ಗ್ಯಾನವಾಪಿ ಮಸೀದಿ ಸಮೀಕ್ಷಾ ವರದಿ ಸಾರ್ವಜನಿಕಗೊಳಿಸಲು ಕೋರ್ಟ್ ಅನುಮತಿ!

By Suvarna News  |  First Published Jan 24, 2024, 3:59 PM IST

ಕಾಶಿ ವಿಶ್ವನಾಥ ಮಂದಿರ ಆವರಣದಲ್ಲಿರುವ ಗ್ಯಾನವಾಪಿ ಮಸೀದಿ ಸಮೀಕ್ಷೆಯನ್ನು ಸಾರ್ವಜನಿಕಗೊಳಿಸಬೇಕೆ? ಅನ್ನೋ ಚರ್ಚೆಗೆ ಇದೀಗ ಉತ್ತರ ಸಿಕ್ಕಿದೆ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಸಾರ್ವಜನಿಕಗೊಳಿಸಲು ಗ್ರೀನ್ ಸಿಗ್ನಲ್ ನೀಡಿದೆ.
 


ವಾರಣಾಸಿ(ಜ.24)  ಆಯೋಧ್ಯೆ ವಿವಾದಗಳೆಲ್ಲಾ ಮುಗಿದು ಭವ್ಯ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಇದೀಗ ಎಲ್ಲರ ಚಿತ್ತ ಕಾಶಿ ಹಾಗೂ ಮಥುರಾದತ್ತ ನೆಟ್ಟಿದೆ. ಇದರ ನಡುವೆ ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಗ್ಯಾನವಾಪಿ ಮಸೀದಿ ಮರಳಿ ಪಡೆಯಲು ಹೋರಾಟಗಳು ನಿರಂತವಾಗಿ ನಡೆಯುತ್ತಿದೆ. ಇದರ ಭಾಗವಾಗಿ ನಡೆದಿರು ಪುರಾತತ್ವ ಇಲಾಖೆಯ ಸಮೀಕ್ಷಾ ವರದಿಯನ್ನು ಸಾರ್ವಜನಿಕಗೊಳಿಸಬೇಕೇ? ಅಥವಾ ಗೌಪ್ಯವಾಗಿಡಬೇಕೆ ಅನ್ನೋ ಚರ್ಚೆಗೆ ವಾರಣಾಸಿ ಜಿಲ್ಲಾ ಕೋರ್ಟ್ ಉತ್ತರ ನೀಡಿದೆ. ಗ್ಯಾನವಾಪಿ ಮಸೀದಿ ಕುರಿತು ಪುರಾತತ್ವ ಇಲಾಖೆ ನೀಡಿದ ವರದಿ ಆಧರಿಸಿ ಕೋರ್ಟ್ ತೀರ್ಪು ನೀಡಲಿದೆ. ಆದೇಶದ ಬಳಿಕ ಪುರಾತತ್ವ ಇಲಾಖೆಯ ವರದಿಯನ್ನು ಎರಡೂ ಕಕ್ಷಿದಾರರಿಗೆ ನೀಡಲು ವಾರಣಾಸಿ ಕೋರ್ಟ್ ಅನುಮತಿ ನೀಡಿದೆ.

ಗ್ಯಾನವಾಪಿ ಮಸೀದಿ ಕುರಿತು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷಾ ವರದಿಯನ್ನು ಸಾರ್ವಜನಿಕಗೊಳಿಸಬೇಕೆ ಅನ್ನೋ ಕುರಿತು ಇಂದು ವಾರಣಾಸಿ ಕೋರ್ಟ್ ತೀರ್ಪು ನೀಡಿದೆ. ಹಿಂದೂ ಪರ ವಕೀಲ ವಿಷ್ಣುಶಂಕರ್ ಜೈನ್ ತಮ್ಮ ವಾದ ಮಂಡಿಸಿದ್ದಾರೆ. ಪುರಾತತ್ವ ಇಲಾಖೆ ಸಾರ್ವಜನಿಕಗೊಳಿಸಬೇಕು ಅನ್ನೋದು ಹಿಂದೂಗಳ ವಾದವಾಗಿತ್ತು. ಮುಸ್ಲಿಂ ವರ ವಾದವನ್ನೂ ಕೇಳಿಸಿಕೊಂಡ ನ್ಯಾಯಾಲಯ, ಪುರಾತತ್ವ ಇಲಾಖೆ ವರದಿ ಬಹಿರಂಗ ಪಡಿಸಲು ಅನುಮತಿ ಇದೆ.

