ಸಹೋದ್ಯೋಗಿಯೊಬ್ಬರ ಜತೆ ‘ಸರಸ ಸಲ್ಲಾಪದ ಮಾತು’| ವೆಂಕಟೇಶ್ವರ ಚಾನೆಲ್ ಮುಖ್ಯಸ್ಥ ರಾಜೀನಾಮೆ
ತಿರುಪತಿ[ಜ.13]: ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಸಮಿತಿ ನಡೆಸುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್‌ವಿಬಿಸಿ) ಚಾನೆಲ್ ಮುಖ್ಯಸ್ಥ ಹಾಗೂ ಹಾಸ್ಯ ನಟ ಪೃಥ್ವಿರಾಜ್ ಅವರು ತಮ್ಮ ಹುದ್ದೆಗೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಸಹೋದ್ಯೋಗಿಯೊಬ್ಬರ ಜತೆ ‘ಸರಸ ಸಲ್ಲಾಪದ ಮಾತು’ಗಳನ್ನು ಅವರು ಆಡಿದ್ದಾರೆ ಎನ್ನಲಾದ ಆಡಿಯೋವೊಂದು ಮಾಧ್ಯಮಗಳಲ್ಲಿ ಪ್ರಸಾರವಾದ ಕಾರಣ ಅವರು ರಾಜೀನಾಮೆ ನೀಡಿದ್ದಾರೆ. ‘ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದು, ಈ ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.
After a sleazy audio conversation allegedly of Sri Venkateswara Bhakti Channel Chairman Prudhvi Raj become viral, chairman YB Subbareddy seek his resignation. Raj a popular movie artist was appointed chairman by the Govt in July 2019. pic.twitter.com/9pFE5ArBRE
— Aashish (@Ashi_IndiaToday)ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!
ಆದರೆ ತಮ್ಮ ಸಂಭಾಷಣೆ ತಿರುಚಲಾಗಿದೆ ಎಂದು ಪೃಥ್ವಿರಾಜ್ ಆರೋಪಿಸಿದ್ದಾರೆ.