ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

By Anusha Kb  |  First Published Jan 3, 2023, 2:20 PM IST

ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಬಾಲಕರಿಬ್ಬರು ಮೃತಪಟ್ಟ ಘಟನೆ ಬಿಹಾರದ ಖಗರಿಯಾದಲ್ಲಿ ನಡೆದಿದೆ. ಮೃತ ಬಾಲಕರು ಸೇರಿದಂತೆ ಒಟ್ಟು ಮೂರು ಜನ ರೈಲು ಹಳಿ ಮೇಲೆ ನಿಂತುಕೊಂಡು ರೀಲ್ಸ್ ಮಾಡುತ್ತಿದ್ದರು.


ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಬಾಲಕರಿಬ್ಬರು ಮೃತಪಟ್ಟ ಘಟನೆ ಬಿಹಾರದ ಖಗರಿಯಾದಲ್ಲಿ ನಡೆದಿದೆ. ಮೃತ ಬಾಲಕರು ಸೇರಿದಂತೆ ಒಟ್ಟು ಮೂರು ಜನ ರೈಲು ಹಳಿ ಮೇಲೆ ನಿಂತುಕೊಂಡು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಓರ್ವ ಬಾಲಕ ರೈಲ್ವೆ ಬ್ರಿಡ್ಜ್‌ನಿಂದ ಕೆಳಗೆ ಹಾರಿದ್ದರೆ, ಮತ್ತಿಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿಗೂ 15 ನಿಮಿಷ ಮೊದಲು ಇವರು ಇನ್ಸ್ಟಾಗೆ ರೀಲ್ಸ್ ಅಪ್‌ಲೋಡ್ ಮಾಡಿದ್ದರು.  ಬಿಹಾರದ (Bihar) ಖಗರಿಯಾದಲ್ಲಿರುವ (Khagaria) ರೈಲ್ವೆ ಬ್ರಿಡ್ಜ್‌ ಮೇಲೆ ನಿಂತುಕೊಂಡು ಬಾಲಕರಿಬ್ಬರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಇಬ್ಬರು ಬಾಲಕರು ರೈಲಡಿಗೆ ಬಿದ್ದು ಪ್ರಾಣ ಬಿಟ್ಟರೆ ಮತ್ತೊಬ್ಬ ಬ್ರಿಡ್ಜ್‌ನಿಂದ ನರಿ ತೀರಕ್ಕೆ ಹಾರಿದ್ದು, ಆತನ ಪ್ರಾಣ ಉಳಿದಿದ್ದರು, ಆತನಿಗೆ ಗಂಭೀರ ಗಾಯಗಳಾಗಿವೆ.  ಜನವರಿ 1 ರ ಹೊಸವರ್ಷದಂದೇ ಈ ದುರಂತ ಸಂಭವಿಸಿದೆ. ಮೂವರ ವಯಸ್ಸು 16 ರಿಂದ 19 ವರ್ಷದ ಒಳಗಿದೆ. 

ಮೃತ ಬಾಲಕರನ್ನು ಸೋನು ಹಾಗೂ ನಿತೀಶ್ ಎಂದು ಗುರುತಿಸಲಾಗಿದೆ. ಈ ಅನಾಹುತದಲ್ಲಿ ಪ್ರಾಣ ಉಳಿಸಿಕೊಂಡಿರುವ ಬಾಲಕ ಅಮನ್ ಘಟನೆ ಬಗ್ಗೆ ವಿವರಿಸಿದ್ದಾನೆ. ನಾನು, ಸೋನು ಹಾಗೂ ನಿತೀಶ್ ಮೂವರು ಹೊಸ ವರ್ಷದ ಅಂಗವಾಗಿ ಧಮರಾ ಘಾಟ್ ಸ್ಟೇಷನ್ (Dhamara Ghat Station) ಬಳಿ ಇರುವ ಮಾ ಕ್ಯಾತ್ಯಾಯಿನಿ ದೇಗುಲಕ್ಕೆ ಹೋಗುತ್ತಿದ್ದೆವು. ಈ ವೇಳೆ ಪ್ರಮುಖ ರಸ್ತೆಯಲ್ಲಿ ಭಾರಿ ಜನಸಂದಣಿ ಇದ್ದಿದ್ದರಿಂದ ನಾವು ರೈಲ್ವೆ ಬ್ರಿಡ್ಜ್ ಮೇಲೆ ಹೋಗಲು ನಿರ್ಧರಿಸಿದೆವು. ಈ ನಡುವೆ ರೈಲ್ವೆ ಬ್ರಿಡ್ಜ್‌ನಲ್ಲೇ ಸೋನು ಹಾಗೂ ನಿತೀಶ್ ರೀಲ್ಸ್ ಮಾಡಲು ಮುಂದಾಗಿದ್ದಾರೆ ಎಂದು ಆತ ಹೇಳಿದ್ದಾನೆ. 

