ಗೋಮಾಂಸ ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ. ಗೋಮಾಂಸ ತಿನ್ನುತ್ತೇವೆ ಎನ್ನುವ ನೀವು ಹಂದಿ ಏಕೆ ತಿನ್ನಲ್ಲ? ಆಕಳನ್ನು ತಿಂದ್ರೆ ನಮಗೆ ಸಿಟ್ಟು ಬರುತ್ತದೆ. ಈ ದೇಶದಲ್ಲಿ ಇರಲಾಗದಿದ್ರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಕಿಡಿ ಕಾರಿದರು.
ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್ ಕುಮಾರ್ ಹೆಗಡೆ
ನೂರು ವಂಶಗಳು ಬಂದ್ರೂ ಅಯೋಧ್ಯೆಯ ಒಂದು ಕಲ್ಲು ಅಲ್ಲಾಡಿಸಲು ಆಗಲ್ಲ: ಅಯ್ಯೋದ್ಯೆಯಲ್ಲೇ ರಾಮಮಂದಿರ ನಿರ್ಮಾಣ ಆಗ್ತಿದೆ. ಇಂಥ ಸಮಯದಲ್ಲಿ ಹಲವರು ಅಯೋಧ್ಯೆ ಸ್ಥಳದಲ್ಲಿ ಬಾಬ್ರಿ ಮಸೀದಿ ಕಟ್ಟುವ ಹೇಳಿಕೆ ನೀಡ್ತಿದ್ದಾರೆ. ಹೀಗೆ ಹೇಳಿಕ ನೀಡುವವರ ನಾಳಿಗೆ ಕತ್ತರಿಸುವ ತಾಕತ್ತು ನಮ್ಮಲ್ಲಿ ಇಲ್ಲದಾಗಿದೆ. ಈ ಕಾರಣಕ್ಕೆ ಹಲವರು ಈ ರೀತಿಯ ಸೊಕ್ಕಿನ ಹೇಳಿಕೆ ನೀಡುತ್ತಿದ್ದಾರೆ. ನೂರು ವಂಶ ಹೋದರೂ ಅಯೋದ್ಯೆಯ ಒಂದು ಕಲ್ಲು ಅಲ್ಲಾಡಿಸಲು ಆಗಲ್ಲ. ಈ ದೇಶದ ಅನ್ನ ತಿಂದು ಹೀಗೆ ಬೊಗಲುವುದನ್ನು ನಿಲ್ಲಿಸಬೇಕು ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ರಾಮಮಂದಿರ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಲ್ಲಿ ಹೇಳಿಕೆ: ದೇಶದ ಹಲವು ಕಡೆ ರಾಮಮಂದಿರಗಳು ಇದ್ದವು. ಆದರೆ, ಬಾಬರ್ ದೆಹಲಿಯಿಂದ ಅಯೋಧ್ಯೆಗೆ ಹೋಗಿ ರಾಮಮಂದಿರ ದ್ವಂಸಗೊಳಿಸಿದನು. ರಾಮನ ಜನ್ಮಭೂಮಿ ಅಯೋಧ್ಯೆ ಎಂಬ ಕಾರಣಕ್ಕೆ ಬಾಬರ್ ಈ ಮಂದಿರ ದ್ವಂದಗೊಳಿಸಿದ. ರಾಮಮಂದಿರ ಹಿಂದೂಗಳ ಸ್ವಾಭಿಮಾನ ಸಂಕೇತವಾಗಿತ್ತು. ಅದಕ್ಕೆ ಅಯೋಧ್ಯೆಯ ರಾಮಮಂದಿರ ಒಡೆಯಲಾಯಿತು. ಆದರೆ, ಸಿದ್ದರಾಮಯ್ಯ ನಮ್ಮೂರಿನ ರಾಮಮಂದಿರಕ್ಕೆ ಹೋಗುವೆ ಎಂದು ಹೇಳಿಕೆ ನೀಡ್ತಾರೆ. ಅಯೋಧ್ಯೆ ರಾಮನ ಜನ್ಮಸ್ಥಳ ಒಡೆದರೆ ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತೆ ಎಂದು ಬಾಬರ್‌ಗೆ ಗೊತ್ತಾಗಿತ್ತು. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮಹತ್ವ ಸಿದ್ದರಾಮಯ್ಯಗೆ ಗೊತ್ತಾಗ್ತಿಲ್ಲ. ರಾಮ ಕೇವಲ ಆರ್‌ಎಸ್‌ಎಸ್, ಬಿಜೆಪಿಗೆ ಸೀಮಿತನಲ್ಲ, ಈತ ನೂರು ಕೋಟಿ ಹಿಂದೂಗಳ ರಾಮ. ಆದರೆ, ರಾಮಮಂದಿರ ಉದ್ಘಾಟನೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕಾರ ಮಾಡಿದೆ. ನಿಮ್ಮಂಥ ಪಾಪಿಗಳು ಮತ್ತೊಬ್ಬರಿಲ್ಲ. ಬರುವ ದಿನಗಳಲ್ಲಿ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನೇ ಸಂಹಾರ ಮಾಡ್ತಾರೆ ಎಂದು ಹೇಳಿದರು.