ಸೆಪ್ಟೆಂಬ​ರ್‌ಗೆ ಕೊರೋನಾ ತುತ್ತ​ತು​ದಿ​: ಪಂಜಾಬ್‌ ಸಿಎಂ ಸ್ಫೋಟಕ ಮಾಹಿ​ತಿ

By Kannadaprabha News  |  First Published Apr 11, 2020, 7:32 AM IST

ಸೆಪ್ಟೆಂಬ​ರ್‌ಗೆ ಕೊರೋನಾ ತುತ್ತ​ತು​ದಿ​ಗೆ-ಅಮ​ರೀಂದರ್‌| ಆಗ ದೇಶದ ಶೇ.87ರಷ್ಟುಜನಕ್ಕೆ ಸೋಂಕು ಬರು​ತ್ತೆ| ವರದಿ ಉಲ್ಲೇಖಿಸಿ ಪಂಜಾಬ್‌ ಸಿಎಂ ಸ್ಫೋಟಕ ಮಾಹಿ​ತಿ


ಚಂಡೀಗಢ(ಏ.11): ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್‌ ದೇಶದಲ್ಲಿ 7000 ಮಂದಿಗೆ ತಗುಲಿ, 238 ಮಂದಿಯನ್ನು ಬಲಿ ಪಡೆದಿರುವಾಗಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್‌ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೋನಾ ತನ್ನ ತುತ್ತತುದಿಯನ್ನು ತಲುಪಲಿದೆ. ಭಾರತದ ಶೇ.58ರಷ್ಟುಜನರು ಈ ವೈರಾಣುವಿನ ಬಾಧೆಗೆ ಒಳಗಾಗಲಿದ್ದಾರೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಅವರು ಹೇಳಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಪಂಜಾಬ್‌ ಹಾಗೂ ಇನ್ನಿತರೆ ಕೆಲವು ರಾಜ್ಯಗಳ ಶೇ.87ರಷ್ಟುಜನರು ಸೋಂಕಿತರಾಗಲಿದ್ದಾರೆ. ಜತೆಗೆ ಪಂಜಾಬ್‌ನಲ್ಲಿ ಈಗಾಗಲೇ ಕೊರೋನಾ ವೈರಸ್‌ ಸಮುದಾಯ ಹರಡುವಿಕೆಯತ್ತ ಸಾಗಿರುವ ಲಕ್ಷಣಗಳು ಕಂಡುಬಂದಿವೆ ಎಂದೂ ತಿಳಿಸಿದ್ದಾರೆ.

Tap to resize

Latest Videos

undefined

ಒಂದು ವೇಳೆ, ಅಮರೀಂದರ್‌ ಸಿಂಗ್‌ ಹೇಳಿದಂತೆಯೇ ದೇಶದ ಶೇ.58 ಜನರಿಗೆ ಕೊರೋನಾ ಬಾಧಿಸಿದರೆ ಕನಿಷ್ಠ 75 ಕೋಟಿ ನಾಗರಿಕರು ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಅಷ್ಟುಮಂದಿಗೆ ಚಿಕಿತ್ಸೆ ನೀಡುವಷ್ಟುದೇಶದಲ್ಲಿ ಸಾಮರ್ಥ್ಯ ಇಲ್ಲದೇ ಇರುವುದು ಚಿಂತೆಯನ್ನು ಮತ್ತಷ್ಟುಹೆಚ್ಚಿಸುತ್ತದೆ.

