Explainer: ಶೇ.90 ರಷ್ಟು ಹಿಂದೂಗಳೇ ಇರುವ ಸಂಪೂರ್ಣ ಗ್ರಾಮವೇ ತಮ್ಮದು ಎಂದ ವಕ್ಫ್‌ ಬೋರ್ಡ್‌, ಏನಿದು ಇಡೀ ವಿವಾದ!

By Santosh Naik  |  First Published Sep 19, 2024, 7:44 PM IST

ಬಿಹಾರದ ಗೋವಿಂದ್​​ಪುರದಲ್ಲಿ ಹಿಂದೂ ಬಹುಸಂಖ್ಯಾತ ಗ್ರಾಮವನ್ನು ತಮ್ಮದೆಂದು ವಕ್ಫ್‌ ಬೋರ್ಡ್‌ ಹೇಳಿಕೊಂಡಿದ್ದು, ದೇಶಾದ್ಯಂತ ವಕ್ಫ್ ಆಸ್ತಿಗಳನ್ನು ಸುತ್ತುವರೆದಿರುವ ವಿವಾದಗಳನ್ನು ಮತ್ತೆ ತೀವ್ರಗೊಳಿಸಿದೆ. ಈ ಲೇಖನವು ವಕ್ಫ್ ಕಾನೂನಿನಲ್ಲಿನ ವಿವಾದಾತ್ಮಕ ಅಂಶಗಳು, ಕರ್ನಾಟಕದಲ್ಲಿ ವರದಿಯಾಗಿರುವ ಹಗರಣಗಳು ಮತ್ತು ದೇಶಾದ್ಯಂತ ವಕ್ಫ್ ಬೋರ್ಡ್‌ಗಳ ಭೂ ಕಬಳಿಕೆ ಪ್ರಕರಣಗಳನ್ನು ಪರಿಶೀಲಿಸುತ್ತದೆ.


ಬೆಂಗಳೂರು (ಸೆ.19): ದೇಶದಲ್ಲಿ ತುಘಲಕ್‌ ಕಾನೂನಿಗಿಂತ ಭೀಕರವಾದ ವಕ್ಫ್‌ ಬೋರ್ಡ್‌ ಕಾನೂನಿಗೆ ಶೀಘ್ರವಾಗಿ ತಿದ್ದುಪಡಿ ಬೇಕಾಗಿದೆ. ಇದರ ಚರ್ಚೆ ಜೋರಾಗುತ್ತಿರುವ ನಡುವೆಯೇ, ಬಿಹಾರದಲ್ಲಿ ಶೇ. 90ರಷ್ಟು ಹಿಂದುಗಳೇ ಇರುವ ಇಡೀ ಊರು ತನ್ನದು ಎಂದು ವಕ್ಫ್‌ ಬೋರ್ಡ್‌ ಹೇಳುತ್ತಿದೆ. ಪಾಟ್ನಾದಿಂದ 30 ಕಿ.ಮೀ ದೂರದಲ್ಲಿ ಗೋವಿಂದ್​​ಪುರ ಗ್ರಾಮ ತನ್ನದು ಎಂದು ಹೇಳಿದೆ. ಗೋವಿಂದ್​ಪುರದ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು,   ಗ್ರಾಮದಲ್ಲಿ ಶೇಕಡಾ 95ರಷ್ಟು ಹಿಂದೂಗಳೇ ವಾಸಿಸುತ್ತಿದ್ದಾರೆ. ಗೋವಿಂದ್​ಪುರದ ಏಳು ಗ್ರಾಮಸ್ಥರ ಮೇಲೆ ವಕ್ಫ್​ ನೋಟಿಸ್​ ಜಾರಿ ಮಾಡಿದೆ. ಇಡೀ ಊರೇ ನಮ್ಮದು ಎನ್ನುತ್ತಿರುವ ವಕ್ಫ್‌, ಜಾಗ ಖಾಲಿ ಮಾಡಲೂ ಡೆಡ್​ಲೈನ್ ಕೂಡ ನೀಡಿದೆ. ನೋಟಿಸ್​ ಬೆನ್ನಲ್ಲೇ ಬಿಜೆಪಿ ನಿಯೋಗ ಭೇಟಿ, ಸಮಾಲೋಚನೆಯನ್ನೂ ನಡೆದಿದೆ. 1950ರಿಂದ ಗೋವಿಂದಪುರ ಗ್ರಾಮ ನಮ್ಮ ಸ್ವಾಧೀನದಲ್ಲಿದೆ. ಈ ಭೂಮಿ ನಮ್ಮದು. 30 ದಿನದಲ್ಲಿ ಗ್ರಾಮ ಖಾಲಿ ಮಾಡ್ಬೇಕು ಎಂದು ವಕ್ಫ್‌ ಬೋರ್ಡ್‌ ವಾದ ಮಾಡಿದೆ. '1910ರಿಂದಲೂ ನಮ್ಮ ಪೂರ್ವಜರ ಹೆಸರಲ್ಲಿ ದಾಖಲೆ ಇವೆ. ಹೈಕೋರ್ಟ್​ನಲ್ಲೂ ನಮ್ಮ ಪರವಾಗಿಯೇ ತೀರ್ಪು ಬಂದಿದೆ' ಎಂದು ಗ್ರಾಮಸ್ಥರು ವಾದ ಮಾಡಿದ್ದಾರೆ. ದೇಶದಲ್ಲಿರುವ ವಕ್ಫ್‌ ಆಸ್ತಿಯನ್ನು ಲೆಕ್ಕ ಮಾಡುವುದಾದರೆ, 2006ರಲ್ಲಿ 1.2 ಲಕ್ಷ ಎಕರೆ ವಕ್ಫ್‌ ಆಸ್ತಿ ಇದ್ದರೆ, 2009ರಲ್ಲಿ ಇದು 4 ಲಕ್ಷ ಎಕರೆಗೆ ಏರಿಕೆಯಾಗಿತ್ತು. 2024ರಲ್ಲಿ 9.4 ಲಕ್ಷ ಎಕರೆಗೆ ಏರಿಕೆಯಾಗಿದೆ.

