ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ‍್ಯಾಪಿಡೋ ಚಾಲಕನ ₹331 ಕೋಟಿ

Published : Nov 28, 2025, 09:50 PM IST
rapido driver

ಸಾರಾಂಶ

ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ‍್ಯಾಪಿಡೋ ಚಾಲಕನ ₹331 ಕೋಟಿ, ರ‍್ಯಾಪಿಡೋ ಚಾಲಕನಾಗಿ ಕೆಲಸ ಬಿಟ್ಟು ಈತನಿಗೆ ಬೇರೇನೂ ಕೆಲಸವಿಲ್ಲ. ಆದರೆ ಕೋಟಿ ಕೋಟಿ ರೂಪಾಯಿ ವಹಿವಾಟು ಮೂಲ ಹಲವು ಅಚ್ಚರಿಗೆ ಕಾರಣವಾಗಿದೆ. 

ನವದೆಹಲಿ (ನ.28) ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇಧಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ವರ್ಗಾವಣೆ, ವಹಿವಾಟುಗಳು ಇಡಿ ಅಧಿಕಾರಿಳಿಗೆ ಅಚ್ಚರಿಯಲ್ಲ. ಆದರೆ ರ‍್ಯಾಪಿಡೋ ಚಾಲಕನ ಖಾತೆ, ಆತನ ಖರ್ಚು ವೆಚ್ಚ ನೋಡಿ ಇಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಕಾರಣ ಈ ರ‍್ಯಾಪಿಡೋ ಚಾಲಕನಿಗೆ ಸಂಪರ್ಕವೇ ಇಲ್ಲದ, ಆತ್ಮೀಯರು ಅಲ್ಲ, ಗೆಳೆಯ, ಕುಟುಂಬಸ್ಥರು ಅಲ್ಲದ ಜೋಡಿಗಳ ಮದುವೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕೇವಲ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಇದೀಗ ರ‍್ಯಾಪಿಡೋ ಚಾಲಕ ಅರೆಸ್ಟ್ ಆಗಿದ್ದಾನೆ. ಇಷ್ಟೇ ಅಲ್ಲ ಈತನ ರೋಚಕ ಕತೆಗಳು ಹೊರಬಂದಿದೆ.

ಕೆಲಸ ಉಬರ್ ಬೈಕ್ ರೈಡರ್

ಈತನ ಕೆಲಸ ಕೇವಲ ಉಬರ್ ಬೈಕ್ ರೈಡಿಂಗ್ ಮಾತ್ರ. ಇದು ಬಿಟ್ಟರೆ ಬೇರೆ ಕೆಲಸವೇನು ಇಲ್ಲ. ಹಾಗಂತ 8 ಕ್ಕಿಂತ ಹೆಚ್ಚು ಗಂಟೆ ಈತ ಉಬರ್ ಚಾಲಕನಾಗಿ ಕೆಲಸ ಮಾಡಿಲ್ಲ. ವಾರದಲ್ಲಿ 2 ರಿಂದ 3 ದಿನ ರಜೆ. ದಿನಕ್ಕೆ 500 ರೂಪಾಯಿ ಮಾಡಿದರೇ ಅದೇ ಹೆಚ್ಚು ಈತನ ಆದಾಯ. ಆದರೆ ಈತನ ಖಾತೆ ನೋಡಿದರೆ ಆದಾಯಕ್ಕೂ ವಹಿವಾಟಿಗೂ ಸಂಬಂಧವಿಲ್ಲ. ಕಾರಣ ಆಗಸ್ಟ್ 2024ರಿಂದ ಎಪ್ರಿಲ್ 2025ರ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ. ಹಲವು ಅಪರಿಚಿತ ಖಾತೆಗಳಿಂದ ಈತನ ಖಾತೆಗೆ ಹಣ ಜಮೆ ಆಗಿದೆ. ಜೊತೆಗೆ ಹಲವು ಖಾತೆಗಳಿಗೆ ಈತನ ಹಣ ಪಾವತಿ ಮಾಡಿದ್ದಾನೆ.

