
ಲಖನೌ (ಆ.30) ನೇಪಾಳ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದವರು, ಸಾವಿನ ಸಂಖ್ಯೆಗಳು ಏರಿಕೆಯಾಗುತ್ತಲೇ ಇದೆ. ಹುಡುಕಾಟ, ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ 5 ವರ್ಷದ ಪುಟ್ಟ ಕಂದಮನ್ನು ಮೂರು ದಿನಗಳ ಬಳಿಕ ಅವಶೇಷಗಳಿಡಿಯಿಂದ ಜೀವಂತವಾಗಿ ರಕ್ಷಿಸಲಾಗಿದೆ. ಇದೀಗ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ನೇಪಾಳ ಪ್ರವಾಹದಲ್ಲಿ ಎರಡು ಗೋಲ್ಡನ್ ರಿಟ್ರೀವರ್ ನಾಯಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಈ ನಾಯಿಗಳು ಹೇಗಾದರೂ ಮಾಡಿ ಪ್ರವಾಹ ನೀರಿನಿಂದ ಮೇಲೆ ಬರಲು ಪ್ರಯತ್ನಿಸಿದೆ. ಆದರೆ ಪ್ರವಾಹ ನೀರಿನಲ್ಲೇ ಕೊಚ್ಚಿ ಹೋದ ಈ ಎರಡು ನಾಯಿಗಳು ಈಜುತ್ತಾ ಉತ್ತರ ಪ್ರದೇಶದಲ್ಲಿ ದಡ ಸೇರಿದ ಘಟನೆ ನಡೆದಿದೆ. ಹರಿಯುವ ನೀರಿನಲ್ಲಿನ ನಾಯಿಗಳು ಈಜುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದ ನಾಯಿಗಳನ್ನು ಕಂಡ ಯುವಕ ರಕ್ಷಣೆ ಮಾಡಿದ್ದಾನೆ.
ನೇಪಾಳ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದ ಕೆಲ ಮೃತದೇಹಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ನೇಪಾಳ ನದಿ ಉತ್ತರ ಪ್ರದೇಶದ ಮೂಲಕ ಹರಿಯುತ್ತದೆ. ಮಹಾ ಪ್ರವಾಹದಲ್ಲಿ ಎರಡು ಗೋಲ್ಡನ್ ರಿಟ್ರೀವರ್ ನಾಯಿ ಸತತ ಹೋರಾಟ ಮಾಡಿದೆ. ಆದರೆ ನೇಪಾಳದುದ್ದಕ್ಕೂ ಪ್ರವಾಹ ನೀರಿನ ವೇಗ, ಕಲ್ಲು ಮಣ್ಣುಗಳಿಂದ ಕೂಡಿತ್ತು. ಹೀಗಾಗಿ ದಡ ಸೇರಲು ಸಾಧ್ಯವಾಗಿಲ್ಲ. ಈಜುತ್ತಾ ನೇಪಾಳದಿಂದ ಗಡಿ ದಾಟಿ ಉತ್ತರ ಪ್ರದೇಶದ ಗಡಿ ದಿಲ್ಲೆ ಮಹಾರಾದ್‌ಗಂಜ್ ಗ್ರಾಮಕ್ಕೆ ಆಗಮಿಸಿದೆ.
ಹರಿಯುವ ನೀರಿನಲ್ಲಿ ಎರಡು ಶ್ವಾನಗಳು ಈಜಿ ದಡ ಸೇರುವ ಪ್ರಯತ್ನ ಮಾಡಿತ್ತು. ಎರಡು ಗೋಲ್ಡನ್ ರಿಟ್ರೀವರ್ ಶ್ವಾನಗಳು ಮಹಾರಾಜ್‌ಗಂಜ್ ಗ್ರಾಮದ ಬಳಿ ದಡ ಸೇರಲು ಯತ್ನಿಸಿರುವುದು ಗಮನಿಸಿದ ಸ್ಥಳೀಯರು ಎರಡೂ ನಾಯಿಗಳನ್ನು ರಕ್ಷಿಸಿದ್ದಾರೆ. ನಾಯಿಗಳನ್ನು ರಕ್ಷಿಸಿ ಆರೈಕೆ ಮಾಡಲಾಗಿದೆ. ಪ್ರವಾಹ ನೀರಿನಲ್ಲಿ ಕೊಚ್ಚಿ ಹೋದ ಕಾರಣ ನಾಯಿಯ ಕಣ್ಣು ಸೇರಿದಂತೆ ಹಲವೆಡೆ ಗಾಯವಾಗಿದೆ.
ಶ್ವಾನಗಳ ಆರೈಕೆ ಮಾಡಿದ ಸ್ಥಳೀಯ ಯುವಕ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋದ ಉದ್ದೇಶ, ಈ ನಾಯಿ ನೇಪಾಳ ಪ್ರವಾಹದಲ್ಲಿ ಸಿಲುಕಿ ಈಜಿಕೊಂಡ ಬಂದು ಇಲ್ಲಿ ದಡ ಸೇರಿದೆ. ಈ ನಾಯಿಗಳ ಮಾಲೀಕರು ಇದ್ದರೆ ನಮ್ಮನ್ನು ಸಂಪರ್ಕಿಸಿ ನಾಯಿ ಹಿಂದಿರುಗಿಸುತ್ತೇವೆ ಎಂದು ಯುವಕ ಮನವಿ ಮಾಡಿದ್ದಾನೆ. ನೇಪಾಳ ಪ್ರವಾಹದಲ್ಲಿ ಈ ನಾಯಿಗಳ ಮಾಲೀಕರು ಇದ್ದಾರೋ, ಅವರ ಪರಿಸ್ಥಿತಿ ಏನು ಅನ್ನೋದು ಗೊತ್ತಿಲ್ಲ. ಒಂದು ವೇಳೆ ನಾಯಿ ಮಾಲೀಕರು ಇದ್ದರೆ ಸಂಪರ್ಕಿಸಿ, ನಾಯಿ ಇಲ್ಲಿ ಸುರಕ್ಷಿತವಾಗಿದೆ ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