ಟರ್ಬುಲೆನ್ಸ್‌ನಿಂದ ನಿಯಂತ್ರಣಕ್ಕೆ ಸಿಗದ ಇಂಡಿಗೋ ವಿಮಾನ, ಪ್ರಯಾಣಿಕರ ಚೀರಾಟ ದೃಶ್ಯ ಸೆರೆ

Published : Jun 01, 2025, 10:10 PM ISTUpdated : Jun 01, 2025, 10:12 PM IST
Indigo

ಸಾರಾಂಶ

ರಾಯ್‍‌ಪುರ ಡೆಲ್ಲಿ ಇಂಡಿಗೋ ವಿಮಾನ ಭಾರಿ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿದೆ. ಇನ್ನೇನು ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ  ವಿಮಾನ ನಿಯಂತ್ರಣಕ್ಕೆ ಸಿಕಿಲ್ಲ. ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ ಸೆರೆಯಾಗಿದೆ.

ನವದೆಹಲಿ(ಜೂ.01) ಜೈಪುರ್-ದೆಹಲಿ ನಡುವಿನ ಇಂಡಿಗೋ ವಿಮಾನ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡ ಘಟನೆ ನಡೆದಿದೆ. ಪ್ರಯಾಣಿಕರನ್ನು ಹೊತ್ತು ಸಾಗಿದ ಇಂಡಿಗೋ ವಿಮಾನ 6E 6313 ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ಟರ್ಬುಲೆನ್ಸ್‌ಗೆ ಸಿಲುಕಿದೆ. ಭಾರಿ ಪ್ರಮಾಣದ ಗಾಳಿ ಮಳೆಯಿಂದ ವಿಮಾನ ಲ್ಯಾಡಿಂಗ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ವಿಮಾನ ನಿಯಂತ್ರಕ್ಕೆ ಸಿಗದೆ ತೇಲಾಡಿದೆ. ಇತ್ತ ಪ್ರಯಾಣಿಕರು ತೀವ್ರ ಆತಂಕದ ಪರಿಸ್ಥಿತಿ ಎದುರಿಸಿದ್ದಾರೆ. ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ, ಪ್ರಾರ್ಥಿಸುತ್ತಿರುವ ದೃಶ್ಯ ಸೆರೆಯಾಗಿದೆ.

ನಿಯಂತ್ರಣಕ್ಕೆ ಸಿಗದೆ ಆತಂಕ ಎದುರಿಸಿದ ಇಂಡಿಗೋ ವಿಮಾನ

ರಾಯ್‌ಪುರ್ ನಗರದಿಂದ ಟೇಕ್ ಆಫ್ ಆದ ಇಂಡಿಗೋ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ದೆಹಲಿ ವಾಯು ಪ್ರದೇಶ ತಲುಪುತ್ತಿದ್ದಂತೆ ಭಾರಿ ಮಳೆ ಹಾಗೂ ಗಾಳಿಯಿಂದ ವಿಮಾನ ಸವಾಲು ಎದುರಿಸಿತ್ತು. ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಗಾಳಿ ಮಳೆ ಹೆಚ್ಚಾಗಿದೆ. ಇದರ ನಡುವೆ ಇಂಡಿಗೋ ವಿಮಾನ ಲ್ಯಾಂಡಿಂಗ್‌ಗೆ ಸಜ್ಜಾಗಿತ್ತು. ವಿಮಾನ ವೇಗವಾಗಿ ರನ್ ವೇಯತ್ತ ಇಳಿಯಲು ಆರಂಭಿಸಿತ್ತು. ಈ ವೇಳೆ ಟರ್ಬುಲೆನ್ಸ್‌ನಿಂದ ನಿಯಂತ್ರಣ ಕಳೆದುಕೊಂಡಿದೆ. ವಿಮಾನ ಅತ್ತಿಂದಿತ್ತ ತೇಲಾಡಿದೆ. ಪ್ರಯಾಣಿಕಕರು ಚೀರಾಡಿದ್ದಾರೆ.

