
ಭೋಪಾಲ್(ಜೂ.01) ಕಾರುಗಳಲ್ಲಿ ಸನ್‌ರೂಫ್ ಫೀಚರ್ ಇದೀಗ ಸಾಮಾನ್ಯವಾಗಿದೆ. ಸಣ್ಣ ಕಾರಾಗಿರಲಿ, ದೊಡ್ಡ ಕಾರಾಗಿರಲಿ ಸನ್‌ರೂಫ್ ಫೀಚರ್ ಕೊಟ್ಟಿರುತ್ತಾರೆ. ಈ ಸನ್‌ರೂಫ್ ಕಾರುಗಳಲ್ಲಿ ಪ್ರಯಾಣಿಸುವಾಗ ಯುವ ಸಮೂಹ, ಮಕ್ಕಳು ಪ್ರಯಾಣವನ್ನು ಆನಂದಿಸುತ್ತಾರೆ. ಸನ್‌ರೂಫ್ ತೆರದು ನಿಂತುಕೊಂಡು ಪ್ರಯಾಣಿಸುತ್ತಾರೆ. ಹೆದ್ದಾರಿ, ಬೆಟ್ಟ, ಪ್ರಕೃತಿಗಳ ರಸ್ತೆಯಲ್ಲಿ ಸಂಚರಿಸುವಾಗ ನಿಂತುಕೊಂಡು ಪ್ರಯಾಣ ಆನಂದಿಸುತ್ತಾರೆ. ಆದರೆ ಇದು ಅತ್ಯಂತ ಅಪಾಯಾಕಾರಿ ಅನ್ನೋದು ಟ್ರಾಫಿಕ್ ಪೊಲೀಸರು ತಿಳಿ ಹೇಳಿದ್ದಾರೆ. ಹೀಗೆ ಇಬ್ಬರು ಮಕ್ಕಳು ಸನ್‌ರೂಪ್ ತೆರೆದು ನಿಂತು ಅಸ್ವಾದಿಸುತ್ತಾ ತೆರಳುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ತಡೆದೆ ಇದರ ಅಪಾಯದ ಬಗ್ಗೆ ತಿಳಿ ಹೇಳಿದ್ದಾರೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಾರು ನಿಲ್ಲಿಸಿದ ಟ್ರಾಫಿಕ್ ಪೊಲೀಸ್
ಮಧ್ಯಪ್ರದೇಶ ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಹಡೋಲ್ ಮೂಲದ ಕಾರು ರಸ್ತೆಯಲ್ಲಿ ಸಾಗುತ್ತಿತ್ತು. ಇತ್ತ ಟ್ರಾಫಿಕ್ ಕರ್ತವ್ಯದಲ್ಲಿ ಪೊಲೀಸ್ ಈ ಕಾರನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರಣ ಪೋಷಕರು ಕಾರಿನಲ್ಲಿ ಕುಳಿತುಕೊಂಡಿದ್ದರೆ, ಇಬ್ಬರು ಮಕ್ಕಳು ಸನ್‌ರೂಫ್ ಮೂಲಕ ನಿಂತಿದ್ದಾರೆ. ಕಾರು ನಿಗದಿತ ವೇಗದಲ್ಲಿ ಸಾಗುತ್ತಿತಿತ್ತು. ಈ ಕಾರು ಅಡ್ಡಗಟ್ಟಿದ ಪೊಲೀಸ್ ನಿಲ್ಲಿಸಿದ್ದಾರೆ.
