ಮುಂದಿನ ದಿನಗಳಲ್ಲಿ ಭಾರತ-ನೇಪಾಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ವಿ.ಸೋಮಣ್ಣ

By Suvarna News  |  First Published Sep 19, 2024, 9:51 PM IST

ನೇಪಾಳದ ರಾಯಭಾರಿ ಡಾ. ಸುರೇಂದ್ರ ಥಾಪಾ ಅವರು ಮುಖ್ಯ ಅತಿಥಿ, ಕೇಂದ್ರ ರೇಲ್ವೆ ಹಾಗು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರವರನ್ನು ಸ್ವಾಗತಿಸಿ ಭಾರತ - ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು. 


ನವದೆಹಲಿ (ಸೆ.19): ಕೇಂದ್ರ ರೇಲ್ವೆ ಹಾಗು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಇಂದು ದೆಹಲಿಯಲ್ಲಿ ನೇಪಾಳದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾದರು. ನೇಪಾಳದ ರಾಯಭಾರಿ ಡಾ. ಸುರೇಂದ್ರ ಥಾಪಾ ಅವರು ಮುಖ್ಯ ಅತಿಥಿ ಸೋಮಣ್ಣರವರನ್ನು ಸ್ವಾಗತಿಸಿ ಭಾರತ - ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು. 

ಸಚಿವ ಸೋಮಣ್ಣ ಮಾತನಾಡಿ, ಭಾರತ - ನೇಪಾಳದ ಮಧ್ಯೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳಿದ್ದು ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಡಿಜಿಟಲ್ ಹಾಗೂ ಫೈನಾನ್ಸಿಯಲ್ ಕನೆಕ್ಟಿವಿಟಿ, ಜಲವಿದ್ಯುತ್, ರೈಲ್ವೆ - ರಸ್ತೆ ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ, ಭಾರತವು ನೇಪಾಳ ಜೊತೆಗಿನ ಸಂಬಂಧ - ಸಂಪರ್ಕ ಇನ್ನಷ್ಟು ಹತ್ತಿರವಾಗಿಸಲು ಉತ್ಸುಕವಾಗಿದೆ ಎಂದರು. ನೇಪಾಳದ ಜನತೆಗೆ ರಾಷ್ಟ್ರೀಯ ದಿನದ ಶುಭ ಕೋರಿದರು.

Tap to resize

Latest Videos

ಮೋದಿ ಈ ದೇಶದ ಸಂಪತ್ತು: ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಸಂಪತ್ತು ಅವರ ಆಡಳಿತದಲ್ಲಿ ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಮೋದಿಯವರ ಅಭಿವೃದ್ಧಿ ಚಿಂತನೆಗಳು, ದೂರದೃಷ್ಟಿತ್ವ ರಾಷ್ಟ್ರದ ಪ್ರಗತಿಗೆ ಪೂರಕವಾಗಿವೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಸಂಸದರ ಕಾರ್ಯಾಲಯದಲ್ಲಿ ಏರ್ಪಾಟಾಗಿದ್ದ ವಿವಿಧ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಚಿವ ವಿ.ಸೋಮಣ್ಣ, ಮೋದಿಯವರು ಈ ದೇಶಕ್ಕೆ ನೀಡಿದ ಕೊಡುಗೆ, ದೇಶದ ಅಭಿವೃದ್ಧಿಗೆ ಅವರ ಚಿಂತನೆಗಳು, ದೂರದೃಷ್ಟಿ ನೋಟವನ್ನು ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಉದ್ದೇಶದಿಂದ ಮೋದಿಯವರು ನಡೆದು ಬಂದ ದಾರಿ ಕುರಿತ ಪುಸ್ತಕವನ್ನು ಕನ್ನಡದಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಈ ಸಂಬಂಧ ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿದ್ದೇನೆ, ನೀವು ಕಂಡಂತೆ ಮೋದಿಯವರ ಆದರ್ಶ ಕುರಿತು ಲೇಖನಗಳನ್ನು ನೀವೂ ಬರೆಯಬಹುದು, 3-4 ತಿಂಗಳಲ್ಲಿ ಪುಸ್ತಕ ಸಿದ್ಧಪಡಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಶೃಂಗೇರಿ ಬಳಿಕ ಹೊರನಾಡಲ್ಲೂ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್ ಕೋಡ್ ಜಾರಿ

5 ಪಂಚಾಯ್ತಿ ದತ್ತು ಸ್ವೀಕಾರ: ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಅವಶ್ಯಕತೆಗಳನ್ನು ಕೊಡುವುದು ಸರ್ಕಾರದ ಕರ್ತವ್ಯ ಎಂದು ನಂಬಿರುವ ಮೋದಿಯರು ಈ ದೇಶದ ಅಭಿವೃದ್ಧಿ ಹರಿಕಾರ. ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ಅಂಗನವಾಡಿ, ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲು ಪ್ರಧಾನಿ ಮೋದಿ ಸರ್ಕಾರ ಬದ್ಧವಾಗಿದೆ. ಇದೇ ಪ್ರೇರಣೆಯಿಂದ ತಾವು ತುಮಕೂರು ನಗರ ಸುತ್ತಲಿನ ಐದು ಗ್ರಾಮ ಪಂಚಾಯ್ತಿಗಳನ್ನು ದತ್ತು ಪಡೆದಿದ್ದು, ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಬೆಳಗುಂಬ, ಸ್ವಾಂದೇನಹಳ್ಳಿ, ಗೂಳೂರು, ಹೆಗ್ಗೆರೆ, ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ದತ್ತು ಪಡೆದಿರುವುದಾಗಿ ಸಚಿವ ವಿ.ಸೋಮಣ್ಣ ಪ್ರಕಟಿಸಿದರು.

click me!