
ಉದಯಪುರ (ಜು.02): ಇಲ್ಲಿ ಕಳೆದ 28ರಂದು ಹಿಂದೂ ಟೈಲರ್ ಕನ್ಹಯ್ಯಾಲಾಲ್ ಶಿರಚ್ಛೇದ ಮಾಡಿದ ಇಬ್ಬರು ಹಂತಕರು ಪಾಕಿಸ್ತಾನದ ನಂಟು ಹೊಂದಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ, ಹಂತಕರಲ್ಲಿ ಒಬ್ಬನಾದ ರಿಯಾಜ್ ಅಖ್ತರಿ, 2008ರ ನ.26ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯ ಸಂಕೇತಾಕ್ಷರವಾದ ‘2611’ ಸಂಖ್ಯೆಯಲ್ಲಿ ತನ್ನ ಬೈಕ್ ನೋಂದಣಿ ಮಾಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮುಂಬೈ ದಾಳಿ ನ.26ರಂದು ನಡೆದ ಕಾರಣ (26 ದಿನಾಂಕ, 11ನೇ ತಿಂಗಳು) ಆ ದಾಳಿ ‘26/11’ ದಾಳಿ ಎಂದೇ ಬಿಂಬಿತವಾಗಿತ್ತು. ಆ ದಾಳಿಯನ್ನು ಪಾಕಿಸ್ತಾನದ ಕಸಬ್ ನೇತೃತ್ವದ ಲಷ್ಕರ್ ಎ ತೊಯ್ಬಾ ಉಗ್ರರು ನಡೆಸಿದ್ದರು.
ಈಗ ರಿಯಾಜ್ ಬೈಕ್ ನೋಂದಣಿ ಸಂಖ್ಯೆ ‘ಆರ್‌ಜೆ 27 ಎಎಸ್ 2611’ ಎಂದಾಗಿದೆ. ಇದೇ ನೋಂದಣಿ ಸಂಖ್ಯೆ ಬೇಕೆಂದು 5,000 ರು. ಹೆಚ್ಚು ಹಣವನ್ನು ಆರ್‌ಟಿಒಗೆ ಅಖ್ತರಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕನ್ಹಯ್ಯಾನನ್ನು ಕೊಲೆ ಮಾಡಿ ಇದೇ ಬೈಕ್‌ನಲ್ಲಿ ರಿಯಾಜ್ ಪರಾರಿ ಆಗುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಬೈಕ್ ಈಗ ಉದಯಪುರದ ಮಂಡಿ ಪೊಲೀಸ್ ಠಾಣೆ ವಶದಲ್ಲಿದೆ.
ಇನ್ನು ನಂಬರ್ ಪ್ಲೇಟ್ ಆಧರಿಸಿ ಅಖ್ತರಿಯ ಪಾಕ್ ಸಂಪರ್ಕದ ಕುರಿತು ಮತ್ತಷ್ಟುತನಿಖೆ ನಡೆಯಲಿದೆ. ಏಕೆಂದರೆ 2014ರಲ್ಲಿ ಅಖ್ತರಿ ಪಾಕ್‌ಗೆ ಹೋಗಿ ಬಂದಿದ್ದ ಹಾಗೂ ದಾವತ್ ಎಂಬ ಪಾಕಿಸ್ತಾನಿ ಇಸ್ಲಾಮಿಕ್ ಧಾರ್ಮಿಕ ಸಂಘಟನೆ ಸದಸ್ಯನಾಗಿದ್ದ. ಆತ ಪಾಕ್‌ಗೆ ಹಲವಾರು ಬಾರಿ ಕರೆ ಮಾಡಿದ್ದನ್ನೂ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