ಭಾರತದ ಬೀದಿ ಬದಿ ವ್ಯಾಪಾರಿಯಾದ ಟ್ರಂಪ್ ಮೀಮ್ಸ್, ಅಮೆರಿಕ ಚುನಾವಣೆ ಫಲಿತಾಂಶ ಬೆನ್ನಲ್ಲೇ ಫುಲ್ ಟ್ರೋಲ್

Published : Nov 04, 2026, 11:26 AM IST
Trump Faces Social Media Trolling

ಸಾರಾಂಶ

ಅಮೆರಿದ ಮಧ್ಯಂತರ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಡೋನಾಲ್ಡ್ ಟ್ರಂಪ್ ಮೀಮ್ಸ್ ಹರಿದಾಡುತ್ತಿದೆ. ಟ್ರಂಬ್ ಬೆಂಬಲಿತ ವೀವೆಕ್ ರಾಮಸ್ವಾಮಿ ಹಿನ್ನಡೆ ಅನುಭವಿಸುತ್ತಿದ್ದಂತೆ ಟ್ರಂಪ್ ಫುಲ್ ಟ್ರೋಲ್ ಆಗಿದ್ದಾರೆ.

ನ್ಯೂಯಾರ್ಕ್ (ನ.04) ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ. ಟ್ರಂಪ್ ಬೆಂಬಲಿತ ಭಾರತದ ಮೂಲದ ವಿವೇಕ್ ರಾಮಸ್ವಾಮಿ ಸೋಲು ಕಂಡಿದ್ದಾರೆ. ರಿಪಬ್ಲಿಕನ್ ಪಕ್ಷವನ್ನು ಭಾರಿ ಅಂತರದೊಂದಿಗೆ ಮಣಿಸಿದ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಏಮಿ ಆಕ್ಟನ್ ಐತಿಹಾಸಿಕ ಗೆಲುವು ಕಂಡಿದ್ದಾರೆ. ಈ ಮೂಲಕ ಒಹಿಯೋದ ಮೊದಲ ಮಹಿಳಾ ಗವರ್ನರ್ ಅನ್ನೋ ಹೆಗ್ಗಳಿಗೆ ಏಮಿ ಪಾತ್ರರಾಗಿದ್ದಾರೆ. ಆದರೆ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ಗೆ ಭಾರಿ ಮುಖಂಭಗವಾಗಿದೆ. ಇದು ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಟ್ರಂಪ್ ಸೋಲು ಖಚಿತ ಎನ್ನಲಾಗುತ್ತಿದೆ. ಈ ಮಾತುಗಳ ನಡುವೆ ಡೋನಾಲ್ಡ್ ಟ್ರಂಪ್ ಕುರಿತು ಮೀಮ್ಸ್ ಹರಿದಾಡುತ್ತಿದೆ.

ಭಾರತದಲ್ಲಿ ಬೀದಿ ಬದಿ ವ್ಯಾಪಾರಿಯಾದ ಟ್ರಂಪ್

ಭಾರತದ ಬೀದಿ ಬದಿ ವ್ಯಾಪಾರಿಯಾಗಿ ಡೋನಾಲ್ಡ್ ಟ್ರಂಪ್ ಮೀಮ್ಸ್ ಹರಿದಾಡುತ್ತಿದೆ. ಭಾರತದ ಬೀದಿಯಲ್ಲಿ ಲಸ್ಸಿ ಮಾರುತ್ತಿರುವ, ಚಪಾಟಿ ಲಟ್ಟಿಸುತ್ತಿರುವ ಟ್ರಂಪ್ ವಿಡಿಯೋಗಳನ್ನು ಮೀಮ್ಸ್ ಮಾಡಲಾಗಿದೆ. ಇದೇ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಜೊತೆಯಾಗಿ ಬೀದಿ ಬದಿ ವ್ಯಾಪಾರ ಮಾರುತ್ತಿರುವ ಮೀಮ್ಸ್ ಭಾರಿ ಸಂಚಲನ ಸೃಷ್ಟಿಸಿದೆ.

ಕಳೆದ 20 ವರ್ಷಗಳಿಂದ ಒಹಿಯೋ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಈ ಚುನಾವಣೆಯಲ್ಲಿ ಗವರ್ನರ್ ಪಟ್ಟವನ್ನು ಡೆಮೋಕ್ರಾಟ್‌ ಪಕ್ಷ ಗೆದ್ದುಕೊಂಡಿದೆ. ಸಾರ್ವಜನಿಕ ಆರೋಗ್ಯ ತಜ್ಞೆ ಹಾಗೂ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಒಹಿಯೋ ರಾಜ್ಯದ ಆರೋಗ್ಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ 60 ವರ್ಷದ ಡಾ. ಏಮಿ ಆಕ್ಟನ್, ತಮ್ಮ ಎದುರಾಳಿ ವಿವೇಕ್ ರಾಮಸ್ವಾಮಿಯನ್ನು ಮಣಿಸಿದ್ದಾರೆ. ರಾಮಸ್ವಾಮಿ ಹಾಗೂ ಬೆಂಬಲಿಗರು ವೆಚ್ಚ ಮಾಡಿದ 100 ಮಿಲಿಯನ್ ಡಾಲರ್‌ಗೂ ಅಧಿಕ ಭಾರಿ ಹಣದ ಬಲವನ್ನು ಮೆಟ್ಟಿ ನಿಂತು ಅಭೂತಪೂರ್ವ ಯಶಸ್ಸು ಕಂಡಿದ್ದಾರೆ