ಇನ್ನು 1995ರ ವಕ್ಫ್‌ ಕಾಯ್ದೆ ಹೇಳೋದೇನು ಅನ್ನೋದನ್ನ ನೋಡೋದಾದರೆ, ಹಲವು ರೀತಿಯ ವಕ್ಫ್​ ಆಸ್ತಿ ಮುಸ್ಲಿಂ ಕಾನೂನಿನಡಿ ಪರಿಗಣನೆ ಮಾಡಲಾಗುತ್ತದೆ. ವಕ್ಫ್ ಆಸ್ತಿಗಳ ಸರ್ವೆಗೆ ಸರ್ವೆ ಕಮಿಷನರ್​ಗಳ ನೇಮಕ ಮಾಡಲಾಗ್ತಿತ್ತು. ಗೆಜೆಟ್​ ನೋಟಿಫಿಕೇಶನ್​ ಮೂಲಕ ವಕ್ಫ್​ ಆಸ್ತಿ ಗುರುತಿಸಲಾಗುತ್ತದೆ. ವಕ್ಫ್​ ಕಮಿಟಿಯಲ್ಲಿ ಮಹಿಳಾ ಸದಸ್ಯರಿಗೆ ಅವಕಾಶ ಇರಲಿಲ್ಲ. ಆಸ್ತಿ ವಿವಾದವನ್ನು ಕೋರ್ಟ್​ನಲ್ಲಿ ಪ್ರಶ್ನೆ ಮಾಡುವಂತಿಲ್ಲ. ವಕ್ಫ್​ ಮಂಡಳಿಯಲ್ಲಿ ಅಧಿಕಾರಿಗಳು ಮುಸ್ಲಿಮರಿಗಷ್ಟೇ ಅವಕಾಶ. ದಾಖಲೆಗಳು ಇಲ್ಲದಿದ್ದರೂ ಯಾವುದೇ ಆಸ್ತಿ ಮೇಲೆ ಹಕ್ಕು ಸಾಧಿಸಬಹುದು. ಸುನ್ನಿ ಮತ್ತು ಶಿಯಾ ಎಂಬ ಎರಡು ಪ್ರತ್ಯೇಕ ವಕ್ಫ್​ಬೋರ್ಡ್​ಗಳಿಗೆ ಅವಕಾಶ ನೀಡಲಾಗಿದೆ. ವಕ್ಫ್​ ಬೋರ್ಡ್​ಗಳು ಶೇ.7ರಷ್ಟು ತೆರಿಗೆ ಪಾವತಿಸಬೇಕು ಹಾಗೂ ಆಸ್ತಿ ವಿವಾದ ವಕ್ಫ್ ಟ್ರಿಬ್ಯುನಲ್​ನಲ್ಲೇ ಇತ್ಯರ್ಥವಾಗಬೇಕಿತ್ತು ಎಂದು ಹೇಳಲಾಗಿದೆ.

