ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!

By Santosh NaikFirst Published Jun 30, 2022, 4:35 PM IST
Highlights

ಉದಯಪುರದಲ್ಲಿ ಹಾಡುಹಗಲೇ ತಮ್ಮ ಅಂಗಡಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಭೀಕರವಾಗಿ ಹತ್ಯೆಗೀಡಾದ ಕನ್ಹಯ್ಯಲಾಲ್‌ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಆನ್‌ ಲೈನ್‌ನಲ್ಲಿ 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ ಸಂಪಾದನೆ ಮಾಡಿದ್ದಾರೆ. ಕ್ರೌಡ್‌ ಫಂಡಿಂಗ್ ಮೂಲಕ ಈ ಹಣವನ್ನು ಪಡೆಯಲಾಗಿದ್ದು, ಶೀಘ್ರವೇ ಕನ್ಹಯ್ಯಲಾಲ್ ಪತ್ನಿಗೆ ಈ ಹಣ ನೀಡುವುದಾಗಿ ತಿಳಿಸಿದ್ದಾರೆ.

ನವದೆಹಲಿ (ಜೂನ್ 30): ರಾಜಸ್ಥಾನದ (Rajasthan) ಉದಯಪುರದಲ್ಲಿ ನಡೆದ ಬರ್ಬರ ಘಟನೆಯಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಟೈಲರ್‌ ಕನ್ಹಯ್ಯಲಾಲ್‌ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಬಿಜೆಪಿ ನಾಯಕ (BJP Leader) ಕಪಿಲ್‌ ಮಿಶ್ರಾ ಘೋಷೀಸಿದ್ದಾರೆ. ಕನ್ಹಯ್ಯಲಾಲ್‌ ಹತ್ಯೆಯಾದ ಬೆನ್ನಲ್ಲಿಯೇ ಅವರ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕ್ರೌಡ್‌ ಫಂಡಿಂಗ್‌ ಮೂಲಕ ಸಮಾಜದ ಜನರಿಂದ ಈ ಹಣವನ್ನು ಸಂಗ್ರಹಿಸಲಾಗಿದೆ.

ಕನ್ಹಯ್ಯಲಾಲ್‌ ಅವರ ಮೇಲೆ ರಿಯಾಜ್‌ ಅಟ್ಟಾರಿ ಹಾಗೂ ಮೊಹಮದ್ ಗೌಸ್ ಹತ್ಯೆ ಮಾಡುವ ವೇಳೆ, ಕನ್ಹಯ್ಯರನ್ನು ರಕ್ಷಿಸುವ ವೇಳೆ ಗಾಯಗೊಂಡಿರುವ ಈಶ್ವರ್‌ ಸಿಂಗ್‌ ಹಾಗೂ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.  ತಾವು ಹಾಗೂ ತಮ್ಮ ಕಾರ್ಯಕರ್ತರೊಂದಿಗೆ ಉದಯಪುರಕ್ಕೆ (Udaipur) ಹೋಗಿ ಅವರ ಕುಟುಂಬಕ್ಕೆ ಈ ಹಣವನ್ನು ಹಸ್ತಾಂತರ ಮಾಡಲಿರುವುದಾಗಿ ಕಪಿಲ್‌ ಮಿಶ್ರಾ (Kapil Mishra) ತಿಳಿಸಿದ್ದಾರೆ.

ಈ ಕುರಿತಾಗಿ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದು, ಇಂದು ಇಡೀ ಹಿಂದೂ ಸಮಾಜವು (hindu community) ಕನ್ಹಯ್ಯಾ ಲಾಲ್ ಅವರ ಕುಟುಂಬದೊಂದಿಗೆ ನಿಂತಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಅವರು ಶೀಘ್ರದಲ್ಲೇ ಈ ಹಣವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಿದ್ದಾರೆ. ಅವರು ಇಂದು ಮೃತ ಕನ್ಹಯ್ಯಲಾಲ್ ಅವರ ಮಗನಿಗೆ ಸಾಂತ್ವನ ಹೇಳಿದರು ಮತ್ತು ಸಾಧ್ಯವಿರುವ ಎಲ್ಲ ಸಹಾಯಕ್ಕಾಗಿ ಕುಟುಂಬದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.

ಉದಯಪುರದಲ್ಲಿ ನೂಪುರ್ ಶರ್ಮ (Nupur Sharma) ಅವರನ್ನು ಬೆಂಬಲಿಸಿದ್ದಕ್ಕಾಗಿ ಹಿಂದೂ ಕನ್ಹಯ್ಯಲಾಲ್‌ನ ಶಿರಚ್ಛೇದ ಮಾಡಿದ ನಂತರ, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದೆ. ಜನರು ರಸ್ತೆಗೆ ಕಲ್ಲು ತೂರುತ್ತಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಹೊರತಾಗಿ, ಮಂಗಳವಾರದಂದು ಟೈಲರ್ ಕನ್ಹಯ್ಯಾಲಾಲ್ ಹತ್ಯೆಯ ನಂತರ ನಿರ್ಲಕ್ಷ್ಯದ ಕಾರಣಕ್ಕಾಗಿ ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಭನ್ವರ್ ಲಾಲ್ ಅವರನ್ನು ಅಮಾನತುಗೊಳಿಸಲಾಗಿದೆ.

