ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.80ರಷ್ಟು ಮೀಸಲು: ಉದ್ಧವ್ ಘೋಷಣೆ!

By Web DeskFirst Published Nov 28, 2019, 10:02 PM IST
Highlights

ಕೊನೆಗೂ ಅಂತ್ಯಗೊಂಡ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ| ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಅಸ್ತಿತ್ವಕ್ಕೆ| ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಪ್ರಮಾಣವಚನ| ಉದ್ಯೋಗದಲ್ಲಿ ಶೇ.80ರಷ್ಟು ಮೀಸಲಾತಿ ಘೋಷಣೆ ಅನುಷ್ಠಾನಕ್ಕೆ| ರೈತರ ಸಾಲಮನ್ನಾ ಮಾಡುವ ನಿರ್ಧಾರಕ್ಕೆ ಬದ್ಧ| 1 ರೂ. ಕ್ಲಿನಿಕ್, 10 ರೂ.ಗೆ ಊಟ, ತಿಂಡಿ ಆಶ್ವಾಸನೆ ಈಡೇರಿಕೆಗೆ ಸಜ್ಜು|

ಮುಂಬೈ(ನ.28): ತಿಂಗಳಿಗೂ ಹೆಚ್ಚಿನ ಕಾಲದ ಹಗ್ಗ ಜಗ್ಗಾಟದ ಬಳಿಕ, ಕೊನೆಗೂ ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿದೆ.

ಮುಂಬೈನ ಐತಿಹಾಸಿಕ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್’ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!

ಇನ್ನು ಅಧಿಕಾರಕ್ಕೇರುತ್ತಿದ್ದಂತೇ ವಿಖಾಸ್ ಅಘಾಡಿ ಸರ್ಕಾರ ಹಲವು ಘೋಷಣೆಗಳನ್ನು ಮಾಡಿದ್ದು, ಪ್ರಮುಖವಾಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ ನೀಡುವ ಆಶ್ವಾಸನೆ ನೀಡಿದೆ.

1 ರೂ. ಕ್ಲಿನಿಕ್, 10 ರೂ.ಗೆ ಊಟ, ತಿಂಡಿ ಹಾಗೂ ರೈತರ ಸಾಲ ಮನ್ನಾ ಮಾಡುವ ಘೋಷಣೆಗಳನ್ನೂ ಹೊಸ ವಿಕಾಸ್ ಅಘಾಡಿ ಸರ್ಕಾರ ಮಾಡಿದೆ. 

ನೂತನ ಸಿಎಂ ಉದ್ಧವ್ ಠಾಕ್ರೆ ಅಭಿನಂದಿಸಿ ಪ್ರಧಾನಿ ಮೋದಿ ಟ್ವಿಟ್!

ಪ್ರಮಾಣವಚನಕ್ಕೂ ಮುನ್ನ ನಾಲ್ಕು ಪುಟಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಿಡುಗಡೆ ಮಾಡಲಾಗಿದ್ದು, ಅದರಂತೆ ರೈತರ ಸಾಲ ಮನ್ನಾ, ಯುವಕರಿಗೆ ಉದ್ಯೋಗ, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ ಸೇರಿದಂತೆ ಹಲವು ಆಶ್ವಾಸನೆಗಳನ್ನು ಜಾರಿಗೆ ತರಲು ನಿರ್ಣಯಿಸಲಾಗಿದೆ.

ಈ ಯೋಜನೆಯ ಅಂಶಗಳ ಅನುಷ್ಠಾನಕ್ಕೆ ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಮಹಾ'ಸಿಎಂ ಗಾದಿಗೆ ಠಾಕ್ರೆ, ಸಿದ್ದು ಏನಾದ್ರೂ ಹೇಳ್ತಾರೆ ಬಿಟ್ರೆ: ನ.28ರ ಪ್ರಮುಖ ಸುದ್ದಿ!

click me!