Tap to resize

Latest Videos

undefined

ಇನ್ನು ಕೇಂದ್ರ ಸರ್ಕಾರ  ತಂದಿರುವ ವಕ್ಫ್ ತಿದ್ದುಪಡಿ ಮಸೂದೆ- 2024ರಲ್ಲಿ,  ಇಸ್ಲಾಂ ಅನುಸರಿಸುವ ವ್ಯಕ್ತಿ ಎಂದು ಪರಿಗಣಿಸಲಾಗಿದ್ದು, ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ. ಸರ್ವೆ ಕಮಿಷನರ್ ಪಾತ್ರ ಇನ್ಮುಂದೆ ಜಿಲ್ಲಾಧಿಕಾರಿಗಳು ನಿರ್ವಹಿಸಲಿದ್ದಾರೆ. ವಕ್ಫ್​ ಆಸ್ತಿ ಪಾರದರ್ಶಕತೆಗಾಗಿ ಕೇಂದ್ರದ ಪೋರ್ಟಲ್​ನಲ್ಲಿ ನೋಂದಣಿ ಮಾಡಬೇಕು. ವಕ್ಫ್​ ಕಮಿಟಿಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯ ಕಡ್ಡಾಯ ಮಾಡಲಾಗಿದೆ. ಆಸ್ತಿ ವಿವಾದ ಕೋರ್ಟ್​ನಲ್ಲಿ ಪ್ರಶ್ನಿಸಲು ಅವಕಾಶ ನೀಡಲಾಗಿದೆ. ಇನ್ಮುಂದೆ ವಕ್ಫ್​ ಬೋರ್ಡ್​ನಲ್ಲಿ ಮುಸ್ಲಿಮೇತರ ಸದಸ್ಯರಿಗೂ ಅವಕಾಶ ಇರಲಿದೆ. 7. ಸೂಕ್ತ ದಾಖಲೆಗಳು ಇದ್ದರೆ ಮಾತ್ರ ಹಕ್ಕು ಸಾಧಿಸಲು ಅವಕಾಶ ನೀಡಲಾಗುತ್ತದೆ. ಇನ್ಮುಂದೆ ಬೊಹ್ರಾಸ್​, ಅಘಾಖಾನಿ ಮುಸ್ಲಿಮರಿಗಾಗಿ ಪ್ರತ್ಯೇಕ ಬೋರ್ಡ್​ ಇರಲಿದೆ. ವಕ್ಫ್​ ಬೋರ್ಡ್​ಗಳು ಶೇ.5ರಷ್ಟು ತೆರಿಗೆ ಪಾವತಿಸಬೇಕು ಹಾಗೂ  ಟ್ರಿಬ್ಯುನಲ್ ಆದೇಶ ಪ್ರಶ್ನಿಸಿ 90 ದಿನದ ಒಳಗೆ ಕೋರ್ಟ್​ಗೆ ಹೋಗಬಹುದು ಎಂದು ತಿಳಿಸಲಾಗಿದೆ.

ವಕ್ಫ್ ಆಸ್ತಿ ಅಂದ್ರೆ ಏನು..?: ಇಸ್ಲಾಂ ಪ್ರಕಾರ ವಕ್ಫ್ ಆಸ್ತಿ ಅಂದ್ರೆ ದೇವರಿಗೆ ಸೇರಿದ ಆಸ್ತಿ. ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಮತ್ತು ದಾನದ ಉದ್ದೇಶಕ್ಕೆ ನೀಡಿದ ಆಸ್ತಿ ಇದಾಗಿರುತ್ತದೆ. ಈ ಆಸ್ತಿಗಳ ನಿರ್ವಹಣೆ ಅಧಿಕಾರ ರಾಜ್ಯ ವಕ್ಫ್ ಬೋರ್ಡ್​ಗಳಿಗೆ ಇರುತ್ತದೆ. ವಕ್ಫ್ ಬೋರ್ಡ್​ಗಳಿಗೆ ಭೂಮಿ ಸ್ವಾದೀನ, ಉಳಿಸಿಕೊಳ್ಳುವ, ವರ್ಗಾಯಿಸೋ ಅಧಿಕಾರ ಕೂಡ ಇರುತ್ತದೆ. ವಕ್ಫ್ ಆಸ್ತಿ ಮೂಲಕ ಮುಸ್ಲಿಮರ ಸಮಸ್ಯೆಗಳ ಪರಿಹಾರಕ್ಕೆ, ಸಮಾಜ ಸೇವೆಗೆ ಬಳಸಬೇಕು. ವಕ್ಫ್ ಆಸ್ತಿ ನಿರ್ವಹಣೆ ಅಧಿಕಾರ ‘ಮುತವ್ವಲಿ’ ಹೆಸರಲ್ಲಿ ಧರ್ಮಗುರು ನೇಮಕವಾಗಲಿದೆ. ದೇಶದಲ್ಲಿ 32 ವಕ್ಫ್ ಬೋರ್ಡ್​ಗಳಿದ್ದು ಸುಮಾರು 200 ವ್ಯಕ್ತಿಗಳ ಹಿಡಿತದಲ್ಲಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಶಿಯಾ ವಕ್ಫ್ ಬೋರ್ಡ್​ಗಳಿವೆ.

