
ನವದೆಹಲಿ[ಜ.01]: ಹೊಸ ವರ್ಷದ ಆರಂಭದಲ್ಲೇ ರೈಲ್ವೆ ಇಲಾಖೆ ಗ್ರಾಹಕರಿಗೆ ಶಾಕ್ ನೀಡಿದೆ. ಜ.1ರಿಂದಲೇ ಅನ್ವಯವಾಗುವಂತೆ ಎಲ್ಲಾ ಮಾದರಿ ರೈಲು ಪ್ರಯಾಣ ದರ ಏರಿಸಿ
ಹವಾ ನಿಯಂತ್ರಿತವಲ್ಲದ ಸಾಮಾನ್ಯ ರೈಲುಗಳು ಮತ್ತು ಸಬ್ ಅರ್ಬನ್ ಅಲ್ಲದ ರೈಲುಗಳ ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಹವಾ ನಿಯಂತ್ರಿತವಲ್ಲದ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರ ಪ್ರತಿ ಕಿ.ಮೀ.ಗೆ 2 ಪೈಸೆ ಹಾಗೂ ಹವಾನಿಯಂತ್ರಿತ ದರ್ಜೆ (ಎ.ಸಿ.) ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ 4 ಪೈಸೆ ಹೆಚ್ಚಳ ಮಾಡಲಾಗಿದೆ.
ಶತಾಬ್ದಿ, ರಾಜಧಾನಿ ಮತ್ತು ದುರಂತೊ ರೈಲುಗಳೂ ದರ ಏರಿಕೆಗೆ ಒಳಪಟ್ಟಿವೆ. ಉದಾಹರಣೆಗೆ 1,447 ಕಿ.ಮೀ. ದೂರ ಕ್ರಮಿಸುವ ದೆಹಲಿ- ಕೋಲ್ಕತಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ದರ ಪ್ರತಿ ಕಿ.ಮೀಗೆ 4 ಪೈಸೆಯಂತೆ 58 ರು. ಹೆಚ್ಚಳವಾಗಿದೆ. ಇದೇ ವೇಳೆ ಟಿಕೆಟ್ ಕಾಯ್ದಿರಿಸುವ ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