ನ. 26ಕ್ಕೆ ರಾಷ್ಟ್ರವ್ಯಾಪಿ ಕಾರ್ಮಿಕ ಮುಷ್ಕರ!

By Suvarna NewsFirst Published Nov 18, 2020, 11:52 AM IST
Highlights

ಕಾರ್ಮಿಕ, ಕೃಷಿ ಕಾನೂನುಗಳನ್ನು ವಿರೋಧಿಸಿ, ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯಕ್ಕೆ ಖಂಡನೆ| 26ಕ್ಕೆ ರಾಷ್ಟ್ರವ್ಯಾಪಿ ಕಾರ್ಮಿಕ ಮುಷ್ಕರ| 10 ಕಾರ್ಮಿಕ ಸಂಘಟನೆಗಳ ಘೋಷಣೆ

 ನವದೆಹಲಿ(ನ.18): ಕಾರ್ಮಿಕ, ಕೃಷಿ ಕಾನೂನುಗಳನ್ನು ವಿರೋಧಿಸಿ, ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಖಂಡಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ನ.26ರಂದು ದೇಶಾವ್ಯಾಪಿ ಸಾಮಾನ್ಯ ಮುಷ್ಕರ ನಡೆಸಲು ನಿರ್ಧರಿಸಿವೆ. ಇದೇ ವೇಳೆ, ಕೃಷಿ ಕಾಯ್ದೆ ವಿರೋಧಿಸಿ ಮುಂದಿನ ವಾರ ಎರಡು ದಿನ ರೈತ ಸಂಘಟನೆಗಳು ಚಳವಳಿ ನಡೆಸಲು ಉದ್ದೇಶಿಸಿದ್ದು, ಅದಕ್ಕೂ ಬೆಂಬಲ ಘೋಷಿಸಿವೆ.

ಮುಷ್ಕರ ನಡೆಸುವ ಸಂಬಂಧ ಸೋಮವಾರ ಕಾರ್ಮಿಕ ಸಂಘಟನೆಗಳು ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಭೆ ನಡೆಸಿವೆ. ಕಾರ್ಮಿಕರು ಹಾಗೂ ದೇಶಾದ್ಯಂತ ಜನರಿಂದ ಪ್ರಚಂಡ ಬೆಂಬಲ ವ್ಯಕ್ತವಾಗಿದೆ ಎಂದು 10 ಸಂಘಟನೆಗಳ ಜಂಟಿ ವೇದಿಕೆ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತೀಯ ರಾಷ್ಟ್ರೀಯ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಇಂಟಕ್‌), ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ), ಹಿಂದ್‌ ಮಜ್ದೂರ್‌ ಸಭಾ (ಎಚ್‌ಎಂಎಸ್‌) ಸೇರಿದಂತೆ 10 ಸಂಘಟನೆಗಳು ಈ ಮುಷ್ಕರದಲ್ಲಿ ಮುಂಚೂಣಿಯಲ್ಲಿವೆ.

ಕೇಂದ್ರ ಸರ್ಕಾರ ಹೊಸದಾಗಿ ಅಂಗೀಕರಿಸಿರುವ ಕಾರ್ಮಿಕ, ಕೃಷಿ ಕಾನೂನುಗಳನ್ನು ಕೈಬಿಡಬೇಕು. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಮಾರಾಟ ಮಾಡಬಾರದು. ನೈಸರ್ಗಿಕ ಸಂಪನ್ಮೂಲಗಳನ್ನು ಮಾರಕೂಡದು. ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ನಡೆಸಬಾರದು ಎಂಬುದು ಕಾರ್ಮಿಕ ಸಂಘಟನೆಗಳ ಬೇಡಿಕೆಯಾಗಿ

click me!