ಮೋದಿ ಸರ್ಕಾರ ಸೋಂಕು ನಿಯಂತ್ರಿಸಿದ್ದು ಹೇಗೆ?| ಜಾಗತಿಕ ಕುತೂಹಲಕ್ಕೆ ಉತ್ತರ ನೀಡಿದ ಅಮೆರಿಕದ ವಿಜ್ಞಾನಿ| ಸರ್ಕಾರ ಕೈಗೊಂಡ 9 ನಿರ್ಧಾರದಿಂದ ಸೋಂಕು ನಿಯಂತ್ರಣ
ನವದೆಹಲಿ(ಮಾ.03): ಆರಂಭದಲ್ಲಿ ಕೊರೋನಾ ಸೋಂಕು ವ್ಯಾಪಕವಾದರೂ, ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರಗಳು ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನ ಸ್ಥಾನದಲ್ಲಿರುವ, ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ದೇಶವೊಂದರಲ್ಲಿ ಇಂಥದ್ದೊಂದು ದೊಡ್ಡ ಸಾಂಕ್ರಾಮಿಕ ರೋಗ ನಿಯಂತ್ರಣ ತಂದ ಭಾರತ ಸರ್ಕಾರ ಸಾಧನೆ ಸಹಜವಾಗಿಯೇ ವಿಶ್ವದ ಹಲವು ದೊಡ್ಡ ದೇಶಗಳ ಪ್ರಶಸಂಗೆ ಪಾತ್ರವಾಗಿತ್ತು.
ಹಾಗಿದ್ದರೆ, ಅಷ್ಟಕ್ಕೂ ಸೋಂಕು ನಿಯಂತ್ರಣಕ್ಕೆ ಭಾರತ ಸರ್ಕಾರ ಮಾಡಿದ ಯಾವೆಲ್ಲಾ ನಿರ್ಧಾರಗಳು ಫಲಕೊಟ್ಟವು ಎಂಬುದರ ಬಗ್ಗೆ ಅಮೆರಿಕದ ವಿಜ್ಞಾನಿಯೊಬ್ಬರು ವಿಶ್ಲೇಷಣೆ ಮಾಡಿ ಮಾಹಿತಿ ನೀಡಿದ್ದಾರೆ. ಅಮೆರಿಕದ ಸಾಂಕ್ರಮಿಕ ರೋಗಗಳ ವಿಶ್ಲೇಷಕ ಹಾಗೂ ವಿಜ್ಞಾನಿ ಯನೀರ್ ಬಾರ್ ಯಮ್ ಅವರು ಕೆಲವೊಂದಿಷ್ಟುಕಾರಣಗಳನ್ನು ನೀಡಿದ್ದಾರೆ. ಅವು ಇಂತಿವೆ...
undefined
- ಕೊರೋನಾ ಸೋಂಕು ಆರಂಭವಾದ ಬೆನ್ನಲ್ಲೇ ನಗರಗಳತ್ತ ವಲಸೆಗೆ ಬ್ರೇಕ್
- ಲಾಕ್ಡೌನ್ ಘೋಷಿಸಿ ಶಾಲೆ-ಕಾಲೇಜುಗಳ ಬಂದ್, ಗುಂಪು ಸೇರುವಿಕೆಗೆ ಕಡಿವಾಣ
- ಆಗ್ಗಾಗ್ಗೆ ಜನರೊಂದಿಗೆ ಸಂವಾದ, ಸೋಂಕಿತರ ತ್ವರಿತ ಪತ್ತೆ, ಅವರಿಗೆ ಚಿಕಿತ್ಸೆ ವ್ಯವಸ್ಥೆ
- ಜನರಿಗೆ ಅಗತ್ಯವಿರುವ ಮಾಸ್ಕ್ಗಳು, ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ಉತ್ಪಾದನೆ
- ದೇಶದಲ್ಲಿ ಒಂದೇ ಇದ್ದ ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರ ಇದೀಗ 2300ಕ್ಕೆ ಏರಿಕೆ
- ಸೋಂಕಿಗೆ ತುತ್ತಾದವರನ್ನು ತ್ವರಿತವಾಗಿ ಪತ್ತೆ ಹಚ್ಚಿ, ಅವರಿಗೆ ಕ್ವಾರಂಟೈನ್ನಲ್ಲಿಡುವಿಕೆ
-ಮಾಸ್ಕ್ ಧರಿಸುವಂತೆ ಕಾಲರ್ಟ್ಯೂನ್ ಮೂಲಕ ಅರಿವು ಮತ್ತು ಎಚ್ಚರಿಕೆಯ ಸಂದೇಶ
- ಜನರ ಸಂಚಾರಕ್ಕೆ ಹೇರಲಾದ ನಿರ್ಬಂಧದಿಂದ ಸಮುದಾಯಕ್ಕೆ ಹಬ್ಬದ ಸೋಂಕು
- ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನವೂ ಸೋಂಕು ನಿಯಂತ್ರಣಕ್ಕೆ ಕೊಡುಗೆ