ವಕ್ಫ್ ಕಾನೂನು-1995 ಹೇಳೋದೇನು..?: ವಕ್ಫ್ ಕಾಯ್ದೆ 1995- 40(3) ರ ಪ್ರಕಾರ ವಕ್ಫ್​ ಬೋರ್ಡ್​ಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಯಾವುದೇ ಆಸ್ತಿ ವಕ್ಫ್​ಬೋರ್ಡ್​ಗೆ ಸೇರಿದ್ದು ಅನ್ನಿಸಿದರೆ ಹಕ್ಕು ಸಾಧಿಸಬಹುದಾಗಿದೆ. ಯಾವುದೇ ಆಸ್ತಿ, ಭೂಮಿ ತನ್ನದು ಎಂದು ವಕ್ಫ್ ಬೋರ್ಡ್​ಗೆ ಎನ್ನಿಸಿದರೆ ರಿಜಿಸ್ಟ್ರೇಷನ್ ಕೂಡ ಮಾಡಿಕೊಳ್ಳಬಹುದು. ವಕ್ಫ್ ಕಾನೂನಿನ ಅಡಿಯಲ್ಲಿ ವಕ್ಫ್ ಆಸ್ತಿ/ಭೂಮಿ ಎಂದು ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ತನ್ನ ಆಸ್ತಿ/ಭೂಮಿ ಎಂದು ವಕ್ಫ್​ಗೆ ಅನ್ನಿಸಿದರೆ ಬೇರೆಯವರಿಗೆ ರಿಜಿಸ್ಟರ್ ಆಗದಂತೆ ನೋಟಿಸ್ ಕೂಡ ನೀಡಬಹುದು. ಸೆಕ್ಷನ್ 54ರ ಪ್ರಕಾರ ಆಸ್ತಿ ಮೇಲೆ ವಕ್ಫ್​ ಬೋರ್ಡ್ ಸಿ.ಇ.ಓ ತನಿಖೆ ​ಆರಂಭಿಸಬಹುದು. ವಕ್ಫ್ ಆಸ್ತಿ ಎಂದು ಸಿ.ಇ.ಓಗೆ ಅನ್ನಿಸಿದರೆ ವಕ್ಫ್ ಟ್ರಿಬ್ಯುನಲ್​ ಮೂಲಕ ತೆರವಿಗೆ ಆದೇಶವನ್ನೂ ನೀಡಬಹುದು. 45 ದಿನಗಳಲ್ಲಿ ಮೂಲ ಮಾಲೀಕರು ತೆರವು ಮಾಡದಿದ್ದರೆ ಆಸ್ತಿಯನ್ನ ವಶಕ್ಕೆ ಪಡೆದುಕೊಳ್ಳಬಹುದು. ಸೆಕ್ಷನ್ 3 ಅನುಸಾರ ವಕ್ಫ್ ಆಸ್ತಿ ವಶಕ್ಕೆ ಪಡೆದಿದ್ದನ್ನ ದೇಶದ ಯಾವುದೇ ಕೋರ್ಟ್​ನಲ್ಲಿ ಪ್ರಶ್ನಿಸುವಂತಿಲ್ಲ. ವಕ್ಫ್ ಬೋರ್ಡ್ ಟ್ರಿಬ್ಯುನಲ್​ ನಲ್ಲೇ ಕಾನೂನು ಪ್ರಕಾರ ಹೋರಾಟ ಮಾಡಬೇಕು. ಅದರೊಂದಿಗೆ ಸೆಕ್ಷನ್ 85 ಅನುಸಾರ ಮೂಲ ಮಾಲೀಕ ತಾನೇ ಆಸ್ತಿಯ ಒಡೆಯ ಎಂದು ಸಾಬೀತುಪಡಿಸಿಕೊಳ್ಳಬೇಕು ಎನ್ನಲಾಗಿದೆ.

