ಪಾರ್ಟಿ ಬಳಿಕ ಮನೆಗೆ ಡ್ರಾಪ್‌ ಮಾಡ್ತಿನಿ ಅನ್ನೋ ಸಿಇಒ ಮಾತು ನಂಬಿ ಕಾರು ಹತ್ತಿದ ಮಹಿಳಾ ಮ್ಯಾನೇಜರ್‌ ಗ್ಯಾಂಗ್‌ರೇ*ಪ್‌!

Published : Dec 26, 2025, 12:06 PM IST
Udipur AI Image

ಸಾರಾಂಶ

ಉದಯಪುರದಲ್ಲಿ ಹೊಸ ವರ್ಷದ ಪಾರ್ಟಿ ಮುಗಿದ ನಂತರ ಐಟಿ ಕಂಪನಿಯ ಸಿಇಒ ಮತ್ತು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತನಗೆ ಲಿಫ್ಟ್ ಆಫರ್ ನೀಡಿ ಚಲಿಸುವ ಕಾರಿನಲ್ಲಿ ಅ*ತ್ಯಾಚಾರ ಮಾಡಿದ್ದಾರೆ ಎಂದು ಐಟಿ ಕಂಪನಿಯ ಮ್ಯಾನೇಜರ್‌ ಆರೋಪಿಸಿದ್ದಾರೆ. 

ನವದೆಹಲಿ (ಡಿ.26): ರಾಜಸ್ಥಾನದ ಉದಯಪುರದಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಮನೆಗೆ ಲಿಫ್ಟ್ ನೀಡುವ ಆಫರ್ ನೀಡಿ ಖಾಸಗಿ ಐಟಿ ಕಂಪನಿಯ ಮ್ಯಾನೇಜರ್ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಅ*ತ್ಯಾಚಾರ ಎಸಗಿದ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಸೆಂಬರ್ 20 ರಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯ ನಂತರ ಈ ಘಟನೆ ನಡೆದಿದೆ. ಮಹಿಳೆ ರಾತ್ರಿ 9 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿದರು ಮತ್ತು ಪಾರ್ಟಿ ಸುಮಾರು ಬೆಳಗಿನ ಜಾವ 1.30 ರವರೆಗೆ ನಡೆಯಿತು. ಪಾರ್ಟಿಗೆ ಬಂದ ಬೆಸ್ಟ್‌ಗಳು ಹೊರಡಲು ಪ್ರಾರಂಭಿಸಿದಾಗ, ಮಹಿಳಾ ಮ್ಯಾನೇಜರ್‌ ಒಬ್ಬರು ಬಾಕಿ ಉಳಿದಿದ್ದರು.

 ಈ ಹಂತದಲ್ಲಿ ಕಂಪನಿಯ ಸಿಇಒ ಜಿತೇಶ್ ಸಿಸೋಡಿಯಾ, ಕಾರ್ಯನಿರ್ವಾಹಕ (executive) ಗೌರವ್‌ ಹಾಗೂ ಕಂಪನಿಯಲ್ಲಿ ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ಆಗಿದ್ದ ಗೌರವ್‌ ಅವರ ಪತ್ನಿ ಶಿಲ್ಪಾ, ಆಕೆಯನ್ನು ಮನೆಗೆ ಬಿಡಲು ಮುಂದಾದರು ಎಂದು ಸಂತ್ರಸ್ಥ ಸಹೋದ್ಯೋಗಿ ಆರೋಪಿಸಿದ್ದಾರೆ.

ಈ ಹಂತದಲ್ಲಿ ಶಿಲ್ಪಾ, ಸಂತ್ರಸ್ಥ ಮಹಿಳೆಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರ್‌ನಲ್ಲಿ ಆಕೆಯ ಪತಿ ಗೌರವ್‌ ಹಾಗೂ ಐಐಟಿ ಪಾಸ್ ಔಟ್ ಆಗಿರುವ ಸಿಇಒ ಜಿತೇಶ್ ಸಿಸೋಡಿಯಾ ಇದ್ದರು ಎನ್ನಲಾಗಿದೆ. ಮಾರ್ಗದ ನಡುವೆ ಅಂಗಡಿಯೊಂದರಿಂದ ಸಿಗರೇಟ್‌ ಖರೀದಿ ಮಾಡಿ ಮಹಿಳೆಗೆ ನೀಡಿದ್ದರು. ಸಂತ್ರಸ್ಥ ಮಹಿಳೆ ಸಿಗರೇಟ್‌ ಸೇದಿದ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ.

ಭಾಗಶಃ ಪ್ರಜ್ಞೆ ಬಂದಾಗ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ

ಸಂತ್ರಸ್ಥೆ ಉದ್ಯೋಗಿ ಹೇಳುವಂತೆ, ಆಕೆಗೆ ಒಂದು ಹಂತದಲ್ಲಿ ಭಾಗಶಃ ಪ್ರಜ್ಞೆ ಬಂದಾಗ, ಸಿಇಒ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಅದಾದ ನಂತರ ಮೂವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಬೆಳಿಗ್ಗೆ 5 ಗಂಟೆ ಸುಮಾರಿಗೆ ಆಕೆಯನ್ನು ಮನೆಗೆ ಬಿಡಲಾಯಿತು. ಪೂರ್ಣ ಪ್ರಜ್ಞೆ ಬಂದಾಗ, ತನ್ನ ಕಿವಿಯೋಲೆ, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿವೆ ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಮೂವರು ಆರೋಪಿಗಳಾದ ಕಂಪನಿಯ ಸಿಇಒ ಜಿತೇಶ್, ಸಹ-ಆರೋಪಿ ಗೌರವ್ ಮತ್ತು ಅವರ ಪತ್ನಿ ಶಿಲ್ಪಾ ಅವರನ್ನು ಬಂಧಿಸಲಾಯಿತು.

IT firm CEO Jitesh Sisodia (left), Executive head's husband Gaurav Sirohi (right).

ಸಾಮೂಹಿಕ ಅ*ತ್ಯಾಚಾರ ದೃಢ

ವೈದ್ಯಕೀಯ ವರದಿಯು ಗಾಯದ ಗುರುತುಗಳನ್ನು ದೃಢಪಡಿಸಲಾಗಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ಹೇಳಿದ್ದಾರೆ, ಇದು ಪ್ರಾಥಮಿಕವಾಗಿ ಸಾಮೂಹಿಕ ಅ*ತ್ಯಾಚಾರದ ಪುರಾವೆಗಳನ್ನು ಸೂಚಿಸುತ್ತದೆ. ಘಟನೆಯ ಸಮಯದಲ್ಲಿ ಧ್ವನಿಗಳನ್ನು ಸೆರೆಹಿಡಿಯಲಾಗಿದೆ ಎನ್ನಲಾದ ಕಾರಿನಲ್ಲಿ ಅಳವಡಿಸಲಾದ ಡ್ಯಾಶ್‌ಕ್ಯಾಮ್‌ನಿಂದ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ, ಇದು ತನಿಖೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!
online betting app tragedy: ಆನ್ಲೈನ್ ಬೆಟ್ಟಿಂಗ್‌ನಲ್ಲಿ ಒಂದು ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಸಾವಿಗೆ ಶರಣು