ಚಳಿ ತೀವ್ರವಾಗಿದೆ. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ ಎಂದು ಮೋದಿ ವರದಿ ಮಾಡುತ್ತಿದ್ದ ಪತ್ರಕರ್ತರ ಬಳಿ ಬಂದು ಸೂಚಿಸಿದ್ದಾರೆ. ಮೋದಿ ಕಾಳಜಿ ತೋರಿದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ನವದೆಹಲಿ(ಜ.11) ಪ್ರಧಾನಿ ನರೇಂದ್ರ ಮೋದಿ ಕಿಕ್ಕಿರಿದ ಸಮಾವೇಶದಲ್ಲಿ ಭಾಷಣ ಮಾಡುವಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಜನರನ ನಡೆ ಅಪಾಯ ಎಂದು ಕಂಡರೆ ತಕ್ಷಣವೆ ಮನವಿ ಮಾಡಿಕೊಳ್ಳುತ್ತಾರೆ. ಹಲವು ಬಾರಿ ತಮ್ಮ ಭಾಷಣ ನಿಲ್ಲಿಸಿ ಮರ ಏರಿ ಕುಳಿತ, ವಿದ್ಯುತ್ ಕಂಬ ಏರಿದವರನ್ನು ಕೆಳಗೆ ಇಳಿಯಲು ಸೂಚಿಸಿದ್ದಾರೆ. ಹಲವು ಬಾರಿ ಮಕ್ಕಳು ಕೈಗಳನ್ನು ಮೇಲೆತ್ತಿ ನಿಂತು ಮೋದಿಯ ಗಮನಸೆಳೆಯಲು ಪ್ರಯತ್ನಿಸಿದಾಗ ಗುರುತಿಸಿ ಪ್ರಯಾಸ, ಕಷ್ಟಪಡದೆ ಆರಾಮವಾಗಿ ಕುಳಿತುಕೊಳ್ಳಲು, ಸೀಟು ಸಿಗದವರಿಗೆ ಕುರ್ಚಿ ನೀಡುವಂತೆ ಸೂಚಿಸಿದ ಘಟನೆ ಹಲವು ಬಾರಿ ನಡೆದಿದೆ. ಈ ಮೂಲಕ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಉದಾಗರಣೆಗಳಿವೆ. ಇದೀಗ ವರದಿ ಮಾಡುತ್ತಿದ್ದ ಪತ್ರಕರ್ತರ ಬಳಿ ಬಂದ ಪ್ರದಾನಿ ಮೋದಿ, ತೀವ್ರ ಚಳಿ ಇದೆ. ಹೀಗಾಗಿ ನಿಮ್ಮ ಆರೋಗ್ಯದ ಕಡೆ ಗಮನ ಇರಲಿ. ತಲೆ ಕವರ್ ಮಾಡಿ ಎಂದು ಮೋದಿ ಸೂಚಿಸಿದ ಘಟನೆ ನವ ದೆಹಲಿಯಲ್ಲಿ ನಡೆದಿದೆ.
ದೆಹಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಶುಕ್ರವಾರ(ಜ.10) ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು. ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ದಹಲಿಯಲ್ಲಿ ವಿಪರೀತ ಚಳಿ ಶುರುವಾಗಿದೆ. ದೆಹಲಿ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಲು ಬಿಜಪಿ ಕಚೇರಿಗ ಆಗಮಿಸಿದ ಮೋದಿ, ಕಾರಿನಿಂದ ಇಳಿದು ನೇರವಾಗಿ ಪತ್ರಕರ್ತರ ಬಳಿ ತೆರಳಿ ಮಾತನಾಡಿದ್ದಾರೆ.
ಜಾರ್ಜಿಯಾ ಮೆಲೋನಿ ಜೊತೆಗಿನ ಮೀಮ್ಸ್‌ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮೋದಿ
ಚಳಿ ಕಾರಣ ಓವರ್ ಕೋಟ್ ಧರಿಸಿದ್ದ ಪ್ರಧಾನಿ ಮೋದಿ ಕಾರಿನಿಂದ ಇಳಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ನೇರವಾಗಿ ಬಿಜೆಪಿ ಕೇಚರಿಗೆ ತೆರಳಲಿಲ್ಲ. ಮೋದಿ ನೇರವಾಗಿ ವರದಿ ಮಾಡಲು ಬಿಜೆಪಿ ಕಚೇರಿ ಹೊರಭಾಗದಲ್ಲಿದ್ದ ಪತ್ರಕರ್ತರ ಬಳಿ ಬಂದಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಲೊಹ್ರಿ ಹಾಗೂ ಮಕರ ಸಂಕ್ರಾತಿ ಹಬ್ಬದ ಶುಭಾಶಯ. ಚಳಿ ತೀವ್ರವಾಗಿದೆ. ನೀವು ಕನಿಷ್ಠ ತಲೆಯಾದರೂ ಕವರ್ ಮಾಡಿ. ನಿಮ್ಮ ಆರೋಗ್ಯದ ಕಡೆ ಗಮನ ಇರಲಿ. ಚಳಿಯಿಂದ ಬೆಚ್ಚೆಗಿರಲು ಬಟ್ಟೆಗಳನ್ನು ಧರಿಸಿ ಎಂದು ಮೋದಿ ಸೂಚಿಸಿದ್ದಾರೆ.
| Delhi: "New Year greetings to all of you. Greetings to you on Lohri, Makar Sankranti. Take care of yourselves in this cold, cover your head," PM Narendra Modi told journalists at the BJP headquarters who were here to cover party CEC meeting for … pic.twitter.com/tFyVGaExb9
— ANI (@ANI)
ಪತ್ರಕರ್ತರ ಆರೋಗ್ಯ ಕಾಳಜಿ ತೋರಿದ ಮೋದಿ ಎಲ್ಲರಿಗೂ ಶುಭಾಶಯ ಹೇಳಿ ಬಳಿಕ ಚುನಾವಣಾ ಸಮಿತಿ ಸಭೆಗೆ ತೆರಳಿದ್ದಾರೆ. ಮೋದಿ ಕಾಳಜಿ ತೋರುತ್ತಿರುವ ಈ ವಿಡಿಯೋ ಹರಿದಾಡುತ್ತಿದೆ. ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರಧಾನಿ ದೇಶದ ಕಾಳಜಿ ವಹಿಸುತ್ತಿದ್ದಾರೆ. ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಲವರು ಆಶಿಸಿದ್ದಾರೆ. ಇದೇ ವೇಳೆ ವಿರೋಧಳು ವ್ಯಕ್ತವಾಗಿದೆ. ಅಷ್ಟು ಪತ್ರಕರ್ತರಿದ್ದರು, ಆದರೆ ಒಂದೇ ಒಂದು ಪ್ರಶ್ನೆ ಕೇಳಲಿಲ್ಲ. ಮಾಧ್ಯಮವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಅನ್ನೋದರ ಸಂಕೇತ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಬಿಜೆಪಿ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 29 ಅಭ್ಯರ್ಥಿಗಳ ಟಿಕೆಟ್ ಅಂತಿಮಗೊಳಿಸಲಾಗಿತ್ತು. ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಗೆ ಶುಕ್ರವಾರ ಸಭೆ ನಡೆದಿದೆ. ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ. ಇತ್ತ ಚುನಾವಣಾ ಪ್ರಚಾರ ಕಾರ್ಯಗಳು ಆರಂಭಗೊಂಡಿದೆ.
ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ ಮೋದಿ ಮಾತು!