ವಿವೇಕ್ ರಾಮಸ್ವಾಮಿಗೆ ಹಿನ್ನಡೆಯಾದ 'ತಾಯಿ ಜಾಹೀರಾತು' ವಿವಾದ:

ಈ ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ವಿವೇಕ್ ರಾಮಸ್ವಾಮಿ ಬಿಡುಗಡೆ ಮಾಡಿದ್ದ ಜಾಹೀರಾತೊಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಏಮಿ ಆಕ್ಟನ್ ಅವರಿಂದ ದೂರವಾಗಿದ್ದ ಅವರ ಸ್ವಂತ ತಾಯಿ ಡೊನ್ನಾ ಅರ್ಥರ್ ಅವರನ್ನು ಬಳಸಿ, "ನನ್ನ ಮಗಳು ಸುಳ್ಳುಗಾರ್ತಿ" ಎಂದು ಹೇಳಿಸುವ 60 ಸೆಕೆಂಡುಗಳ ವೀಡಿಯೋ ಜಾಹೀರಾತನ್ನು ಪ್ರಸಾರ ಮಾಡಲಾಗಿತ್ತು. ಆದರೆ, ಬಾಲ್ಯದಲ್ಲಿದ್ದಾಗ ಏಮಿ ಆಕ್ಟನ್ ಅವರ ಮೇಲಾದ ಲೈಂಗಿಕ ದೌರ್ಜನ್ಯ ಮತ್ತು ಕುಟುಂಬದ ಕಹಿ ಇತಿಹಾಸ ಹೊರಬರುತ್ತಿದ್ದಂತೆ, ಈ ನೀಚ ಮಟ್ಟದ ಪ್ರಚಾರಕ್ಕೆ ಎರಡೂ ಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಐವರು ಮಾಜಿ ಗವರ್ನರ್‌ಗಳು ಸೇರಿದಂತೆ ಪ್ರಮುಖರು ಖಂಡಿಸಿದ ಹಿನ್ನೆಲೆಯಲ್ಲಿ, ಮತದಾನಕ್ಕೆ ಕೆಲವೇ ದಿನಗಳಿರುವಾಗ ಈ ಜಾಹೀರಾತನ್ನು ವಾಪಸ್ ಪಡೆಯಬೇಕಾಯಿತು.

ಒಹಿಯೋ ಮಾತ್ರವಲ್ಲದೆ ಅಮೆರಿಕದಾದ್ಯಂತ ಡೆಮೋಕ್ರಟಿಕ್ ಪಕ್ಷ ಭಾರಿ ಜಯಭೇರಿ ಬಾರಿಸಿದೆ. ಜಾರ್ಜಿಯಾ ರಾಜ್ಯದಲ್ಲಿ ಕೆಶಾ ಲ್ಯಾನ್ಸ್ ಬಾಟಮ್ಸ್ ಅವರು ಪ್ರಥಮ ಕಪ್ಪುಬಣ್ಣದ ಮಹಿಳಾ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ ರಿಪಬ್ಲಿಕನ್ನರ ಕೋಟೆಯನ್ನು ಧ್ವಂಸಗೊಳಿಸಿದ್ದಾರೆ. ಒಟ್ಟಾರೆಯಾಗಿ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್‌ಗಳು 3 ಗವರ್ನರ್ ಸ್ಥಾನಗಳು, 6 ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ಸ್ಥಾನಗಳು ಹಾಗೂ 2 ಸೆನೆಟ್ ಸ್ಥಾನಗಳನ್ನು ರಿಪಬ್ಲಿಕನ್‌ಗಳಿಂದ ಕಸಿದುಕೊಳ್ಳುವ ಮೂಲಕ 'ಬ್ಲೂ ವೇವ್' (Blue Wave) ಎಬ್ಬಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಜಯ್ ಮಲ್ಯ ಎಣ್ಣೆ ವ್ಯವಹಾರ ತನ್ನೂರಿಗೆ ಬರದಂತೆ ತಡೆದಿದ್ದ ಬಾಲಿವುಡ್ ನಟ, 40 ಕೋಟಿ ಖರ್ಚು ಮಾಡಿ ಹೊಸಕಿ ಹಾಕಿದ್ದ ಖಳನಾಯಕ
ರಾತ್ರಿಯೆಲ್ಲಾ ನಿದ್ದೆಗೆಡಿಸುತ್ತಿದ್ದ ಭೂತ: ದೆವ್ವದ ಕಾಟ ತಾಳದೇ ಠಾಣೆಗೆ ಬಂದು ಕೊ*ಲೆಗಾರ ಶರಣು