ಸನ್‌ರೂಫ್‌ನಲ್ಲಿ ಮಕ್ಕಳ ನಿಲ್ಲಸಿ ಪ್ರಯಾಣಿಸಬೇಡಿ
ಸನ್‌ರೂಫ್ ತೆರೆದು ಇಲ್ಲಿ ಮಕ್ಕಳ ನಿಲ್ಲಿಸಿ ಪ್ರಯಾಣ ಮಾಡಬೇಡಿ ಎಂದು ಟ್ರಾಫಿಕ್ ಪೊಲೀಸ್ ಪೋಷಕರಿಗೆ ತಿಳಿ ಹೇಳಿದ್ದಾರೆ. ಹೀಗೆ ನಿಂತು ಪ್ರಯಾಣ ಮಕ್ಕಳ ಪ್ರಾಣದ ಮೇಲೆ ಭಾರಿ ಅಪಾಯದ ಸಾಧ್ಯತೆ ಇದೆ. ಮಕ್ಕಳು ಸನ್‌ರೂಫ್‌ನಲ್ಲಿ ನಿಲ್ಲುವಾಗ ಅರ್ಧ ಭಾಗ ಹೊರಗಿರುತ್ತದೆ. ಇನ್ನರ್ಧ ಭಾಗ ಮಾತ್ರ ಕಾರಿನ ಒಳಗಿರುತ್ತದೆ. ಕಾರು ನಿಧಾನವಾಗಿ ಸಾಗುತ್ತಿದ್ದರೆ, ಅಥವಾ ಮಿತಿಯೊಳಗೆ ಸಾಗುತ್ತಿದ್ದರೂ, ರಸ್ತೆಯಲ್ಲಿ ಅಚಾನಕ್ಕಾಗಿ ಗುಂಡಿ ಎದುರಾದರೆ, ಅಥವಾ ನಾಯಿ ಸೇರಿದಂತೆ ಇನ್ಯಾವುದೋ ಕಾರಣಕ್ಕೆ ಅಚಾನಕ್ಕಾಗಿ ಬ್ರೇಕ್ ಹಾಕಿದರೆ, ಹಂಪ್ ಹಾರಿದರೆ ಮಕ್ಕಳು ಕಾರಿನ ಮುಂಭಾಗಕ್ಕೆ ಬಿದ್ದು ರಸ್ತೆಗೆ ಅಪ್ಪಳಿಸಲಿದ್ದಾರೆ. ಇದರಿಂದ ಪ್ರಾಣಕ್ಕೆ ಅಪಾಯವಾಗಲಿದೆ. ಹೀಗಾಗಿ ಕಾರಿನ ಸನ್‌ರೂಫ್ ತೆರೆದು ಮಕ್ಕಳ ನಿಲ್ಲಿಸಬೇಡಿ ಎಂದು ಟ್ರಾಫಿಕ್ ಪೊಲೀಸ್ ತಿಳಿ ಹೇಳಿದ್ದಾರೆ.
ಆರಂಭದಲ್ಲಿ ನಿರ್ಲಕ್ಷಿಸಿದ ಪೋಷಕರು
ಟ್ರಾಫಿಕ್ ಪೊಲೀಸ್ ಕಾರು ನಿಲ್ಲಿಸಿ ತಾಳ್ಮೆಯಿಂದ ಪೋಷಕರಿಗೆ ಈ ರೀತಿ ಸನ್‌ರೂಫ್‌ನಲ್ಲಿ ಮಕ್ಕಳ ನಿಲ್ಲಿಸದಂತೆ ಸೂಚಿಸಿದ್ದಾರೆ. ಆರಂಭದಲ್ಲಿ ಪೋಷಕರು ಪೊಲೀಸ್ ಮಾತನ್ನು ನಿರ್ಲಕ್ಷಿಸಿದ್ದಾರೆ. ಕೇಳಿದ ಹಾಗೆ ನಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಟ್ರಾಫಿಕ್ ಪೊಲೀಸ್ ಅತೀ ತಾಳ್ಮೆಯಿಂದ ತಿಳಿ ಹೇಳಿದ್ದಾರೆ. ಬ್ರೇಕ್ ಹಾಕಿದರೆ, ದಿಢೀರ್ ರಸ್ತೆಯಲ್ಲಿ ಎದುರಾಗುವ ತುರ್ತು ಪರಿಸ್ಥಿತಿಗಳಿಂದ ಮಕ್ಕಳ ಹೊರಕ್ಕೆ ಬೀಳುತ್ತಾರೆ. ಅವರ ಜೀವಕ್ಕೆ ಅಪಾಯವಾಗಲಿದೆ ಎಂದು ವಿನಯದಿಂದ ಹೇಳಿದ್ದಾರೆ. ಈ ವೇಳೆ ಪೋಷಕರಿಗೆ ಅಪಾಯ ಹಾಗೂ ಗಂಭೀರತ ಅರಿವಾಗಿದೆ.
ಪೊಲೀಸ್ ನಡೆಗೆ ಮೆಚ್ಚುಗೆ
ಪೊಲೀಸರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಳ್ಮೆಯಿಂದ ಪೊಲೀಸ್ ತಿಳಿ ಹೇಳಿದ ರೀತಿಗೂ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ಟ್ರಾಫಿಕ್ ಪೊಲೀಸ್ ಅವಶ್ಯಕವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