Watch : ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಗುವನ್ನು ಪ್ರಾಣ ಪಣಕ್ಕಿಟ್ಟು ಕಾಪಾಡಿದ ಸ್ಥಳೀಯರು; ಬದುಕುಳಿದಿದ್ದೇ ರೋಚಕ!

By Mahmad Rafik  |  First Published May 28, 2024, 2:20 PM IST

ತುಂಬಿ ಹರಿಯುತ್ತಿದ್ದ ಜೇಲಂ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 7 ವರ್ಷದ ಬಾಲಕನನ್ನು ಸ್ಥಳೀಯರಿಬ್ಬರು ರಕ್ಷಣೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಬಾಲಕನ್ನು ರಕ್ಷಿಸಿದ ಇಬ್ಬರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.


ಶ್ರೀನಗರ: ಜೇಲಂ ನದಿಯಲ್ಲಿ (Jhelum river) ಮುಳುಗುತ್ತಿದ್ದ ಏಳು ವರ್ಷದ ಬಾಲಕನನ್ನು ಸ್ಥಳೀಯರು ರಕ್ಷಣೆ (Boy Rescue Video) ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Videos) ಆಗುತ್ತಿದೆ. ಕಾಶ್ಮೀರದಲ್ಲಿಯ ಜೇಲಂ ನದಿ ತುಂಬಿ ಹರಿಯುತ್ತಿತ್ತು. ಭಾನುವಾರ ಈ ಘಟನೆ ಶ್ರೀನಗರದ ಸಫಾದ್ಕಲ್ (Safakadal in Srinagar) ಎಂಬಲ್ಲಿ ನಡೆದಿದ್ದು, ಸ್ಥಳೀಯರಾದ ಝಹೂರ್ ಅಹ್ಮದ್ ಮತ್ತು ಶೌಕತ್ ಅಹ್ಮದ್ ನದಿಗೆ ಧುಮುಕಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಬಾಲಕ ನದಿಯಲ್ಲಿ ಕೊಚ್ಚಿ ಹೋಗುತ್ತಿರೋದನ್ನು ನೋಡಬಹುದು. ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದರೂ ಒಂದು ಕ್ಷಣವೂ ಯೋಚಿಸದ ಝಹೂರ್ ಅಹ್ಮದ್ ಮತ್ತು ಶೌಕತ್ ಅಹ್ಮದ್ ನದಿಗೆ ಜಿಗಿದು ಕ್ಷಣಾರ್ಧದಲ್ಲಿ ಬಾಲಕನನ್ನು ತಲುಪಿ, ನದಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ದಡಕ್ಕೆ ತಂದಾಗ ಮಗು ಸಂಪೂರ್ಣ ಪ್ರಜ್ಞೆಯನ್ನು ಕಳೆದುಕೊಂಡಿತ್ತು. ಮಗುವನ್ನು ದಡಕ್ಕೆ ತರುತ್ತಿದ್ದಂತೆ ಅಲ್ಲಿಯೇ ಸಿಪಿಆರ್ ಮಾಡಲಾಗಿದೆ. ಬಾಲಕ ಕಣ್ಣು ಬಿಡುತ್ತಿದ್ದಂತೆ ಮರುಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕ ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆದರೆ ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Latest Videos

undefined

ಬಾಲಕನ ರಕ್ಷಕರಿಗೆ ವ್ಯಾಪಕ ಪ್ರಶಂಸೆ

ಈ ಕುರಿತು ಬಾಲಕನನ್ನು ರಕ್ಷಣೆ ಮಾಡಿರುವ ವ್ಯಕ್ತಿಗಳಿಬ್ಬರು ಪ್ರತಿಕ್ರಿಯಿಸಿದ್ದಾರೆ. ನಾವು ನೋಡಿದಾಗ ನದಿಯ ಪ್ರವಾಹದಲ್ಲಿ ಬಾಲಕ ಕೊಚ್ಚಿ ಹೋಗುತ್ತಿದ್ದನು. ಈ ವೇಳೆ ಬಾಲಕನಲ್ಲಿ ಯಾವುದೇ ಚಲವಲನ ಇರಲಿಲ್ಲ. ಮಗುವನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ಹೇಳಿದ್ದಾರೆ. ಝುಹೂರ್ ಅಹ್ಮದ್ ಮತ್ತು ಶೌಕತ್ ಅಹ್ಮದ್ ಸಾಹಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ಯವಾಗಿದೆ. 

‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಜಮ್ಮು ಕಾಶ್ಮೀರ ನ್ಯೂಸ್ ನೆಟ್‌ವರ್ಕ್‌ನಲ್ಲಿ ಮೇ 26ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೀಲಂ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ಸ್ಥಳೀಯರಿಬ್ಬರು ರಕ್ಷಿಸಿದ್ದಾರೆ ಎಂದು ಬರೆಯಲಾಗಿದೆ. ಈ ವಿಡಿಯೋಗೆ 2.5 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಮಗುವನ್ನು ರಕ್ಷಣೆ ಮಾಡಿದ ಇಬ್ಬರಿಗೂ ನಮ್ಮ ಹ್ಯಾಟ್ಸಪ್, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.

ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ 2000 ಜನ ಸಮಾಧಿ: ಮನಕಲುಕುವ ದೃಶ್ಯಗಳು ವೈರಲ್

ರೈಲು ನಿಲ್ಲಿಸಿದ ಇಬ್ಬರು ಪೊಲೀಸರ ವಶಕ್ಕೆ 

ಶ್ರೀ ಶಕ್ತಿ ಎಕ್ಸ್‌ಪ್ರೆಸ್‌ ರೈಲು ನಿಲ್ಲಿಸಿದ ಯುವಕ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಮ್ಮು ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಪ್ರಯಾಣಿಸಬೇಕಿದ್ದ ಟ್ರೈನ್ ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಇದರಿಂದ ಕೋಪಗೊಂಡ ಮಹಿಳೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. 

: Locals saved 7 year old child after he slipped in river Jhelum river at Safakadal in Srinagar. pic.twitter.com/iaci0p6nC1

— Jammu Kashmir News Network 🇮🇳 (@TheYouthPlus)

ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಮತ್ತು ಯುವಕ ರೈಲು ಹಳಿ ಮೇಲೆ ಕುಳಿತು ಧರಣಿ ನಡೆಸಿ ಶ್ರೀ ಶಕ್ತಿ ಎಕ್ಸ್‌ಪ್ರೆಸ್‌ಗೆ ಅಡ್ಡಿಪಡಿಸಿದ್ದರು. ನಂತರ ರೈಲ್ವೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ನಂತರ ಶ್ರೀ ಶಕ್ತಿ ಎಕ್ಸ್‌ಪ್ರೆಸ್‌ ಹೊರಟಿದೆ. ಮಹಿಳೆಯ ಪ್ರತಿಭಟನೆಯಿಂದಾಗಿ ಶ್ರೀ ಶಕ್ತಿ ಎಕ್ಸ್‌ಪ್ರೆಸ್‌ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. 

click me!