News Hour: ದೇಶದಲ್ಲಿ ನಿಲ್ಲದ ವಕ್ಫ್​ ಮಂಡಳಿ ತುಘಲಕ್​ ದರ್ಬಾರ್!

ಕರ್ನಾಟಕದಲ್ಲಿ ವಕ್ಫ್ ಹಗರಣ..!: ರಾಜ್ಯದಲ್ಲಿ 2 ಲಕ್ಷ ಕೋಟಿ ಮೌಲ್ಯದ ಆಸ್ತಿ ದುರ್ಬಳಕೆಯಾಗಿದೆ ಪ್ರಭಾವಿಗಳಿಂದ 29 ಸಾವಿರ ಎಕರೆ ವಕ್ಫ್ ಭೂಮಿ ಕಬಳಿಕೆಯಾಗಿದೆ. ಮುಸ್ಲಿಂ ರಾಜಕೀಯ ನಾಯಕರುಗಳಿಂದಲೇ ವಕ್ಫ್ ಹಗರಣ ನಡೆದಿದೆ. ವಕ್ಫ್ ಭೂಮಿ ಕಬಳಿಸಿ ಮುಸ್ಲಿಂ ರಾಜಕಾರಣಿಗಳು ಬಳಸಿಕೊಂಡಿದ್ದಾರೆ ಎಂದು 2012ರಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿಯಲ್ಲಿ ತಿಳಿಸಲಾಗಿದೆ.

ವಕ್ಫ್ ಬೋರ್ಡ್ ಹೆಸರಲ್ಲಿ ಅಕ್ರಮ ತಡೆಗೆ ತಿದ್ದುಪಡಿ ಮಸೂದೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ವಕ್ಫ್ ಬೋರ್ಡ್​ಗಳಿಂದ ಭೂ ಕಬಳಿಕೆ:

ಕೊಲ್ಹಾಪುರ್, ಮಹಾರಾಷ್ಟ್ರ: ಮೇ-2024

ಮಹಾದೇವ ದೇಗುಲದ ಆಸ್ತಿ ಮೇಲೆ ವಕ್ಫ್ ಬೋರ್ಡ್ ಕಣ್ಣು. ವಾಡನಾಗೆ ಗ್ರಾಮದ ಭೂಮಿಗೆ ವಕ್ಫ್​ಬೋರ್ಡ್​ನಿಂದ ಹಕ್ಕು ಮಂಡನೆ

ಸೂರತ್, ಗುಜರಾತ್: ನವೆಂಬರ್-2021
ಸೂರತ್ ಮುನಿಸಿಪಲ್ ಕಾರ್ಪೊರೇಷನ್ ಆಫೀಸ್​ ಮೇಲೆ ಹಕ್ಕು ಮಂಡನೆ

ಈರೋಡ್, ತಮಿಳುನಾಡು: ಆಗಸ್ಟ್ 2023
ಅನಂಗಕೌಂದನ್ ಪುಥುರ್​ ಗ್ರಾಮದ ಭೂಮಿ ಮೇಲೆ ಹಕ್ಕು ಮಂಡನೆ

ರಾಣಿಪೇಟ್, ತಮಿಳುನಾಡು: ಜನವರಿ 2023
50 ಎಕರೆಗೂ ಹೆಚ್ಚಿನ ಕೃಷಿ ಭೂಮಿ ಮೇಲೆ ಹಕ್ಕು ಮಂಡನೆ. ಆರ್ಕಾಟ್​ನ ವೇಯ್​ಪುರ್​ ಗ್ರಾಮದ ಭೂಮಿ ಮಾಲೀಕರಿಗೆ ನೋಟಿಸ್

ತಿರುಚನಾಪಳ್ಳಿ, ತಮಿಳುನಾಡು: ಸೆಪ್ಟಂಬರ್ 2022
7 ಗ್ರಾಮದ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹಕ್ಕು ಮಂಡನೆ. 1500 ವರ್ಷದ ದೇವಸ್ಥಾನದ ಆಸ್ತಿಯೂ ತನ್ನದೇ ಎಂದ ವಕ್ಫ್ ಬೋರ್ಡ್

ಗುಜರಾತ್-2022
ಗುಜರಾತ್ ಕರಾವಳಿಯ 2 ಸಣ್ಣ ದ್ವೀಪಗಳ ಮೇಲೆ ಹಕ್ಕು ಮಂಡನೆ

click me!