ಭೀಕರ ಬರದಿಂದ ಕಂಗೆಟ್ಟಿದ್ದ ಜನತೆಗೆ ಸಂತಸದ ಸುದ್ದಿ: ಈ ಸಲ ವಾಡಿಕೆಗಿಂತ ಹೆಚ್ಚು ಮಳೆ

By Kannadaprabha NewsFirst Published May 28, 2024, 11:39 AM IST
Highlights

ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಮುಂಗಾರು ಇನ್ನು 5 ದಿನದಲ್ಲಿ ಕೇರಳಕ್ಕೆ ಕಾಲಿಡಲು ಪೂರಕ ವಾತಾವರಣವಿದೆ: ಹವಾಮಾನ ಇಲಾಖೆ 
 

ನವದೆಹಲಿ(ಮೇ.28):  ಕಳೆದ ವರ್ಷ ಭೀಕರ ಬರದಿಂದ ಕಂಗೆಟ್ಟಿದ್ದ ಭಾರತವು ಈ ವರ್ಷ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಪಡೆಯುವ ಸಾಧ್ಯತೆಯಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಮುಂಗಾರು ಇನ್ನು 5 ದಿನದಲ್ಲಿ ಕೇರಳಕ್ಕೆ ಕಾಲಿಡಲು ಪೂರಕ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

'ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ವಾಯುವ್ಯದಲ್ಲಿ ಸಾಮಾನ್ಯ, ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ. 

Latest Videos

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಗೆ ಮತ್ತೆ ನಾಲ್ವರು ಬಲಿ!

'ಜೂನ್‌ನಲ್ಲಿ 16.6 ಸೆಂ.ಮೀ. ಅಥವಾ ಶೇ.92ರಿಂದ 108 ರಷ್ಟು ಮಳೆ ಆಗಲಿದೆ. ದಕ್ಷಿಣ ಭಾರತದ ಕೆಲವು ಪ್ರದೇಶ ಹೊರತುಪಡಿಸಿ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಲಿದೆ. ಕೇರಳಕ್ಕೆ 5 ದಿನದಲ್ಲಿ ಮುಂಗಾರು ಆಗಮಿ ಸಲು ಪೂರಕ ವಾತಾವರಣವಿದೆ' ಎಂದಿದ್ದಾರೆ. 

ಉತ್ತರದಲ್ಲಿ ಮುಂದುವರೆದ ಉಷ್ಣ ಹವೆ

ನವದೆಹಲಿ: ದಕ್ಷಿಣದಲ್ಲಿ ಮುಂಗಾರು ಆಗಮನಕ್ಕೆ ವೇದಿಕೆ ಸಿದ್ಧವಾಗಿದ್ದರೆ, ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಉಷ್ಣಹವೆ ಮುಂದುವರೆದಿದೆ. ರಾಜಸ್ಥಾನದ ಫಲೋಡಿಯಲ್ಲಿ 49.4 ಡಿಗ್ರಿ, ದೆಹಲಿಯಲ್ಲಿ 48.8 ಡಿಗ್ರಿ ತಾಪ ದಾಖಲಾಗಿದೆ. ಇನ್ನು ಹರ್ಲ್ಯಾಣ ಮತ್ತು ಪಂಜಾಬ್‌ಗಳಲ್ಲೂ ಬಿಸಿಲು ತನ್ನ ರೌದ್ರ ರೂಪವನ್ನು ತೋರುತ್ತಿದ್ದು, ಸಿರ್ಸಾದಲ್ಲಿ ಸಾರ್ವಕಾಲಿಕ ಗರಿಷ್ಠ 48.4 ಡಿಗ್ರಿ ತಾಪ ದಾಖಲಾಗಿದೆ. ರೋಕ್ಟಕ್ (47 ಡಿಗ್ರಿ), ಗುರುಗ್ರಾಮ (46 ಡಿಗ್ರಿ), ಅಂಬಾಲಾ (45 ಡಿಗ್ರಿ) ದಾಖಲಾಗಿದೆ. 

click me!