
ನವದೆಹಲಿ(ಆ.23): ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ಹಿಂದಿ ಭಾಷೆ ಗೊತ್ತಿಲ್ಲದ ಶಿಕ್ಷಕರು ಹಾಗೂ ಚಿಕಿತ್ಸಕರಿಗೆ ವೆಬಿನಾರ್ ಒಂದ್ನು ಬಿಟ್ಟು ಹೋಗುವಂತೆ ಹೇಳಿದ್ದಾರೆ ಎಂಬ ಆರೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿಯನ್ನು 'ಟುಕ್ಡೇ ಟುಕ್ಡೇ ಗ್ಯಾಂಗ್' ಎಂದೂ ಕರೆದಿದ್ದಾರೆ, ಈ ಮಾತುಗಳನ್ನು ಸಾಮಾನ್ಯವಾಗಿ ಬಿಜೆಪಿ ನಾಯಕರು ಪ್ರತಿಪಕ್ಷಗಳಿಗೆ ಬಳಸುತ್ತಾರೆ.
ಅಯೋಧ್ಯೆ ಭಾಷಣದಲ್ಲಿ 8 ಕೋಟಿ ಭಾರತೀಯರ ಹೊರಗಿಟ್ಟ ಮೋದಿ; ಆತಂಕ ವ್ಯಕ್ತಪಡಿಸಿದ ತರೂರ್!
ಈ ಸಂಬಂಧ ಟ್ವೀಟ್ ಮಾಡಿರುವ ತರೂರ್ ಹಿಂದಿ ಭಾಷೆ ಗೊತ್ತಿಲ್ಲವೆಂದವರನ್ನು ಭಾರತ ಸರ್ಕಾರದ ಕಾರ್ಯದರ್ಶಿಯೊಬ್ಬರು ತಮಿಳಿಗರನ್ನು ವೆಬಿನಾರ್ ಒಂದರಿಂದ ಹೊರಗುಳಿಯುವಂತೆ ಹೇಳುತ್ತಾರೆ, ಇದು ಸಹಿಸಲಸಾಧ್ಯ ವಿಚಾರ. ಭಾರತದ ಪರಿಶ್ರಮದಿಂದ ಮೂಡಿಸಲಾದ ಒಗ್ಗಟ್ಟನ್ನು ಮುರಿದು ಹಾಕಲು ಅಧಿಕಾರದಲ್ಲಿ ಈಗ 'ಟುಕ್ಡೇ ಟುಕ್ಡೇ ಗ್ಯಾಂಗ್' ಇದೆ ಎಂದೂ ಆರೋಪಿಸಿದ್ದಾರೆ.
'ಶ್ರೀರಾಮ ಬಿಜೆಪಿಯ ಆಸ್ತಿಯಲ್ಲ' ಅಖಾಡಕ್ಕಿಳಿದ ತರೂರ್ ಕೊಟ್ಟ 'ಕೈ' ದಾಖಲೆ
ಇನ್ನು ನಲ್ವತ್ತು ಸೆಕೆಂಡ್‌ಗಳ ವಿಡಿಯೋ ಒಂದರಲ್ಲಿ ಕಾರ್ಯದರ್ಶಿ ಕೊಟೇಚಾ ಯಾರಿಎಲ್ಲಾ ಹಿಂದಿ ಭಾಷೆ ಗೊತ್ತಿಲ್ಲವೋ ಅವರೆಲ್ಲಾ ಹೊರ ಹೋಗಬಹುದೆಂದು ಏಳಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿತ್ತು. ಈಗಾಗಲೇ ಸಂಸದರಾದ ಕನಿಮೋಳಿ ಹಾಗೂ ಕಾರ್ತಿ ಚಿದಂಬರಂ ಈ ಸಂಬಂಧ ಟ್ವೀಟ್ ಮಾಡಿ ಹಿಂದಿ ಹೇರಿಕೆ ಕುರಿತು ಧ್ವಬಿ ಎತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