Tap to resize

Latest Videos

ಇದರ ಹೊರತಾಗಿ ಮೂರು ರೀಲ್ಸ್‌ಗಳನ್ನು ಸಾಂಗ್‌ ಜತೆ ಸೇರಿಸಿ ಈ ತರುಣರು ಇನ್ಸ್ಟಾಗ್ರಾಮ್‌ಗೆ (Instagram) ಅಪ್‌ಲೋಡ್ ಮಾಡಿದ್ದಾರೆ. ಆ ರೀಲ್ಸ್‌ಗಳಲ್ಲಿ 2022ರ ರ ಸ್ಟೇಟಸ್ ತೋರಿಸಿ 2023ರಲ್ಲಿ ಬದುಕಿರುವುದಾಗಿ ಹೇಳುತ್ತಾರೆ. ಅದಾಗಿ 15 ನಿಮಿಷದಲ್ಲಿ ಮತ್ತೆ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಇದಾದ ಬಳಿಕ ಇನ್ನೊಂದು ಸೈಡ್‌ನಿಂದ ಅದೇ ಟ್ರ್ಯಾಕ್‌ನಲ್ಲಿ ರೈಲು ಬಂದಿದ್ದು, ದಟ್ಟ ಮಂಜಿನ ಕಾರಣದಿಂದ ಇವರಿಗೆ ರೈಲು ಬರುವುದು ಕಾಣಿಸಿಲ್ಲ. ಪರಿಣಾಮ ಸೋನು (Sonu)  ಹಾಗೂ ನಿತೀಶ್ (Nithish) ರೈಲಡಿಗೆ ಬಿದ್ದಿದ್ದು, ನಾನು ರೈಲು ನೋಡಿ ಸೇತುವೆಯಿಂದ (Railway bridge) ಕೆಳಗೆ ಹಾರಿದೆ ಎಂದು ಈ ಅನಾಹುತದಲ್ಲಿ ಬದುಕುಳಿದ ಅಮನ್ ಹೇಳಿದ್ದಾನೆ.

ಈ ಅನಾಹುತದ ಬಳಿಕ ಮೃತ ಸೋನು ತಾಯಿ ಅಸ್ವಸ್ಥರಾಗಿದ್ದಾರೆ.  ಮಗನ ಸಾವಿನ ಸುದ್ದಿ ಕೇಳಿದ ಸೋನು ತಾಯಿ ಚಂದನಾ ದೇವಿ (Chandan Devi) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇಬ್ಬರು ಬಾಲಕರ ಮೃತದೇಹವನ್ನು (postmortem) ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಮನ್ಸಿ ಪೊಲೀಸ್ ಸ್ಟೇಷನ್ ಮುಖ್ಯಸ್ಥ ನಿಲೇಶ್ ಕುಮಾರ್ (chief Nilesh Kumar) ಹೇಳಿದ್ದಾರೆ. 

ಮೃತ ನಿತೀಶ್ ಇನ್ಸ್ಟಾಗ್ರಾಮ್ (Instagram Page) ಪೇಜ್‌ಗೆ ಹೋದರೆ ಈ ಮೂವರ ಸಾಕಷ್ಟು ರೀಲ್ಸ್‌ಗಳು ಕಾಣಸಿಗುತ್ತವೆ. ಇದರಲ್ಲಿ ಬಹುತೇಕ ರೀಲ್ಸ್ ರೈಲ್ವೆ ಟ್ರ್ಯಾಕ್‌ನಲ್ಲೇ ಮಾಡಿರುವುದಾಗಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಕಾಮೆಂಟ್ ಹಿಂದೆ ಬಿದ್ದಿರುವ ಯುವ ಸಮೂಹ ಇದಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಸಾಹಸ ಮಾಡಲು ಹೋಗುತ್ತಿದ್ದಾರೆ. ಇದರಿಂದ ಮಕ್ಕಳನ್ನು ಕಳೆದುಕೊಂಡು ಪೋಷಕರು ಅಳುವಂತಾಗಿದೆ.
 

click me!