Tap to resize

Latest Videos

 

Gyanvapi Case: ಪೂಜೆ, ಸಮೀಕ್ಷೆ ವಿರುದ್ಧ ಮುಸ್ಲಿಮರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!

ಕೋರ್ಟ್ ಈ ತೀರ್ಪು ನೀಡುತ್ತಿದ್ದಂತೆ ಹಲವು ಇತಿಹಾಸಕಾರರು ಸಂತಸ ವ್ಯಕ್ತಪಡಿಸಿದ್ದಾರೆ. ಕಾಶಿ ವಿಶ್ವನಾಥ ಮಂದಿರದ ಕುರಿತು ಅಡಗಿಸಿಟ್ಟ ರಹಸ್ಯ, ಯಾವುದೇ ಒಂದು ಸಮುದಾಯವನ್ನು ಒಲೈಸಲು ತಿರುಚಿದ ಇತಿಹಾಸಗಳು ಇದೀಗ ಬಯಲಾಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಕಾಶಿಯಲ್ಲಿ ವಿಶ್ವನಾಥ ಮಂದಿರದ ಮೇಲೆ ಗ್ಯಾನವಾಪಿ ಮಸೀದಿ ನಿರ್ಮಿಸಲಾಗಿದೆಯೇ ಎಂಬುದನ್ನು ಅರಿಯಲು ನಡೆಸಿರುವ ವೈಜ್ಞಾನಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕೇ? ಬೇಡವೇ ಎಂಬುದರ ಕುರಿತ ತನ್ನ ತೀರ್ಪನ್ನು ಸ್ಥಳೀಯ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಜನವರಿ 5 ರಂದು ನೀಡಬೇಕಿದ್ದ ತೀರ್ಪನ್ನು ಜ.24ಕ್ಕೆ ಮುಂದೂಡಿತ್ತು.  ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದ್ದ ಪುರಾತತ್ವ ಇಲಾಖೆ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿತ್ತು. ಜೊತೆಗೆ ವರದಿಯನ್ನು ಕನಿಷ್ಠ ನಾಲ್ಕು ವಾರ ಬಿಡುಗಡೆ ಮಾಡದಂತೆ ವಾರಾಣಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು 

ಜ್ಞಾನವಾಪಿ ಮಸೀದಿ ಸರ್ವೇ ವರದಿ ಕೋರ್ಟ್‌ಗೆ ಸಲ್ಲಿಸಿದ ಪುರಾತತ್ವ ಇಲಾಖೆ: ರಿಪೋರ್ಟ್‌ನಲ್ಲೇನಿದೆ?

ಇತ್ತೀಚೆಗೆ ಸುಪ್ರೀಂ ಕೋರ್ಟ್ ಗ್ಯಾನವಾಪಿಯ ಶಿವಲಿಂಗ ಪತ್ತೆಯಾದ ಸ್ಥಳವನ್ನು ಮುಸ್ಲಿಮರು ವಜುಖಾನವಾಗಿ ಬಳಕೆ ಮಾಡುತ್ತಿದ್ದರು. ಇದರಿಂದ ಹಿಂದೂ ಧಾರ್ಮಿಕ ಬಾವನೆಗೆ ಧಕ್ಕೆಯಾಗಿದೆ. ಶಿವಲಿಂಗ ಪತ್ತೆಯಾದ ಕೊಳ ಹಾಗೂ ಈ ಜಾಗದಲ್ಲಿ ಶುಚಿತ್ವ ಕಾಪಾಡಬೇಕು ಎಂದು ಹಿಂದೂಗಳ ಪರವಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ವಜುಖಾನ ಶುಚಿತ್ವಕ್ಕೆ ಆದೇಶ ನೀಡಿತ್ತು. ಇದರಿಂದ ಕೊಳವನ್ನು ಶುಚಿಗೊಳಿಸಲಾಗಿತ್ತು. ಈ ವೇಳೆ ಕೊಳದಲ್ಲಿ ಸತ್ತ ಮೀನುಗಳು ಪತ್ತೆಯಾಗಿತ್ತು.  
 

click me!