ಕೊರೋನಾ ಭೀತಿ: ರೈಲ್ವೆಯಿಂದ 80 ಸಾವಿರ ಐಸೋಲೇಷನ್‌ ಬೋಗಿ

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೀಂದರ್‌ ಸಿಂಗ್‌, ‘ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್‌)ಯ ಸಮುದಾಯ ಔಷಧ ವಿಭಾಗದ ಅಧ್ಯಯನದ ಪ್ರಕಾರ, ಸೆಪ್ಟೆಂಬರ್‌ ಮಧ್ಯ ಭಾಗದ ವೇಳೆಗೆ ವೈರಸ್‌ ತನ್ನ ಗರಿಷ್ಠ ಪ್ರಮಾಣ ತಲುಪಲಿದೆ. ಶೇ.58ರಷ್ಟುಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಪಂಜಾಬ್‌ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಶೇ.87ರಷ್ಟುಮಂದಿ ತೊಂದರೆಗೆ ಸಿಲುಕಲಿದ್ದಾರೆ. ಸೋಂಕಿತರ ಸಂಖ್ಯೆಯನ್ನು ಆದಷ್ಟುಕಡಿಮೆ ಪ್ರಮಾಣದಲ್ಲಿ ಇಡುವುದು ನಮ್ಮೆಲ್ಲರ ಕರ್ತವ್ಯ. ಈ ವಿಷಯದಲ್ಲಿ ವಿಜ್ಞಾನಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಏನು ಹೇಳುತ್ತಾರೋ ಅದನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಈವರೆಗೆ 132 ಜನರಲ್ಲಿ ಸೋಂಕು ಖಚಿತಪಟ್ಟಿದ್ದು, 11 ಜನ ಸಾವನ್ನಪ್ಪಿದ್ದಾರೆ. ವಿದೇಶದಿಂದ ಬಂದ 95000ಕ್ಕೂ ಹೆಚ್ಚು ಜನರೇ ಹೆಚ್ಚಿನ ಸೋಂಕಿನ ಮೂಲವಾಗಿದ್ದಾರೆ. ಅದನ್ನು ಹೊರತುಪಡಿಸಿದರೆ ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ಭಾಗಿಯಾಗಿದ್ದ ತಬ್ಲೀಘಿಗಳು ಸೋಂಕಿನ ಎರಡನೇ ಅತಿದೊಡ್ಡ ಮೂಲವಾಗಿದ್ದಾರೆ. ರಾಜ್ಯದ 651 ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಪೈಕಿ ಈವರೆಗೆ 636 ಜನರನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಮುದಾಯ ಹರಡುವಿಕೆ:

ಈ ನಡುವೆ ರಾಜ್ಯದಲ್ಲಿ ಈವರೆಗೆ ಪತ್ತೆಯಾದ ಸೋಂಕಿತರ ಪೈಕಿ 27 ಜನರು ಯಾವುದೇ ವಿದೇಶಕ್ಕೆ ಹೋದ ಅಥವಾ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ ಉದಾಹರಣೆ ಇಲ್ಲ. ಹೀಗಾಗಿ ಈ 27ರ ಪೈಕಿ ಬಹುತೇಕ ಪ್ರಕರಣಗಳು, ಸೋಂಕು ಹಬ್ಬುವಲ್ಲಿ ಅತ್ಯಂತ ಮಾರಕ ಎನ್ನಲಾದ ಸಾಮುದಾಯಿಕ ಸೋಂಕು ಹರಡುವಿಕೆ ಎನ್ನಬಹುದು ಎಂದು ಹೇಳಿದ್ದಾರೆ.

ರಾಜ್ಯ​ದಲ್ಲಿ 207 ಮಂದಿಗೆ ಕೊರೋನಾ: ಕೇವಲ 10 ದಿನ​ದಲ್ಲಿ ಸೋಂಕಿತರು ಡಬಲ್!

ವರದಿ ನಮ್ಮದಲ್ಲ- ಪಿಜಿಐಎಂಇಆರ್‌:

ಅಮರೀಂದರ್‌ ಸಿಂಗ್‌ ಹೇಳಿಕೆ ಸಂಚಲನಕ್ಕೆ ಕಾರಣವಾಗುತ್ತಿದ್ದಂತೆ ಪಿಜಿಐಎಂಇಆರ್‌ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿಗಳು ಉಲ್ಲೇಖಿಸಿರುವ ವರದಿ ಬಗ್ಗೆ ತನಗೆ ಮಾಹಿತಿ ಇಲ್ಲ. ತನ್ನ ಯಾವುದೇ ಇಲಾಖೆ ಇಂತಹದ್ದೊಂದು ಅಧ್ಯಯನ/ಅಂದಾಜು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರವೀನ್‌ ತುಕ್ರಾಲ್‌, ಪಿಜಿಐಎಂಇಆರ್‌ನ ಆರೋಗ್ಯ ಆರ್ಥಿಕತೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ

ಶಂಕರ್‌ ಪ್ರಿಂಜಾ ಅವರ ಅಂದಾಜನ್ನು ಅಮರೀಂದರ್‌ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.

click me!