ಪ್ರಧಾನಿ ಮೋದಿಗೆ ಜೀವಕ್ಕೆ ಬೆದರಿಕೆ ಒಡ್ಡುವ ಇ- ಮೇಲ್‌ವೊಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಲಭ್ಯವಾಗಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಸೆ.04): ದೇಶದಲ್ಲೇ ಅತ್ಯಂತ ಹೆಚ್ಚಿನ ಭದ್ರತೆಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವಕ್ಕೆ ಬೆದರಿಕೆ ಒಡ್ಡುವ ಇ- ಮೇಲ್‌ವೊಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಲಭ್ಯವಾಗಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಎನ್‌ಐಎಗೆ ಲಭ್ಯವಾಗಿರುವ ಇ- ಮೇಲ್‌ನಲ್ಲಿ ‘ಕಿಲ್ ನರೇಂದ್ರ ಮೋದಿ’ ಎಂಬ ಮೂರು ಶಬ್ದವನ್ನು ಬರೆಯಲಾಗಿದೆ. ಆ.8ರ ನಸುಕಿನ 1.34 ವೇಳೆಗೆ ylalwani12345@gmail.com ವಿಳಾಸದಿಂದ info.mum.nia@gov.in ವಿಳಾಸಕ್ಕೆ ಬೆದರಿಕೆ ಇ- ಮೇಲ್ ಕಳುಹಿಸಲಾಗಿದೆ. ಆದರೆ, ಈ ಕುರಿತಾದ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇ-ಮೆಲ್ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯಕ್ಕೆ ಎನ್‌ಐಎ ಪತ್ರವೊಂದನ್ನು ಬರೆದಿದೆ.
undefined
ಚೀನಾ ಬಗ್ಗುಬಡಿಯಲು ಭಾರತದಿಂದ ಸೀಕ್ರೆಟ್ ಪಡೆ..!
ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಇ- ಮೇಲ್ ಬೆದರಿಕೆ ಹಿನ್ನೆಲೆಯಲ್ಲಿ ಮೊದಿ ಅವರಿಗೆ ಒದಗಿಸಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಭಾರತದಲ್ಲೇ ಎಕೆ 47 ಉತ್ಪಾದನೆ: ಒಪ್ಪಂದ
ಮಾಸ್ಕೋ: ವಿಶ್ವದ ಅತ್ಯಾಧುನಿಕ ರೈಫಲ್‌ಗಳಲ್ಲಿ ಒಂದಾದ ‘ಎಕೆ 47’ ಇನ್ನು ಮುಂದೆ ಭಾರತದಲ್ಲೇ ಉತ್ಪಾದನೆಯಾಗಲಿದೆ. ಎಕೆ 47 ಸರಣಿಯಲ್ಲಿ ಅತ್ಯಾಧುನಿಕ ಮಾದರಿಯಾದ ‘ಎಕೆ 47 203’ ಗನ್ ಅನ್ನು ಭಾರತದಲ್ಲಿ ಉತ್ಪಾದನೆ ಮಾಡುವ ಸಂಬಂಧ ಭಾರತ ಹಾಗೂ ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದು ಈ ವೇಳೆ ಒಪ್ಪಂದಕ್ಕೆ ಸಹಿ ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಭಾರತೀಯ ಸೇನಾಪಡೆ ಒಟ್ಟು 7.70 ಲಕ್ಷ ‘ಎಕೆ 47 203’ ಗನ್‌ಗಳ ಅಗತ್ಯವನ್ನು ಹೊಂದಿದ್ದು, ಈ ಪೈಕಿ 1 ಲಕ್ಷ ಗನ್ ರಷ್ಯಾದಿಂದ ಆಮದಾಗಲಿದೆ. ಉಳಿದ 6.70 ಲಕ್ಷ ಗನ್‌ಗಳು ಭಾರತ- ರಷ್ಯಾ ಕಂಪನಿಗಳು ಪಾಲುದಾರಿಕೆಯಲ್ಲಿ ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಿರುವ ಇಂಡೋ ರಷ್ಯಾ ರೈಫಲ್ಸ್ ಪ್ರೈ.ಲಿ.ನಲ್ಲಿ ಉತ್ಪಾದನೆಯಾಗಲಿವೆ.
ಭಾರತಕ್ಕೆ ರೈಫಲ್ ತಂತ್ರಜ್ಞಾನ ಹಸ್ತಾಂತರ, ಭಾರತದಲ್ಲಿ ಘಟಕ ಸ್ಥಾಪನೆ ವೆಚ್ಚ ಸೇರಿಸಿದರೆ ಪ್ರತಿ ಗನ್‌ಗೆ ಅಂದಾಜು 81000 ರು. (1100 ಡಾಲರ್) ವೆಚ್ಚ ತಗುಲಲಿದೆ. ಹೊಸ ಗನ್‌ಗಳು ಹಾಲಿ ಬಳಕೆಯಲ್ಲಿರುವ ಇನ್ಸಾಸ್ (ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್) ಗನ್‌ಗಳನ್ನು ಬದಲಾಯಿಸಲಿವೆ.