ಕ್ಯಾನ್ಸರ್: ಕರ್ನಾಟಕ ದೇಶಕ್ಕೆ ನಂ 2

By Kannadaprabha News  |  First Published Nov 4, 2019, 10:16 AM IST

ದೇಶದಲ್ಲಿ ‘ಸಾಮಾನ್ಯ ಕ್ಯಾನ್ಸರ್’ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2017 ಕ್ಕೆ ಹೋಲಿಸಿದರೆ 2018 ರಲ್ಲಿ ಕ್ಯಾ ನ್ಸರ್ ಪ್ರಕರಣಗಳ ಸಂಖ್ಯೆ ಶೇ.32.4 ರಷ್ಟು ಏರಿಕೆಯಾಗಿದೆ.


ನವದೆಹಲಿ (ನ. 04): ದೇಶದಲ್ಲಿ ‘ಸಾಮಾನ್ಯ ಕ್ಯಾನ್ಸರ್’ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2017 ಕ್ಕೆ ಹೋಲಿಸಿದರೆ 2018 ರಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಶೇ. .324 ರಷ್ಟು ಏರಿಕೆಯಾಗಿದೆ. ಕ್ಯಾನ್ಸರ್‌ಪೀಡಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂಬ ಆತಂಕದ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಸರ್ಕಾರದ ‘ನ್ಯಾಷನಲ್ ಹೆಲ್ತ್ ಪ್ರೊಫೈಲ್-2019’ ವರದಿಯಲ್ಲಿ ಈ ಸಂಗತಿ ಇದೆ. ಕಳೆದ ವರ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾದ ಪ್ರಮಾಣದಲ್ಲಿ ಗುಜರಾತ್ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕವು 2, ಪಶ್ಚಿಮ ಬಂಗಾಳ 3, ಕೇರಳ 4, ಆಂಧ್ರಪ್ರದೇ ಶೇ. 5, ಉತ್ತರ ಪ್ರದೇಶ 6 ನೇ ಸ್ಥಾನದಲ್ಲಿವೆ. ಸರ್ಕಾರವು ನಡೆಸುವ ಎನ್‌ಸಿಡಿ (ಸಾಂಕ್ರಾಮಿಕವಲ್ಲದ ರೋಗ) ಕೇಂದ್ರಗಳಿಗೆ ೨೦೧೮ರಲ್ಲಿ ೬.೫ ಕೋಟಿ ಜನರು ತಪಾಸಣೆಗೆ ಭೇಟಿ ನೀಡಿದ್ದು, ಇದರಲ್ಲಿ 1.6 ಲಕ್ಷ ಜನರಿಗೆ ಸಾಮಾನ್ಯ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.

Latest Videos

2017 ರಲ್ಲಿ 39,635 ಪ್ರಕರಣಗಳು ದೃಢಪಟ್ಟಿದ್ದವು. ಹೀಗಾಗಿ ಒಂದೇ ವರ್ಷದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಶೇ.3234 ರಷ್ಟು ಹೆಚ್ಚಿದಂತಾಗಿದೆ.

ಯಾವುದು ಇದು ಸಾಮಾನ್ಯ ಕ್ಯಾನ್ಸರ್?

ಬಾಯಿ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ಗಳಿಗೆ ‘ಸಾಮಾನ್ಯ ಕ್ಯಾನ್ಸರ್’ ಎನ್ನಲಾಗುತ್ತದೆ.

ಕ್ಯಾನ್ಸರ್ ಏಕೆ ಬರುತ್ತೆ?

ಬದಲಾಗುತ್ತಿರುವ ಜೀವನ ಶೈಲಿ, ಒತ್ತಡ, ಆಹಾರ ಸೇವನೆಯಲ್ಲಿನ ವ್ಯತ್ಯಾಸ, ಮದ್ಯ ಸೇವನೆ, ತಂಬಾಕು ಚಟ... ಇತ್ಯಾದಿಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

click me!