ಉದಯಪುರ ಘಟನೆಯ ನಂತರ ಇಡೀ ರಾಜಸ್ಥಾನದಲ್ಲಿ ಇಂಟರ್ನೆಟ್ ಸೇವೆಯನ್ನು ನಿಲ್ಲಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆ ಅಮಾನತಿನಲ್ಲಿ ಇರಲಿದೆ. ಇದಲ್ಲದೇ ಒಂದು ತಿಂಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 

ಈ ಕುರಿತಾಗಿ ಮಾತನಾಡಿದ ಮಿಶ್ರಾ, 2020 ರಲ್ಲಿ ದೆಹಲಿ ಗಲಭೆಯ ನಂತರ ಹಿಂದೂ ಕುಟುಂಬದ ಸಂತ್ರಸ್ತರಿಗೆ ನಿಧಿಸಂಗ್ರಹಿಸುವ ಆಲೋಚನೆಯನ್ನು ಪ್ರಾರಂಭಿಸಲಾಯಿತು. “ಮಾನವ ಹಕ್ಕುಗಳ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳು ಹಿಂದೂ ಸಂತ್ರಸ್ತರ ದುಃಸ್ಥಿತಿಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ಹಾಗಾಗಿ ದೆಹಲಿ ಗಲಭೆಯ ನಂತರ ನಾವು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಎಲ್ಲಾ ಹಿಂದೂ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ, ”ಎಂದು ಅವರು ಹೇಳಿದರು.

Kanhaiya Lal Murder: ಕನ್ಹಯ್ಯಾ ಹಂತಕರನ್ನು ಗಲ್ಲಿಗೇರಿಸಿ: ಶಿರಚ್ಛೇದಕ್ಕೆ ಹಿಂದೂಗಳ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆ

“ನಾವು ಕನ್ಹಯ್ಯಲಾಲ್‌ ಮಕ್ಕಳು ಮತ್ತು ಹೆಂಡತಿಯನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವಿಲ್ಲ. ಅವರಿಗೆ ಏನಾಗುತ್ತದೆ ಎಂಬುದು ಪ್ರಶ್ನೆಯಾಗಿತ್ತು. ಇದೇ ಕಾರಣಕ್ಕೆ ಮೊದಲ ದಿನವೇ ಈ ಪ್ರಕ್ರಿಯೆ ಆರಂಭವಾಗಿದೆ. ಅದೃಷ್ಟವಶಾತ್, ಇಲ್ಲಿಯವರೆಗೆ, ಜಗತ್ತಿನಾದ್ಯಂತ 12,000 ಕ್ಕೂ ಹೆಚ್ಚು ಜನರು ಈ ಕಾರಣಕ್ಕೆ ಕೊಡುಗೆ ನೀಡಿದ್ದಾರೆ, ”ಎಂದು ಅವರು ಹೇಳಿದರು. ಕ್ರೌಡ್‌ ಫಂಡಿಂಗ್‌ನಲ್ಲಿ ಇಲ್ಲಿಯವರೆಗೆ 1.35 ಕೋಟಿ ರೂ.ಗಳನ್ನು ಸಂಗ್ರಹಿಸಿದೆ, ಒಂದು ತಿಂಗಳ ಗುರಿಯನ್ನು ಕೇವಲ 24 ಗಂಟೆಗಳಲ್ಲಿ ತಲುಪಿದ್ದೇವೆ ಎಂದು ಹೇಳಿದ್ದಾರೆ.

ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ, ನನ್ನ ಕತ್ತನ್ನು ಸೀಳಬೇಡಿ: ಅಭಿಯಾನ ಶುರು

ರಾಜಸ್ಥಾನ ಸರ್ಕಾರದಿಂದ 51 ಲಕ್ಷ: ಗುರುವಾರ ಉದಯಪುರದಲ್ಲಿ ಕನ್ಹಯ್ಯಲಾಲ್‌ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗ್ಲೆಹೊಟ್‌, 51 ಲಕ್ಷ ರೂಪಾಯಿಗಳ ಚೆಕ್‌ ಅನ್ನು ಹಸ್ತಾಂತರ ಮಾಡಿದರು. ಇದು ಯಾವುದೇ ಎರಡು ಸಮುದಾಯಗಳ ನಡುವಿನ ಘಟನೆಯಲ್ಲ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಹೇಳಿದರು.

Latest Videos

click me!