
ನವದೆಹಲಿ: ರಾಜ್ಯದಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಯಾದಾಗಿನಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ (Woman Passengers) ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರು ಪರಸ್ಪರ ಎಳೆದಾಡಿಕೊಂಡು ಜಗಳ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ದೆಹಲಿಯ ಮೆಟ್ರೋದಲ್ಲಿ (Delhi Metro) ಇಬ್ಬರು ಮಹಿಳೆಯರು ಆಸನಕ್ಕಾಗಿ ಕಿತ್ತಾಡಿಕೊಂಡಿದ್ದಾರೆ. ಆದ್ರೆ ಮೆಟ್ರೋ ರೈಲು ಭಾಗಶಃ ಖಾಲಿಯಾಗಿತ್ತು. ಆದರೂ ಮಹಿಳೆಯರು (Woman fighting videos) ಜಗಳ ಮಾಡಿಕೊಂಡಿದ್ದು, ಈ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಮಹಿಳೆಯರು ಸೀಟ್ ಮತ್ತು ಒಬ್ಬರನ್ನೊಬ್ಬರು ತಳ್ಳಿದ್ದಾರೆ ಎಂದು ಜಗಳ ಮಾಡಿಕೊಂಡಿದ್ದಾರೆ. ನಾನು ತಳ್ಳಿಲ್ಲ ಎಂದು ಸ್ಪಷ್ಟನೆ ನೀಡುತ್ತಲೇ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಇನ್ನುಳಿದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕುಳಿತಿರೋದನ್ನು ನೋಡಬಹುದು.
ಮೇ 26ರಂದು ಘರ್ ಕೆ ಕಲೇಶ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೀಟ್‌ಗಾಗಿ ಮಹಿಳೆಯರ ಇಬ್ಬರ ನಡುವೆ ಜಗಳ ನಡೆಯುತ್ತಿದೆ ಎಂದು ಬರೆಯಲಾಗಿದೆ. ಈ ವಿಡಿಯೋಗೆ 100ಕ್ಕೂ ಅಧಿಕ ಕಮೆಂಟ್ ಬಂದಿದ್ದು, 68 ಸಾವಿರಕ್ಕೂ ಹೆಚ್ಚಕ್ಕೂ ಅಧಿಕ ವ್ಯೂವ ಪಡೆದುಕೊಂಡಿದೆ.
ದೆಹಲಿ ಮೆಟ್ರೋದಲ್ಲಿ ಯುವತಿಯರ ಹೋಳಿ ಸಂಭ್ರಮದ ವಿಡಿಯೋ ಡೀಪ್‌ಫೇಕ್ ? ಡಿಎಂಆರ್‌ಸಿ ಹೀಗೆ ಹೇಳಿದ್ದೇಕೆ!
ನೆಟ್ಟಿಗರ ಪ್ರತಿಕ್ರಿಯೆ ಏನು?
ಪ್ರತಿದಿನ ಈ ದೃಶ್ಯಗಳನ್ನು ನಾವು ನೋಡುತ್ತೇವೆ ಎಂದು ಓರ್ವ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಪಕ್ಕದಲ್ಲಿ ಕುಳಿತಿರುವ ಅಂಕಲ್, ಈಕೆ ಇಲ್ಲಿಯೂ ಜಗಳ ಶುರು ಮಾಡಿಕೊಂಡಿದ್ದಾಳೆ ಅಂತ ಗೊಣಗುತ್ತಿರಬೇಕು ಎಂದಿದ್ದಾರೆ. ಸೀಟ್ ಖಾಲಿ ಇದ್ರೂ ಯಾಕೆ ಜಗಳ ಮಾಡಿಕೊಂಡು ಎಂದು ಮತ್ತೋರ್ವ ನೆಟ್ಟಿಗ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಮೆಟ್ರೋದಲ್ಲಿ ತಬ್ಬಿ ಮುದ್ದಾಡಿದ ಯುವ ಜೋಡಿ; ಸಹ ಪ್ರಯಾಣಿಕರ ಆಕ್ರೋಶ
ದೆಹಲಿ ಮೆಟ್ರೋ ವಿಡಿಯೋಗಳಿಂದಲೇ ಸದ್ದು!
ದೆಹಲಿಯ ಮೆಟ್ರೋ ವಿಡಿಯೋ, ಫೋಟೋಗಳಿಂದಲೇ ಪದೇ ಪದೇ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ಯುವತಿಯೊಬ್ಬಳು ಅಶ್ಲೀಲವಾಗಿ ಡಾನ್ಸ್ ಮಾಡಿದ್ದಳು. ನಂತರ ಅಲ್ಲಿದ್ದ ಮಧ್ಯವಯಸ್ಕ ಮಹಿಳೆ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಳು. ದೆಹಲಿಯಲ್ಲಿ ಬಿಸಿಲು ಹೆಚ್ಚಾಗಿರುವ ಕಾರಣ ಯುವತಿತಯರು ಬಿಕಿನಿಯಲ್ಲಿ ಮೆಟ್ರೋ ಪ್ರಯಾಣ ಮಾಡಿದ್ದರ. ಈ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