ಭಾರತ ಸರ್ಕಾರ ಗಡಿ ನಿರ್ವಹಣೆ ತಂತ್ರ ಕೈಬಿಟ್ಟು ಲಡಾಖ್‌ನಲ್ಲಿ ಚೀನಾದೊಂದಿಗಿನ 1597 ಕಿ.ಮೀ. ಉದ್ದದ ಗಡಿಯನ್ನು ಭದ್ರಪಡಿಸುವ ಹೊಸ ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ಲಡಾಖ್‌ನ ಹಲವು ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚುವರಿ ಸೇನೆ ನಿಯೋಜನೆ ಜೊತೆಗೆ ತೀರಾ ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಸುವ ರಹಸ್ಯ ಪಡೆಯಾದ ‘ಎಸ್ಟಾಬ್ಲಿಷ್‌ಮೆಂಟ್ 22’ ಅನ್ನು ನಿಯೋಜಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಸೆ.04): ಲಡಾಖ್ ಗಡಿಯ ಆಯಕಟ್ಟಿನ ಪ್ರದೇಶ ಕೈವಶಕ್ಕೆ ಚೀನಾ ಯತ್ನ ಮುಂದುವರೆದಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಗಡಿ ರಣತಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಗಡಿ ನಿರ್ವಹಣೆ ತಂತ್ರ ಕೈಬಿಟ್ಟು ಲಡಾಖ್‌ನಲ್ಲಿ ಚೀನಾದೊಂದಿಗಿನ 1597 ಕಿ.ಮೀ. ಉದ್ದದ ಗಡಿಯನ್ನು ಭದ್ರಪಡಿಸುವ ಹೊಸ ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ಲಡಾಖ್‌ನ ಹಲವು ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚುವರಿ ಸೇನೆ ನಿಯೋಜನೆ ಜೊತೆಗೆ ತೀರಾ ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಸುವ ರಹಸ್ಯ ಪಡೆಯಾದ ‘ಎಸ್ಟಾಬ್ಲಿಷ್‌ಮೆಂಟ್ 22’ ಅನ್ನು ನಿಯೋಜಿಸಿದೆ.
undefined
ಇತ್ತೀಚಿಗೆ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆ ವಶಪಡಿಸಿಕೊಳ್ಳುವ ಚೀನಾದ ಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿದ್ದರ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಈ ಪಡೆಯನ್ನು 1962ರಲ್ಲಿ ನಡೆದ ಚೀನಾ ವಿರುದ್ಧದ ಯುದ್ಧದ ಅಂತಿಮ ಹಂತದಲ್ಲಿ ರಚಿಸಲಾಗಿತ್ತು.
ಮತ್ತೆ ಯುದ್ಧಭೀತಿ: ಗಡಿಗೆ ಸೇನಾ ಮುಖ್ಯಸ್ಥರು ದೌಡು..!
ಭಾರತದಲ್ಲಿನ ನಿರಾಶ್ರಿತ ಟಿಬಿಟಿಯರನ್ನೇ ಆಯ್ಕೆ ಮಾಡಿಕೊಂಡು ರಚಿಸಲಾದ ಈ ಪಡೆಯನ್ನು ಗುಪ್ತಚರ ದಳ, ರಾ ಮತ್ತು ಸಿಐಎಗಳು ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿವೆ. ಪ್ರಧಾನಿ ಕಚೇರಿ ಮತ್ತು ಕೇಂದ್ರ ಸಂಪುಟ ಕಾರ್ಯದರ್ಶಿಗಳ ಆಡಳಿತ ವ್ಯಾಪ್ತಿಗೆ ಒಳಪಟ್ಟಈ ಪಡೆಯಲ್ಲಿ 5000 ಯೋಧರಿದ್ದಾರೆ. ಆರಂಭಿಕ ವರ್ಷಗಳಲ್ಲಿ ಈ ಪಡೆಯನ್ನು ಚೀನಾದ ಅಣ್ವಸ್ತ್ರ ಸಿಡಿತಲೆಗಳ ನಿಯೋಜನೆ ಮೇಲೆ ಕಣ್ಣಿಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತಾದರೂ ನಂತರ ಯುದ್ಧ ಚಟವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.