ಮೊದಲ ಅಗ್ನಿಪರೀಕ್ಷೆಯಲ್ಲಿ ವಿಜಯ್ ಸರ್ಕಾರ ಪಾಸ್, ಬಹುಮತ ಸಾಬೀತುಪಡಿಸಿದ ಟಿವಿಕೆ ಸರ್ಕಾರ

Published : May 13, 2026, 11:58 AM ISTUpdated : May 13, 2026, 12:04 PM IST
Tamil Nadu Chief Minister Vijay at the Tamil Nadu Legislative Assembly

ಸಾರಾಂಶ

ಜೊಸೆಫ್ ವಿಜಯ್ ಸರ್ಕಾರ ಮೊದಲ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ಮೊದಲ ಹಂತದಲ್ಲಿ ಭದ್ರವಾಗಿದೆ.

ಚೆನ್ನೈ (ಮೇ.13) ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ಜೊಸೆಫ್ ವಿಜಯ್‌ಗೆ ವಿಶ್ವಾಸಮತ ಪರೀಕ್ಷೆ ಎದುರಾಗಿತ್ತು. ಸರ್ಕಾರ ರಚಿಸಿದ ಬೆನ್ನಲ್ಲೇ ಎದುರಾದ ಮೊದಲ ಅಗ್ನಿಪರೀಕ್ಷೆಯಲ್ಲಿ ಜೊಸೆಫ್ ವಿಜಯ್ ಪಾಸ್ ಆಗಿದ್ದಾರೆ. ಈ ಮೂಲಕ ವಿಜಯ್ ಸರ್ಕಾರ ಭದ್ರವಾಗಿದೆ.

ಟಿವಿಕೆ ಸರ್ಕಾರಕ್ಕೆ 144 ಶಾಸಕರ ಮತ

ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಶ್ವಾಸ ಮತ ಯಾಚಿಸಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳು ಬೆಂಬಲ ಸೂಚಿಸಿತ್ತು. ಈ ವೇಳೆ ವಿಜಯ್ ಸರ್ಕಾರಕ್ಕೆ ಶಾಸಕು ಎದ್ದು ನಿಂತು ಬೆಂಬಲ ಸೂಚಿಸಿದರು. ವಿಧಾನಸಭೆಯಲ್ಲಿ ಹಾಜರಿದ್ದ ಶಾಸಕರ ಒಟ್ಟು ಮತಗಳ ಆಧರಿಸಿ ಬೆಂಬಲ ನಿರ್ಧಾರ ಮಾಡಲಾಯಿತು. ವಿಶೇಷ ಅಂದರೆ ವಿಜಯ್ ಸರ್ಕಾರಕ್ಕೆ 144 ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಭರ್ಜರಿಯಾಗಿ ಮುಖ್ಯಮಂತ್ರಿ ವಿಜಯ್ ಸರ್ಕಾರ ವಿಶ್ವಾಸಮತ ಗೆದ್ದುಕೊಂಡಿದೆ.

6 ತಿಂಗಳ ಕಾಲ ವಿಜಯ್ ಸರ್ಕಾರ ಸೇಫ್

ವಿಶ್ವಾಸ ಮತ ಗೆದ್ದ ನಟ ವಿಜಯ್ ಸರ್ಕಾರ 6 ತಿಂಗಳ ಕಾಲ ಸುರಕ್ಷಿತವಾಗಿದೆ. 6 ತಿಂಗಳ ಬಳಿಕ ಶಾಸಕರು ಇದೇ ಬೆಂಬಲ ಸೂಚಿಸಿದರೆ ವಿಜಯ್ ಸರ್ಕಾರ ಮತ್ತೆ ಸುರಕ್ಷಿತವಾಗಲಿದೆ. ಸದ್ಯ ಬೀಸೋ ದೊಣ್ಣೆಯಿಂದ ವಿಜಯ್ ಸರ್ಕಾರ ತಪ್ಪಿಸಿಕೊಂಡಿದೆ.

ಎಐಎಡಿಎಂಕೆ ಶಾಸಕರ ಬೆಂಬಲ, ಪಕ್ಷ ಅಧಿಕೃತವಾಗಿ ಇಬ್ಬಾಗ

ಎಡಪ್ಪಾಡಿ ಕೆ ಪಳನಿಸ್ವಾಮಿ ಎಚ್ಚರಿಕೆ ನಡುವೆಯೂ ಎಐಎಡಿಎಂಕೆ ಎರಡು ಬಣಗಳ ಪೈಕಿ ಒಂದು ಬಣದ ಶಾಸಕರು ಬೆಂಬಲು ಸೂಚಿಸಿತ್ತು. ಹೀಗಾಗಿ ವಿಶ್ವಾಸ ಮತದ ವೇಳೆ ಟಿವಿಕೆ ಪಕ್ಷಕ್ಕೆ ಶಾಸಕರ ಬೆಂಬಲ 144ಕ್ಕೆ ಏರಿತ್ತು. ಕಾಂಗ್ರೆಸ್, ಸಿಪಿಐ, ವಿಸಿಕೆ, ಅಣ್ಣಾಡಿಎಂಕೆ ಸೇರಿದಂತೆ ಹಲವು ಪಕ್ಷಗಳ ಶಾಸಕರು ಬೆಂಬಲ ಸೂಚಿಸಿದ್ದಾರೆ. ಅಣ್ಣಾಡಿಎಂಕೆಯ 25 ಬಂಡಾಯ ಶಾಸಕರು ಬೆಂಬಲ ಸೂಚಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಐವರು ಶಾಸಕರು, ವಿಸಿಕೆ ಪಕ್ಷದ ಇಬ್ಬರು, ಸಿಪಿಐ ಪಕ್ಷ ತಲಾ ಇಬ್ಬರು ವಿಜಯ್ ಪರ ಮತ ಚಲಾಯಿಸಿದ್ದರು. ಇಂದು ವಿಧಾನಸಭೆ ಕಲಾಪಕ್ಕೆ ಐವರು ಶಾಸಕರು ಗೈರಾಗಿದ್ದರು. ಇತ್ತ ಇನ್ನು ಮುಖ್ಯಮಂತ್ರಿ ವಿಜಯ್ ವಿರುದ್ಧ 22 ಶಾಸಕರ ಮತ ಹಾಕಿದ್ದರು. ವಿಶ್ವಾಸ ಮತಯಾಚನೆ ಗೆದ್ದ ಬಳಿಕ ವಿಧಾನಸಭೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲರ ವಿಶ್ವಾಸಗಳಿಸಿ ಆಡಳಿತ ನಡೆಸಲಿದೆ. ಮತ ಹಾಕಿ, ಸರ್ಕಾರವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ತಮಿಳುನಾಡು ಜನರ ಸೇವೆಗಾಗಿ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದು ವಿಜಯ್ ಹೇಳಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Convoy Size: ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ ಅಮಿತ್ ಶಾ, ಬೆಂಗಾವಲು ವಾಹನಗಳ ಸಂಖ್ಯೆ ಅರ್ಧಕ್ಕರ್ಧ ಕಡಿತ!
ತಿರುಪತಿ ದರ್ಶನಕ್ಕೆ ಬುಕಿಂಗ್- ವಿವಿಧ ಸೇವೆಗಳಿಗೆ ಆನ್​ಲೈನ್​ನಲ್ಲಿ ಶೀಘ್ರ ಬುಕ್​ ಹೇಗೆ? ಪುಲ್​ ಡಿಟೇಲ್ಸ್