ಲ್ಯಾಂಡಿಂಗ್ ಮಾಡದೇ ಮತ್ತೆ ಹಾರಿದ ವಿಮಾನ

ಆಗಸದಿಂದ ಇಳಿಯುತ್ತಿದ್ದಂತೆ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಹವಾಮಾನ ವೈಪರಿತ್ಯದಿಂದ ವಿಮಾನ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಹೀಗಾಗಿ ಇಂಡಿಗೋ ಪೈಲೆಟ್ ಸಮಯೋಚಿತ ನಿರ್ಧಾರ ಹಾಗೂ ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನ ಲ್ಯಾಂಡ್ ಮಾಡದೇ ಮತ್ತೆ ಹಾರಿಸಿದ್ದಾರೆ. ವಿಮಾನ ಲ್ಯಾಂಡಿಂಗ್ ಮಾಡದ ಪೈಲೆಟ್ ಮತ್ತೆ ದೆಹಲಿ ವಿಮಾನ ನಿಲ್ದಾಣದ ಸುತ್ತು ಹೊಡೆದಿದ್ದಾರೆ. ಭಾರಿ ಪ್ರಮಾಣದ ಗಾಳಿ ಕಡಿಮೆಯಾಗುವ ವರೆಗೆ ಒಂದೆರೆಡು ಸುತ್ತು ನಿಲ್ದಾಣದ ಸುತ್ತ ಹೊಡೆದಿದ್ದಾರೆ.

 

 

ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಪೈಲೆಟ್

ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಪೈಲೆಟ್ ವಿಮಾನ ಇಳಿಸಲು ಸಾಧ್ಯವಾಗದ ಮತ್ತೆ ಹಾರಾಟ ನಡೆಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಬಾರಿ ಗಾಳಿ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕಂಟ್ರೋಲ್ ರೂಂ ಇಂಡಿಗೋ ವಿಮಾನ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಿತ್ತು. ಇದೇ ವೇಳೆ ತುರ್ತು ನಿರ್ವಹಣೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಇಂಡಿಗೋ ಪೈಲೆಟ್ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

80 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ

ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಬರೋಬ್ಬರಿ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಹೀಗಾಗಿ ವಿಮಾನ ನಿಯಂತ್ರಣ ಕಳೆದಕೊಂಡಿದೆ. ಈ ಗಾಳಿ ವೇಗದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿದ್ದರೆ ಅಪಾಯದ ತೀವ್ರತೆ ಹೆಚ್ಚಾಗುತ್ತಿತ್ತುು. ಪೈಲೆಟ್ ಉತ್ತಮ ನಿರ್ಧಾರಾ ತೆಗೆದುಕೊಂಡು ಮತ್ತೆ ಹಾರಾಟ ನಡೆಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ವಾತಾವರಣ ತಿಳಿಗೊಳ್ಳುತ್ತಿದ್ದಂತೆ ಇಂಡಿಗೋ ವಿಮಾನ ಸುರಕ್ಷಿತವಾಗಿ ಇಳಿಸಿದ್ದಾರೆ.

ನಾಲ್ಕು ವಿಮಾನ ಮಾರ್ಗ ಬದಲು

ಇಂಡಿಗೋ ವಿಮಾನ ಟರ್ಬುಲೆನ್ಸ್ ಹಿಟ್ ಆದ ಕಾರಣ ಇದರ ಹಿಂದಿದ್ದ ನಾಲ್ಕು ವಿಮಾನಗಳ ಮಾರ್ಗ ಬದಲಿಸಲಾಗಿತ್ತು. ದೆಹಲಿಯಲ್ಲಿ ಇಳಿಯಬೇಕಿದ್ದ ನಾಲ್ಕು ವಿಮಾನಗಳನ್ನು ಚಂಡೀಘಡ, ಅಮೃತಸರ ಹಾಗೂ ಇನ್ನೆರಡು ವಿಮಾನ ಜೈಪುರದಲ್ಲಿ ಲ್ಯಾಂಡ್ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!