ಉದಯಪುರದ ತಾಜ್ ರೆಸ್ಟೋರೆಂಟ್‌ನಲ್ಲಿನ ಮದುವೆ

ಗುಜರಾತ್‌ನ ಯುವ ರಾಜಕೀಯ ನಾಯಕ ಅದಿತ್ಯ ಝುಲಾ ಮದುವೆ ಉದಯಪುರದ ತಾಜ್ ಅರಾವಳಿ ರೆಸಾರ್ಟ್‌ನಲ್ಲಿ ನಡೆದಿತ್ತು. ಈ ಮದುವೆಗೆ ಇದೇ ರ‍್ಯಾಪಿಡೋ ಚಾಲಕ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಆದಿತ್ಯ ಝುಲಾಗೂ ಈ ಉಬರ್ ಚಾಲಕನಿಗೂ ಯಾವುದೇ ಸಂಪರ್ಕವಿಲ್ಲ. ಆದಿತ್ಯ ಝುಲಾಗೆ ಒಂದೇ ಒಂದು ಬಾರಿ ಫೋನ್ ಮಾಡಿಲ್ಲ. ಆದರೆ ಮದುವೆಯ ಹಲವು ಬಿಲ್, ಪಾವತಿಗಳನ್ನು ಇದೇ ರ‍್ಯಾಪಿಡೋ ಚಾಲಕ ಮಾಡಿದ್ದಾನೆ. ಇದರ ಒಟ್ಟು ಮೊತ್ತ 1 ಕೋಟಿ ರೂಪಾಯಿ.

ಈ ರ‍್ಯಾಪಿಡೋ ಚಾಲಕ ಬೇರೆ ಖಾತೆಗಳಿಗೆ ಹಣ ವರ್ಗಾಯಿಸುವ ಹಾಗೂ ಈತನ ಖಾತೆಗೆ ಹಣ ಜಮೆ ಮಾಡುವ ಎಲ್ಲಾ ಖಾತೆಗಳು ಅಪರಿಚಿತ. ಒಂದಕ್ಕೊಂದು ಸಂಬಂಧವೇ ಇಲ್ಲ. ಇದೇ ಕಾರಣದಿಂದ ಇಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಎಲ್ಲಾ ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಿದ ಇಡಿ ಅಧಿಕಾರಿಗಳಿಗೆ ಒಂದು ಖಾತೆ ಬೆಟ್ಟಿಂಗ್ ಖಾತೆಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ತನಿಖೆ ಮುಂದುವರಿಸಿದ ಇಡಿ ಅಧಿಕಾರಿಗಳಿಗೆ ಈ ರ‍್ಯಾಪಿಡೋ ಚಾಲಕ ಬೆಟ್ಟಿಂಗ್‌ನಲ್ಲೂ ಸಕ್ರಿಯವಾಗಿದ್ದಾರೆ. ಆದರೆ ಈತನ ಫೋನ್ ಸೇರಿದಂತೆ ಇತರ ಯಾವುದೇ ವೇದಿಕೆಗಳಲ್ಲಿ ಬೆಟ್ಟಿಂಗ್ ನಡೆಸಿದ ಮಾಹಿತಿ ಇಲ್ಲ.

ತನಿಖೆ ತೀವ್ರಗೊಳ್ಳುತ್ತಿದ್ದಂತ ಹಲವು ಅನಾಮಿಕ ಖಾತೆಗಳು, ಗೊತ್ತಿಲ್ಲದ ವ್ಯವಹಾರಗಳು ಬಯಲಾಗುತ್ತಿದೆ. ಹೀಗಾಗಿ ಈತನ ವ್ಯವಹಾರವೇನು? ಹಣದ ಮೂಲದ ಕುರಿತು ತೀವ್ರ ತನಿಖೆ ಮುಂದುವರಿದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