ದೇಶದಲ್ಲಿ 7500ರ ಗಡಿ ದಾಟಿದ ವೈರಸ್‌!

Published : Apr 11, 2020, 08:30 AM ISTUpdated : Apr 11, 2020, 12:40 PM IST
ದೇಶದಲ್ಲಿ 7500ರ ಗಡಿ ದಾಟಿದ ವೈರಸ್‌!

ಸಾರಾಂಶ

ದೇಶದಲ್ಲಿ 7500ರ ಗಡಿ ದಾಟಿದ ವೈರಸ್‌| ನಿನ್ನೆ ದಾಖಲೆಯ 886 ಜನಕ್ಕೆ ಸೋಂಕು, 26 ಮಂದಿ ಸಾವು| ಮೃತರ ಸಂಖ್ಯೆ 251ಕ್ಕೇರಿಕೆ

ನವದೆಹಲಿ(ಏ.11): ದೇಶದಲ್ಲಿ ಶುಕ್ರವಾರ ಮತ್ತೆ ದಾಖಲೆಯ 886 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7500ರ ಗಡಿ ದಾಟಿದೆ. ಇದೇ ವೇಳೆ ಕೊರೋನಾಕ್ಕೆ 26 ಮಂದಿ ಬಲಿ ಆಗಿದ್ದು, ಸಾವಿನ ಸಂಖ್ಯೆ 251ಕ್ಕೆ ಏರಿಕೆ ಆಗಿದೆ.

"

ದೇಶದ ಕೊರೋನಾ ಕೇಂದ್ರ ಎನಿಸಿರುವ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 1,364ಕ್ಕೆ ಏರಿಕೆ ಆಗಿದೆ. ಶುಕ್ರವಾರ ಮತ್ತೆ 210 ಮಂದಿಗೆ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 1574ಕ್ಕೆ ಏರಿಕೆ ಆಗಿದೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 911, ದೆಹಲಿಯಲ್ಲಿ 903, ರಾಜಸ್ಥಾನದಲ್ಲಿ 520, ಮಧ್ಯ ಪತ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ 4000ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಬಳಿಕ ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಸಾವು ಸಂಭವಿಸಿದ್ದು, ಈವರೆಗೆ 33 ಮಂದಿ ಬಲಿ ಆಗಿದ್ದಾರೆ.

ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ: ಸೋಂಕಿತರ ಸೇವೆಯಲ್ಲಿ ವೈದ್ಯ!

ಇದರ ಬೆನ್ನಲ್ಲೇ ಸೋಂಕು ಹರಡದಂತೆ ತಡೆಗೆ ರಾಜ್ಯಗಳಲ್ಲಿ ಇನ್ನಷ್ಟುಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಡಿಶಾ ಬಳಿಕ ಪಂಜಾಬ್‌ನಲ್ಲಿ ಏ.30ರ ವರೆಗೆ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧರಿಸಲಾಗಿದೆ. ಮಹಾರಾಷ್ಟದ ಬಳಿಕ ಒಡಿಶಾ ಮತ್ತು ತೆಲಂಗಾಣದಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಧಾರ್ಮಿಕ ಸಭೆ ಸಮಾರಂಭಗಳು ಮತ್ತು ಮೆರವಣಿಗೆಗಳ ಆಯೋಜನೆಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ಸಮುದಾಯ ಹಂತ ತಲುಪಿಲ್ಲ:

ಇದೇ ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರೂ ಭಾರತದಲ್ಲಿ ಇನ್ನೂ ಸೋಂಕು ಸಮುದಾಯ ಹಂತವನ್ನು ತಲುಪಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ವೇಳೆ ಜನರಿಗೆ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಿಂದ ಆನ್‌ಲೈನ್‌ ಮಾರಾಟ ತಾಣಗಳ ಆರಂಭಕ್ಕೆ ಅನುಮತಿ ನೀಡಿದೆ.

ಮಹಾರಾಷ್ಟ್ರ: 1574 ಸೋಂಕಿತರು, 110 ಸಾವು

ದೆಹಲಿ: 903 ಸೋಂಕಿತರು, 14 ಸಾವು

ತಮಿಳುನಾಡು: 11 ಸೋಂಕಿತರು,  9 ಸಾವು

ತೆಲಂಗಾಣ: 71 ಸೋಂಕಿತರು, 12 ಸಾವು

ರಾಜಸ್ಥಾನ:  520 ಸೋಂಕಿತರು, 8 ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು